Advertisement
ಇಂಥ ನೋವು ಸಹಜ‘ಪ್ರಸಕ್ತ ಋತುವಿನಲ್ಲಿ ನಾನು ಬಹಳಷ್ಟು ಬೌಲಿಂಗ್ ನಡೆಸಿದ್ದೇನೆ. ವರ್ಷಕ್ಕೆ ಒಂದೆರಡು ಸಲ ಇಂಥ ನೋವು ಕಾಡುವುದು ಸಹಜ. ಈಗಲೂ ನೋವಿದೆ. ಟೇಪ್ ಸುತ್ತಿ ಬೌಲಿಂಗ್ ನಡೆಸುವುದಾದರೆ ಸಮಸ್ಯೆ ಕಾಡದು. ಆದರೆ ಇದಕ್ಕೆ ಕ್ರಿಕೆಟಿನ ನೀತಿ ನಿಯಮಾವಳಿ ಅಡ್ಡ ಬರುತ್ತದೆ. ಕಳೆದ ಸಲ ಭಾರತಕ್ಕೆ ಬಂದಾಗಲೂ ಇದೇ ಸಮಸ್ಯೆ ಎದುರಾಗಿತ್ತು. ಆದರೆ ಅಂದಿಗಿಂತ ಈ ಸಲ ಎಷ್ಟೋ ವಾಸಿ. ರಾಂಚಿ ಟೆಸ್ಟ್ ಆಡುವುದನ್ನು ನಾನೀಗ ಎದುರು ನೋಡುತ್ತಿದ್ದೇನೆ…’ ಎಂದು ಲಿಯೋನ್ ಹೇಳಿದ್ದಾರೆ.