Advertisement

ಪ್ರಧಾನಿಯನ್ನು ನರಹಂತಕನೆನ್ನುವುದು ಅಸಂವಿಧಾನಿಕವಲ್ಲವೇ..? : ಸಿ.ಟಿ ರವಿ

02:56 PM May 14, 2021 | Team Udayavani |

ಚಿಕ್ಕಮಗಳೂರು : ನ್ಯಾಯಧೀಶರು ಕೂಡ ತಾಂತ್ರಿಕ ಸಮಿತಿಯ ವರದಿ ಆಧರಿಸಿ ನಿರ್ದೇಶನ ಕೊಡುತ್ತಾರೆ. ನಾನು ನ್ಯಾಯಧೀಶರು ಸರ್ವಜ್ಞರಲ್ಲವೆಂದಷ್ಟೇ ಹೇಳಿದ್ದೇನೆ ಎಂದು  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

Advertisement

ಇದನ್ನೂ ಓದಿ : ಸೋಂಕಿತ ಮಹಿಳೆ ಸಾವು : ಸಂಬಂಧಿಕರಿಂದ ಆಸ್ಪತ್ರೆಯಲ್ಲಿ ದಾಂಧಲೆ

ನ್ಯಾಯಧೀಶರೆಲ್ಲಾ ಸರ್ವಜ್ಞರಲ್ಲ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ರವಿ, ಸುಪ್ರೀಂಕೋರ್ಟ್ ಹೇಳಿಯೇ ಟೆಕ್ನಿಕಲ್ ಕಮಿಟಿ ನೇಮಿಸಿದೆ ಎಂದಿದ್ದೇನೆ. ನನ್ನ ಹೇಳಿಕೆಯಲ್ಲಿ ಅಗೌರವ, ಅಪನಂಬಿಕೆಯ ಹುಟ್ಟಿಸುವ ಹೇಳಿಕೆ ಏನಿದೆ..? ಸರ್ವಜ್ಞರಲ್ಲ ಎನ್ನುವುದು ನಿಂದನೆಯೇ, ಟೀಕೆಯೇ.. ಏನೂ ಅಲ್ಲ. ಜಗದ 780 ಕೋಟಿ ಜನರಲ್ಲಿ ಎಲ್ಲಾ ತಿಳಿದ ಸರ್ವಜ್ಞರಿಲ್ಲ ಎಂದು ಹೇಳಿದ್ದಾರೆ.

ಇನ್ನು,  ಹೆಚ್ಚು ತಿಳಿದವರರಬಹುದು, ನನ್ನಂಥ ಅಲ್ಪ ತಿಳಿದವರಿರಬಹುದು, ಸರ್ವಜ್ಞರಿಲ್ಲ. ಪ್ರಧಾನಿಯನ್ನು ನರಹಂತಕ ಎಂದು ಕರೆಯುತ್ತಾರೆ, ಅದು ಅಸಂವಿಧಾನಿಕ ಪದ ಅಲ್ಲವೇ..?   ಅಧಿಕೃತ ಪಕ್ಷಗಳ ಸಾಮಾಜಿಕ ಮಾಧ್ಯಮಗಳಲ್ಲಿ ಯಮನ ರೂಪದಲ್ಲಿ ತೋರಿಸಿದ್ದರು, ಅದು ಸರಿಯೇ..?  ನನ್ನ ಒಂದೊಂದು ಶಬ್ಧಕ್ಕೂ ನಾನು ಕಮಿಟಿಡ್ ಇದ್ದೇನೆ, ಯಾರೂ ತಪ್ಪು ಗ್ರಹಿಸಬಾರದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಬಾಲಗಂಗಾಧರನಾಥ ಸ್ವಾಮೀಜಿ ಕಂಚಿನ ಪ್ರತಿಮೆ ಅನಾವರಣ ಮಾಡಿದ ವಿ ಸೋಮಣ್ಣ

Advertisement
Advertisement

Udayavani is now on Telegram. Click here to join our channel and stay updated with the latest news.

Next