ವಾಷಿಂಗ್ಟನ್: ಮಂಗಳನ ಅಂಗಳದಲ್ಲಿರುವ ನಾಸಾದ ಇನ್‌ಸೈಟ್ ಉಪಗ್ರಹ ನೌಕೆಯು ಬಹುತೇಕ ನಿಷ್ಕ್ರಿಯ ಹಂತಕ್ಕೆ ತಲುಪಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
2018ರಲ್ಲಿ ನಾಸಾದ ಇನ್‌ಸೈಟ್ ಉಪಗ್ರಹ ನೌಕೆಯು ಮಂಗಳವನ್ನು ತಲುಪಿತ್ತು. ಮಂಗಳ ಕಂಪನವನ್ನು ದಾಖಲಿಸಲೆಂದೇ ಕಳುಹಿಸಲಾದ ಮೊದಲ ಉಪಗ್ರಹ ಇದಾಗಿತ್ತು. ಇದರಲ್ಲಿ ಅಲವಡಿ ಸಿರುವ ಫ್ರಾನ್ಸ್ ನಿರ್ಮಿತ ಕಂಪನ ಮಾಪಕವು ಇದುವರೆಗೂ 1,300ಕ್ಕೂ ಹೆಚ್ಚು ಮಂಗಳ ಕಂಪನಗಳನ್ನು ದಾಖಲಿ ಸಿದೆ.
ಈ ವರ್ಷದ ಆರಂಭದಲ್ಲಿ ದಾಖಲಾದ ಮಂಗಳ ಕಂಪನದ ಸಂದರ್ಭ ದಲ್ಲಿ ಕನಿಷ್ಠ ಆರು ಗಂಟೆಗಳ ಕಾಲ ಮಂಗಳದ ನೆಲವು ನಡುಗಿತ್ತು ಎಂದು ನಾಸಾ ಮಾಹಿತಿ ನೀಡಿದೆ.
ಇನ್‌ಸೈಟ್ ಉಪಗ್ರಹ ನೌಕೆಯ ಸೌರ ಪ್ಯಾನಲ್‌ಗಳ ಮೇಲೆ ದಟ್ಟವಾದ ಧೂಳು ತುಂಬಿದ ಕಾರಣ ಕೆಲವು ತಿಂಗಳುಗಳಿಂದ ಅದರ ಕಾರ್ಯಚಟುವಟಿಕೆಗಳು ಕ್ಷೀಣವಾ ಗುತ್ತಿದೆ. ಅದರ ಸಂಪರ್ಕ ಸಾಧಿಸಲು ನಿರಂತರವಾಗಿ ಪ್ರಯತ್ನಿಸಲಾಗುತ್ತಿದೆ.
ಆದರೆ ಬಹುಶಃ ಇನ್ನು ಕೆಲವು ದಿನಗಳಲ್ಲಿ ಅದರ ಕಾರ್ಯಾಚಟುವಟಿಕೆಗಳು ಸಂಪೂ ರ್ಣವಾಗಿ ಸ್ಥಗಿತಗೊಳ್ಳಬಹುದು ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.