Advertisement
ಆರ್ತೆಮಿಸ್1 ಯೋಜನೆಚಂದ್ರನ ಮೇಲೆ ಮಾನವನು ಇಳಿಯುವುದು ಇದು ಮೊದಲ ಬಾರಿ ಏನೂ ಅಲ್ಲ. 1969ರಲ್ಲಿ ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಬಜ್ ಅಲ್ಡಿನ್ ಅವರು ಇಳಿದಿದ್ದರು. ಮಾನವ ಮತ್ತು ರೋಬೋಟಿಕ್ ಸಹಿತವಾಗಿರುವ ಪ್ರಯೋಗ ಎಂದು ನಾಸಾದ ಟ್ವಿಟರ್‌ನಲ್ಲಿ ಉಲ್ಲೇಖಿಸಲಾಗಿದೆ.
ಬೃಹದಾಕಾರದ ಗಗನ ಯಾತ್ರೆ ವ್ಯವಸ್ಥೆ (ಎಸ್‌ಎಲ್‌ಎಸ್)ಯ ಓರಿಯಾನ್ ಸ್ಪೇಸ್ ಕ್ರಾಫ್ಟ್ ಮೂಲಕ ಮಾನವ ರಹಿತ ಗಗನ ನೌಕೆ ಚಂದ್ರನಲ್ಲಿಗೆ ನೆಗೆಯಲಿದೆ. ಅದು ಫ್ಲೋರಿಡಾದಲ್ಲಿರುವ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಲಿದೆ. ಅದು 322 ಅಡಿ ಉದ್ದ ಹೊಂದಿದ್ದು, ನಾಸಾ ಇದುವರೆಗೆ ನಿರ್ಮಿಸಿದ ಅತ್ಯಧಿಕ ಶಕ್ತಿಶಾಲಿ ರಾಕೆಟ್ ಆಗಿದೆ. ಒಟ್ಟು ಆರು ಮಂದಿ ಯಾತ್ರಿಗಳು ಅದರಲ್ಲಿ ಪ್ರಯಾಣ ಮಾಡುವಂತೆ ವಿನ್ಯಾಸವನ್ನೂ ಮಾಡಲಾಗಿದೆ.
Related Articles
ಚಂದ್ರನಲ್ಲಿ ಇಳಿದ ಬಳಿಕ ಗಗನನೌಕೆ ಚಂದ್ರನ ಮೇಲೆ°„ನಲ್ಲಿ ಸುತ್ತು ಬಂದು 42 ದಿನಗಳ ಬಳಿಕ ಭೂಮಿಗೆ ವಾಪಸಾಗಲಿದೆ. ಒಟ್ಟು 1.3 ದಶಲಕ್ಷ ಮೈಲು ಪ್ರಯಾಣ ಮಾಡಲಿದೆ.
Advertisement
1969ರಿಂದ 1972ರ ವರೆಗೆ ನಡೆದಿದ್ದ ಚಂದ್ರನ ಮೇಲೆ ಮೊದಲ ಬಾರಿಗೆ ಮಾನವರು ಇಳಿದಿದ್ದ ವೇಳೆ 12 ಮಂದಿ ಗಗನ ಯಾತ್ರಿಗಳು ಇದ್ದರು. 2024ರ ವೇಳೆಗೆ ಹೊಸ ಸಾಹಸದಲ್ಲಿ ಶಶಾಂಕನ ಮೇಲೆ ಯಾತ್ರೆ 2024ಕ್ಕೆ ಶುರುವಾಗುವ ನಿರೀಕ್ಷೆ ಇದೆ. ಚಂದ್ರನ ದಕ್ಷಿಣ ಭಾಗಕ್ಕೆ ತೆರಳುವ ಉದ್ದೇಶ ನಾಸಾ ವಿಜ್ಞಾನಿಗಳಿಗೆ ಇದೆ.
ಉದ್ದೇಶವೇನು?ಆರ್ತೆಮಿಸ್-1ರ ಉದ್ದೇಶವೇನೆಂದರೆ ಚಂದ್ರನಿಂದಲೂ ಕೂಡ ಮಂಗಳ ಗ್ರಹಕ್ಕೆ ಗಗನ ಯಾತ್ರಿಗಳನ್ನು ಕಳುಹಿಸಲು ಸಾಧ್ಯವಿದೆಯೇ ಎಂಬುದನ್ನು ಅಧ್ಯಯನ ನಡೆಸಲಾಗುತ್ತದೆ. 42 ದಿನ- ಒಟ್ಟು ದಿನಗಳು
1.3 ದಶಲಕ್ಷ ಮೈಲುಗಳು- ಪ್ರಯಾಣ