Advertisement

ವಿಕ್ರಂ ಲ್ಯಾಂಡರ್ ಕುರಿತು ಹೊಸ ಮಾಹಿತಿ ನೀಡಲಿದೆಯೇ ನಾಸಾದ ತಪಾಸಣಾ ನೌಕೆ?

10:04 AM Sep 17, 2019 | Team Udayavani |

ಇಸ್ರೋದ ಐತಿಹಾಸಿಕ ಚಂದ್ರಯಾನ-2ರ ಅಂತಿಮ ಹಂತ ‘ವಿಕ್ರಂ ಲ್ಯಾಂಡರ್’ನ ಸಾಫ್ಟ್ ಲ್ಯಾಂಡಿಂಗ್ ವಿಫಲಗೊಂಡ ಬಳಿಕ ಚಂದ್ರನ ನೆಲದಲ್ಲಿ ಬಿದ್ದಿರುವ ಆ ನೌಕೆಯೊಂದಿಗೆ ಸಂವಹನ ನಡೆಸಲು ಇಸ್ರೋ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಇದೇ ಸಂದರ್ಭದಲ್ಲಿ ಇಸ್ರೋ ಸಹಾಯಕ್ಕೆ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಬರುವ ಮೂಲಕ ಭಾರತದ ಚಂದ್ರಯಾನ -2ರ ಯಶಸ್ಸಿನ ಆಸೆಗೆ ಜೀವ ತುಂಬಿತ್ತು.

Advertisement

ವಿಕ್ರಂ ಲ್ಯಾಂಡರ್ ನಲ್ಲಿರುವ ಬ್ಯಾಟರಿಯ ಕಾರ್ಯನಿರ್ವಹಣಾ ಅವಧಿಯು 14 ದಿನಗಳದ್ದಾಗಿದ್ದು ಅಷ್ಟರೊಳಗೆ ಈ ನೌಕೆಯೊಂದಿಗೆ ಸಂಪರ್ಕ ಸಾಧಿಸಿ ಅದರೊಳಗಿರುವ ಪ್ರಗ್ಯಾನ್ ರೋವರ್ ಅನ್ನು ಚಂದ್ರನ ನೆಲದಲ್ಲಿ ಇಳಿಸಬೇಕಾಗಿರುವ ಮಹತ್ವದ ಜವಾಬ್ದಾರಿ ಇಸ್ರೋ ವಿಜ್ಞಾನಿಗಳ ಮೇಲಿದೆ. ಆದರೆ ಈ ಕಾರ್ಯಕ್ಕೆ ಇನ್ನು ಉಳಿದಿರುವುದು ಕೇವಲ 7 ದಿನಗಳು ಮಾತ್ರ. ಈ ನಡುವೆ ನಾಸಾ ಅಂಗಳದಿಂದ ಆಶಾದಾಯಕ ಸುದ್ದಿಯೊಂದು ಹೊರಬಿದ್ದಿದೆ.

ನಾಸಾ ಈಗಾಗಲೇ ಹಾರಿಬಿಟ್ಟಿರುವ ಚಂದ್ರ ಅಧ್ಯಯನ ನೌಕೆಯೊಂದು ಮಂಗಳವಾರದಂದು ವಿಕ್ರಂ ಲ್ಯಾಂಡರ್ ಬಿದ್ದಿರುವ ಪ್ರದೇಶದ ಸಮೀಪದಲ್ಲಿ ಹಾರಿಹೋಗಲಿದೆ. ಇದರಿಂದಾಗಿ ಸದ್ಯ ಸಂವಹನ ಕಳೆದುಕೊಂಡಿರುವ ವಿಕ್ರಂ ಕುರಿತಾಗಿ ಯಾವುದಾದರೂ ಹೊಸ ಮಾಹಿತಿಗಳು ಸಿಗಬಹುದೇ ಎಂಬ ವಿಶ್ವಾಸ ಇಸ್ರೋ ವಿಜ್ಞಾನಿಗಳದ್ದಾಗಿದೆ.

ಇದೇ ಸಂದರ್ಭದಲ್ಲಿ ನಾಸಾದ ಈ ನೌಕೆ ವಿಕ್ರಂ ಲ್ಯಾಂಡರ್ ನ ಸದ್ಯದ ಪರಿಸ್ಥಿತಿಯ ಚಿತ್ರಗಳನ್ನೂ ಸಹ ತೆಗೆದು ಅದನ್ನು ನಾಸಾ ಕೇಂದ್ರಕ್ಕೆ ಕಳುಹಿಸಿಕೊಡುವ ನಿರೀಕ್ಷೆ ಇದೆ. ಇದರಿಂದ ಇಸ್ರೋ ವಿಜ್ಞಾನಿಗಳಿಗೆ ಇನ್ನ ಉಳಿದಿರುವ ಕೆಲವೇ ಕೆಲವು ದಿನಗಳಲ್ಲಿ ವಿಕ್ರಂ ಜೊತೆ ಸಂವಹನ ಸಾಧಿಸಲು ಸಾಧ್ಯವಾಗುವಂತಹ ಮಹತ್ವದ ಮಾಹಿತಿಗಳು ಲಭ್ಯವಾಗಲಿದಯೇ ಎಂಬ ಕುತೂಹಲ ಸದ್ಯಕ್ಕಂತೂ ಎಲ್ಲರಲ್ಲೂ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next