ವಾಷಿಂಗ್ಟನ್: ಚಂದ್ರನ ಮೇಲ್ಮೈ ಗೆ ಮಾನವನನ್ನು ಕಳುಹಿಸುವ ಆರ್ಟೆಮಿಸ್ ಯೋಜನೆಯಲ್ಲಿ ತೊಡಗಿರುವ ನಾಸಾ, ಮಂಗಳವಾರ ಮೈಕ್ರೋವೇವ್ ಒವನ್ ಗಾತ್ರದ ಘನಾಕೃತಿಯ ಉಪಗ್ರಹ (ಕ್ಯೂಬ್‌ಸ್ಯಾಟ್) ವೊಂದನ್ನು ಉಡಾವಣೆ ಮಾಡಿದೆ. ಕ್ಯಾಪ್‌ಸ್ಟೋನ್ ಎಂಬ ಹೆಸರಿನ ಈ ಉಪಗ್ರಹವು ನ್ಯೂಜಿಲೆಂಡ್‌ನ ಮಹಿಯಾ ಪರ್ಯಾಯದ್ವೀಪದಿಂದ ನಭಕ್ಕೆ ಚಿಮ್ಮಿದೆ.
ನವೆಂಬರ್‌ನಲ್ಲಿ ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಯನ್ನು ತಲುಪಲಿದ್ದು, ನಂತರದಲ್ಲಿ ಕ್ಯಾಪ್‌ಸೊràನ್ ಕಾರ್ಯಾಚರಣೆ ಆರಂ»ವಾಗಲಿದೆ. ಈ ಉಪಗ್ರಹವು ಚಂದ್ರನ ಸುತ್ತಲಿನ ಹೊಸ ಮಾರ್ಗಗಳನ್ನು ಪರೀಕ್ಷಿಸಿ, ಭವಿಷ್ಯದ ಯೋಜನೆಗಳಿಗೆ ನೆರವಾಗಲಿದೆ.
ಚಂದ್ರನ ವಿಶಿಷ್ಟ, ದೀರ್ಘವೃತ್ತಾಕಾರದ ಕಕ್ಷೆಯಲ್ಲಿನ ಚಲನಶಕ್ತಿಯನ್ನು ದೃಢೀಕರಿಸುವ ಮತ್ತು ಹೊಸ ನೇವಿಗೇಷನ್ ತಂತ್ರಜ್ಞಾನಗಳನ್ನು ಅಲ್ಲಿ ಪರಿಶೀಲಿಸುವ ಕೆಲಸವನ್ನು ಈ ಉಪಗ್ರಹ ಮಾಡಲಿದೆ.
ಇದನ್ನೂ ಓದಿ:ದಾವಣಗೆರೆ : ಭ್ರಷ್ಟಾಚಾರ, ದುರ್ಬಳಕೆ ತಡೆಗೆ ಕಠಿಣ ಕಾನೂನು : ಸಚಿವ ಎಸ್.ಟಿ. ಸೋಮಶೇಖರ್
ಇದರಿಂದಾಗಿ ಭವಿಷ್ಯದಲ್ಲಿ ಬಾಹ್ಯಾಕಾಶ ನೌಕೆಗಳಿಗೆ ಎದುರಾಗಬಹುದಾದ ಸಂಭಾವ್ಯ ರಿಸ್ಕ್ಗಳನ್ನು ತಗ್ಗಿಸಲು ಸಾಧ್ಯವಾಗಲಿದೆ ಎನ್ನುವುದು ನಾಸಾ ವಿಜ್ಞಾನಿಗಳ ಲೆಕ್ಕಾಚಾರ.