Advertisement

ವನಿತಾ ಟಿ20 ತ್ರಿಕೋನ ಸರಣಿ: ಕಾಂಗರೂಗಳನ್ನು ಕೆಡವಿದ ಇಂಗ್ಲೆಂಡ್‌

07:30 AM Mar 24, 2018 | Team Udayavani |

ಮುಂಬಯಿ: ಭಾರತಕ್ಕೆ ಆಗಮಿಸಿದ ಬಳಿಕ ಸತತ ಗೆಲುವಿನೊಂದಿಗೆ ಹಾರಾಡುತ್ತಿದ್ದ ಆಸ್ಟ್ರೇಲಿಯ ವನಿತೆಯರನ್ನು ಇಂಗ್ಲೆಂಡ್‌ ನೆಲಕ್ಕೆ ಕೆಡವಿದೆ. ಶುಕ್ರವಾರದ ಟಿ20 ತ್ರಿಕೋನ ಸರಣಿಯ ಪಂದ್ಯದಲ್ಲಿ ಇಂಗ್ಲೆಂಡ್‌ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

Advertisement

ಭಾರತ ವಿರುದ್ಧದ ಎಲ್ಲ 3 ಏಕದಿನ ಪಂದ್ಯಗಳನ್ನು ಗೆದ್ದು, ಗುರುವಾರದ ಮೊದಲ ಟಿ20ನ ಪಂದ್ಯದಲ್ಲೂ ಜಯ ಸಾಧಿಸಿದ್ದ ಆಸ್ಟ್ರೇಲಿಯದ ಆಟ ಆಂಗ್ಲರ ಎದುರು ನಡೆಯಲಿಲ್ಲ. ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯ 8 ವಿಕೆಟಿಗೆ 149 ರನ್‌ ಮಾಡಿದರೆ, ಇಂಗ್ಲೆಂಡ್‌ 17 ಓವರ್‌ಗಳಲ್ಲಿ ಕೇವಲ ಎರಡೇ ವಿಕೆಟಿಗೆ 150 ರನ್‌ ಬಾರಿಸಿ ಶುಭಾರಂಭ ಮಾಡಿತು. ಶನಿವಾರದ ಪಂದ್ಯದಲ್ಲಿ ಭಾರತ-ಇಂಗ್ಲೆಂಡ್‌ ಮುಖಾಮುಖೀಯಾಗಲಿವೆ.

ಆಸ್ಟ್ರೇಲಿಯ ಪರ ನಾಯಕಿ ರಶೆಲ್‌ ಹೇನ್ಸ್‌ ಉತ್ತಮ ಹೋರಾಟವೊಂದನ್ನು ಸಂಘಟಿಸಿ 65 ರನ್‌ ಬಾರಿಸಿದರು (45 ಎಸೆತ, 8 ಬೌಂಡರಿ, 1 ಸಿಕ್ಸರ್‌). 5ನೇ ಕ್ರಮಾಂಕದಲ್ಲಿ ಕ್ರೀಸ್‌ ಇಳಿದ ಹೇನ್ಸ್‌ ಅಂತಿಮ ಓವರ್‌ ತನಕ ಇಂಗ್ಲೆಂಡ್‌ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. ಆರಂಭಿಕ ಆಟಗಾರ್ತಿ ಅಲಿಸ್ಸಾ ಹೀಲಿ 31, ವನ್‌ಡೌನ್‌ ಆಟಗಾರ್ತಿ ಆ್ಯಶ್ಲಿ ಗಾಡ್ನìರ್‌ 28 ರನ್‌ ಹೊಡೆದರು. 3 ವಿಕೆಟ್‌ ಕಿತ್ತ ಮಧ್ಯಮ ವೇಗಿ ಜೆನ್ನಿ ಗನ್‌ ಇಂಗ್ಲೆಂಡಿನ ಯಶಸ್ವಿ ಬೌಲರ್‌. ನಥಾಲಿ ಸೀವರ್‌ 2 ವಿಕೆಟ್‌ ಉರುಳಿಸಿದರು.

ಬೇಮಂಟ್‌-ಸೀವರ್‌ ಶತಕದ ಜತೆಯಾಟ: ಚೇಸಿಂಗ್‌ ವೇಳೆ ಇಂಗ್ಲೆಂಡ್‌ ಆರಂಭಿಕರಿಬ್ಬರನ್ನು ಬೇಗನೇ ಕಳೆದುಕೊಂಡಿತು. 5ನೇ ಓವರ್‌ ವೇಳೆ 34 ರನ್‌ ಆದಾಗ ಬ್ರಿಯಾನಿ ಸ್ಮಿತ್‌ (1) ಮತ್ತು ಡೇನಿಯಲ್‌ ವ್ಯಾಟ್‌ (18) ಔಟಾದರು. ಆಸ್ಟ್ರೇಲಿಯ ಈ 2 ವಿಕೆಟ್‌ಗಳಿಗೇ ಸಮಾಧಾನಪಡಬೇಕಾಯಿತು. 3ನೇ ವಿಕೆಟಿಗೆ ಜತೆಗೂಡಿದ ಟಾಮಿ ಬೇಮಂಟ್‌ (ಅಜೇಯ 58) ಮತ್ತು ನಥನ್‌ ಸೀವರ್‌ (ಅಜೇಯ 68) ಸೇರಿಕೊಂಡು ಇಂಗ್ಲೆಂಡಿಗೆ ಭರ್ಜರಿ ಗೆಲುವನ್ನು ತಂದಿತ್ತರು. ಇವರ ಮುರಿಯದ 3ನೇ ವಿಕೆಟ್‌ ಜತೆಯಾಟದಲ್ಲಿ 116 ರನ್‌ ಒಟ್ಟುಗೂಡಿತು. ಆಲ್‌ರೌಂಡ್‌ ಪ್ರದರ್ಶನವಿತ್ತ ಸೀವರ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್‌ 
ಆಸ್ಟ್ರೇಲಿಯ-8 ವಿಕೆಟಿಗೆ 149 (ಹೇನ್ಸ್‌ 65, ಹೀಲಿ 31, ಗಾಡ್ನìರ್‌ 28, ಗನ್‌ 26ಕ್ಕೆ 3, ಸೀವರ್‌ 29ಕ್ಕೆ 2). ಇಂಗ್ಲೆಂಡ್‌-17 ಓವರ್‌ಗಳಲ್ಲಿ 2 ವಿಕೆಟಿಗೆ 150 (ಸೀವರ್‌ ಔಟಾಗದೆ 68, ಬೇಮಂಟ್‌ ಔಟಾಗದೆ 58). 
ಪಂದ್ಯಶ್ರೇಷ್ಠ: ನಥನ್‌ ಸೀವರ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next