ಢಾಕಾ: ಆಸ್ಟ್ರೇಲಿಯಾದ ಯುವ ವೇಗಿ ನಥನ್ ಎಲಿಸ್ ಅವರು ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಈ ದಾಖಲೆ ಬರೆದ ವಿಶ್ವದ ಏಕೈಕ ಬೌಲರ್ ಎಂಬ ಖ್ಯಾತಿಗೆ ನಥನ್ ಎಲಿಸ್ ಪಾತ್ರರಾಗಿದ್ದಾರೆ.
ಶುಕ್ರವಾರ ಬಾಂಗ್ಲಾದೇಶ ವಿರುದ್ಧ ನಡೆದ ಮೂರನೇ ಟಿ 20 ಪಂದ್ಯದಲ್ಲಿ ನಥನ್ ಎಲಿಸ್ ಈ ಸಾಧನೆ ಮಾಡಿದ್ದಾರೆ. ಬಾಂಗ್ಲಾ ಇನ್ನಿಂಗ್ಸ್ ನ ಅಂತಿಮ ಓವರ್ ಎಸೆದ ನಥನ್ ಎಲಿಸ್ ಕೊನೆಯ ಮೂರು ಎಸೆತದಲ್ಲಿ ಮೂರು ವಿಕೆಟ್ ಪಡೆದರು.
ಇದನ್ನೂ ಓದಿ:ನಿರ್ದೇಶಕನ ಜೊತೆ ಮಂಚ ಏರಲು ನಿರಾಕರಿಸಿದ್ದಕ್ಕೆ ಅವಕಾಶಗಳು ಕಡಿಮೆಯಾದವು
ನಥನ್ ಎಲಿಸ್ ಎಸೆದ 20ನೇ ಓವರ್ ನ ನಾಲ್ಕನೇ ಎಸೆತದಲ್ಲಿ ಮೊಹಮದುಲ್ಲಾ ಬೌಲ್ಡ್ ಆದರು. ಐದನೇ ಎಸೆತದಲ್ಲಿ ಮುಸ್ತಫಿಜುರ್ ರೆಹಮಾನ್ ಡೀಪ್ ಮಿಡ್ ವಿಕೆಟ್ ನಲ್ಲಿ ಮಿಚೆಲ್ ಮಾರ್ಶ್ ಗೆ ಕ್ಯಾಚಿತ್ತು ಔಟಾದರು. ಕೊನೆಯ ಎಸೆತದಲ್ಲಿ ಮೆಹದಿ ಹಸನ್ ಅವರು ಆಸ್ಟನ್ ಆಗರ್ ಗೆ ಕ್ಯಾಚಿತ್ತು ಔಟಾದರು. ಇದರೊಂದಿಗೆ ನಥನ್ ಎಲಿಸ್ ಹ್ಯಾಟ್ರಿಕ್ ವಿಕೆಟ್ ಪಡೆದರು.
ಬಾಂಗ್ಲಾದೇಶ ತಂಡ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದರೆ, ಆಸ್ಟ್ರೇಲಿಯಾ ತಂಡ ಕೇವಲ 117 ರನ್ ಗಳಿಸಲಷ್ಟೇ ಶಕ್ತವಾಯಿತು. ಬಾಂಗ್ಲಾದೇಶ 10 ರನ್ ಗಳ ಅಂತರದ ಜಯ ಸಾಧಿಸಿತು. ಸತತ ಮೂರು ಪಂಧ್ಯ ಗೆದ್ದ ಬಾಂಗ್ಲಾದೇಶ ಸರಣಿ ಜಯಿಸಿತು.