ಕೇಪ್ ಕ್ಯಾನವರಲ್: 38 ವರ್ಷದ ನಿವೃತ್ತ ನಾಸಾ ಉಪಗ್ರಹವೊಂದು ಆಕಾಶದಿಂದ ಕೆಳಕ್ಕೆ ಬೀಳಲಿದೆ. ಸುಮಾರು 2450 ಕೆಜಿ ತೂಕದ ಸ್ಯಾಟಲೈಟ್ ಭೂಮಿಗೆ ಮರು ಪ್ರವೇಶ ಮಾಡಲಿದ್ದು, ಈ ವೇಳೆ ಸುಟ್ಟು ಹೋಗಲಿದೆ. ಈ ವೇಳೆ ಕೆಲವು ಭಾಗಗಳು ಉಳಿಯಬಹುದು ಎಂದು ನಾಸಾ ತಿಳಿಸಿದೆ.
ರಕ್ಷಣಾ ಇಲಾಖೆಯ ಪ್ರಕಾರ ಈ ವಿಜ್ಞಾನ ಉಪಗ್ರಹವು ರವಿವಾರ ರಾತ್ರಿ ಭೂಮಿಗೆ ಮರಳುವ ಸಾಧ್ಯತೆಯಿದೆ. ಆದರೆ, ಕ್ಯಾಲಿಫೋರ್ನಿಯಾ ಮೂಲದ ಏರೋಸ್ಪೇಸ್ ಕಾರ್ಪೊರೇಷನ್ ಪ್ರಕಾರ, ಆಫ್ರಿಕಾ, ಏಷ್ಯಾದ ಮಧ್ಯಪ್ರಾಚ್ಯ ಮತ್ತು ಉತ್ತರ ಮತ್ತು ದಕ್ಷಿಣ ಅಮೆರಿಕಾದ ಪಶ್ಚಿಮ ಭಾಗಗಳಲ್ಲಿ ಹಾದುಹೋಗುವ ಟ್ರ್ಯಾಕ್ ನಲ್ಲಿ ಸೋಮವಾರ ಬೆಳಿಗ್ಗೆ ಬರಬಹುದು.
ಈ ಭೂ ವಿಕಿರಣ ಬಜೆಟ್ ಉಪಗ್ರಹವನ್ನು 1984ರಲ್ಲಿ ಉಡಾವಣೆ ಮಾಡಲಾಗಿತ್ತು. ಇದರ ಕೆಲಸ ಮಾಡುವ ಅವಧಿ ಎರಡು ವರ್ಷ ಎಂದು ಅಂದಾಜಿಸಲಾಗಿದ್ದರೂ, ಇದು 2005ರವರೆಗೆ ಓಝೋನ್ ಮತ್ತು ಇತರ ವಾತಾವರಣದ ಮಾಪನಗಳನ್ನು ಮಾಡುತ್ತಲೇ ಇತ್ತು.
ಇದನ್ನೂ ಓದಿ:ರಾಜ್‌ಕೋಟ್: ಟಿ20 ಸರಣಿಗೆ ರಾಜ ಯಾರು? ಅದೃಷ್ಟದ ಪಾತ್ರವೇ ನಿರ್ಣಾಯಕ
ಭೂಮಿಯು ಹೇಗೆ ಸೂರ್ಯನಿಂದ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಹೊರಸೂಸುತ್ತದೆ ಎಂಬುದನ್ನು ಉಪಗ್ರಹವು ಅಧ್ಯಯನ ಮಾಡಿದೆ.