ಅತ್ಯಾಧುನಿಕ ಜೇಮ್ಸ್ ವೆಬ್ ದೂರದರ್ಶಕ ಸೆರೆಹಿಡಿದ ಬಾಹ್ಯಾಕಾಶದ ರೋಮಾಂಚಕಾರಿ ಚಿತ್ರವನ್ನು ಅಮೆರಿಕದ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ ಸೋಮವಾರ ಮೊದಲ ಬಾರಿಗೆ ಬಿಡುಗಡೆ ಮಾಡಿದೆ. ಇಲ್ಲಿ ಕಾಣಿಸುವ ನಕ್ಷತ್ರಗಳು ಕೋರೈಸುವ ಪರ್ವತ- ಕಣಿವೆಯಂಥ ರಚನೆಗಳು ಕರೀನಾ ತಾರಾಪುಂಜದಲ್ಲಿ ಇರುವ ಎನ್‌ಜಿಸಿ 3324 ಎಂಬ ನಕ್ಷತ್ರ ರೂಪು ಗೊಳ್ಳುತ್ತಿರುವ ಪ್ರದೇಶದವು. ಬ್ರಹ್ಮಾಂಡದ ಉಗಮ ಹೇಗಾಯಿತು, ಬಾಹ್ಯಾಕಾಶದಲ್ಲಿ ಏನೇನೆಲ್ಲ ಇದೆ ಎಂಬಿತ್ಯಾದಿ ಕುತೂಹಲಗಳನ್ನು ತಣಿಸಿಕೊಳ್ಳುವುದಕ್ಕಾಗಿ ನಾಸಾ ಈ ದೂರದರ್ಶಕವನ್ನು ಕಳುಹಿಸಿದೆ.
-ಬಾಹ್ಯಾಕಾಶಕ್ಕೆ ಕಳುಹಿಸಿರುವ ದೂರದರ್ಶಕಗಳಲ್ಲೇ ಅತ್ಯಂತ ಶಕ್ತಿಶಾಲಿ ಈ ಜೇಮ್ಸ್ ವೆಬ್.
-ಇನ್‌ಫ್ರಾರೆಡ್ ಕೆಮರಾಗಳನ್ನು ಹೊಂದಿದೆ.
-ಇದುವರೆಗೆ ಅತೀ ಶಕ್ತಿಶಾಲಿ ಎನಿಸಿದ ಹಬಲ್ ದೂರದರ್ಶಕಕ್ಕೂ ಸಿಗದ ಮಸುಕಾದ, ಪುರಾತನ, ಅತೀ ದೂರದ ಬಾಹ್ಯಾಕಾಶ ಕಾಯಗಳನ್ನೂ ಕಾಣಬಲ್ಲ ಸಾಮರ್ಥ್ಯ ಹೊಂದಿದೆ.
-2021ರ ಡಿಸೆಂಬರ್ 25ರಂದು ಹಾರಿಬಿಡಲಾಗಿತ್ತು.
-ಜೇಮ್ಸ್ ವೆಬ್ ದೂರದರ್ಶಕದ ಮೌಲ್ಯ: 10 ದಶಲಕ್ಷ ಡಾಲರ್