Advertisement
ಸುಳ್ಯದ ಏನೆಕಲ್‌ನ ಯತಿರಾಜ್ (23) ಮತ್ತು ಬೀದಿಗುಡ್ಡೆಯ ನಿತಿನ್(25) ದಾಂಧಲೆ ನಡೆಸಿ ಪೊಲೀಸರ ವಶದಲ್ಲಿರುವವರು. ಬೈಕ್‌ನಲ್ಲಿ ಆಗಮಿ ಸಿದ್ದ ಇವರು ಎರಡು ಬೇಕರಿ, ಒಂದು ಮಟನ್ ಸ್ಟಾಲ್, ಸೆಲೂನ್ ಮತ್ತು ಮಸೀದಿಗೆ ಹಾನಿ ಮಾಡಿದ್ದರು. ಮಂಜನಾಡಿ ಉರುಮನೆಯ ಕುಡಿಯುವ ನೀರಿನ ಸರಬರಾಜಿನ ಟ್ಯಾಂಕರ್‌ನಲ್ಲಿ ಕೆಲಸ ಮಾಡುವ ಇವರು ತಮ್ಮ ಮಾಲಕರ ಬೈಕ್‌ನಲ್ಲಿ ಕೊಣಾಜೆ ಸಮೀಪದಲ್ಲಿ ನಡೆಯುತ್ತಿದ್ದ ಜಾತ್ರೆಗೆ ತೆರಳಿದ್ದರು. ಕಂಠಪೂರ್ತಿ ಕುಡಿದು ಉರುಮನೆಯಲ್ಲಿರುವ ತಮ್ಮ ಬಾಡಿಗೆ ರೂಮಿಗೆ ವಾಪಸಾಗುತ್ತಿದ್ದಾಗ ನಾಟೆಕಲ್ ಜಂಕ್ಷನ್‌ನಲ್ಲಿರುವ ಅಬ್ದುಲ್ ರಝಾಕ್ ಅವರ ಬೇಕರಿಯ 2 ಫ್ರಿಡ್ಜ್ಗಳ ಗಾಜು ಒಡೆ ದರು. ಹಂಝ ನೌಷಾದ್‌ನ ಬೀಫ್ ಸ್ಟಾಲ್‌ನ ಕಲ್ಲುಗಳನ್ನು ಧ್ವಂಸಗೊಳಿಸಿ, ಇಬ್ರಾಹಿಂಗೆ ಸೇರಿದ ನಾಟೆಕಲ್ ಬೇಕರಿ ಅಂಗಡಿಯ ಸಿಸಿಕೆಮರಾವನ್ನು ಕಿತ್ತುಹಾಕಿ, ಬಳಿಕ ಸೆಲೂನ್ ಮತ್ತು ಪಕ್ಕದ ರಕ್ಷೀದಿ ಮಸೀದಿಯ ಎರಡು ಟ್ಯೂಬ್ ಲೈಟ್ ಮತ್ತು ಸಿಎಫ್‌ಎಲ್ ಬಲ್ಬ್ಗಳನ್ನು ಪುಡಿಗೈದಿದ್ದರು.
ಬೇಕರಿಯಲ್ಲಿ ಸಿಸಿಟಿವಿಯನ್ನು ಗಮನಿಸಿದ ಆರೋಪಿಗಳು ತಮ್ಮ ಕೃತ್ಯ ಅದರಲ್ಲಿ ಸೆರೆಯಾಗಬಾರದೆಂದು ಸಿಸಿಟಿವಿಯನ್ನು ಕಿತ್ತು ಕೊಂಡೊಯ್ದಿ ದ್ದರು. ಆದರೆ ಅದಕ್ಕಿಂತ ಮೊದಲೇ ಇವರ ಕೃತ್ಯ ಸರ್ವರ್‌ನಲ್ಲಿ ದಾಖಲಾ ಗಿದ್ದು, ಬೈಕ್ ಆಧಾರದಲ್ಲಿ ಅವರನ್ನು ಬಂಧಿಸಲಾಯಿತು. ಪ್ರತಿಭಟನೆ : ಆರೋಪಿಗಳ ಜತೆಯಲ್ಲಿ ಅವರು ಕೆಲಸ ಮಾಡುವ ಸಂಸ್ಥೆಯ ಮಾಲಕರನ್ನು ಕೂಡ ಬಂಧಿಸುವಂತೆ ಪ್ರತಿಭಟನಕಾರರು ಆಗ್ರಹಿಸಿದ ಹಿನ್ನೆಲೆಯಲ್ಲಿ ಪೊಲೀಸರು ಮಾಲಕ ಮಂಜುನಾಥ್ ಅವರನ್ನು ಕೂಡ ವಶಕ್ಕೆ ತೆಗೆದುಕೊಂಡರು. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
Advertisement