ನ್ಯೂಯಾರ್ಕ್: ವಿಮಾನದಲ್ಲಿ ಕುಳಿತಾಗ ಹಸಿರಾಗಿ ಕಾಣುವ ಪೃಥ್ವಿ ಕಂಡು ಪುಳಕಗೊಳ್ಳುವುದು ಸಹಜ. ಇನ್ನು ಬಾಹ್ಯಾಕಾಶ ನೌಕೆಯಿಂದ ಕಾಣುವ ಭೂಮಿ ಎಷ್ಟೊಂದು ರೋಮಾಂಚನ ಹುಟ್ಟಿಸುವುದಿಲ್ಲ? ಈ ಅದ್ಭುತಕ್ಕೆ ಸಾಕ್ಷಿಯಾದ ಅಮೆರಿಕ ನಾಸಾದ ಗಗನಯಾತ್ರಿಕ ವಿಕ್ಟರ್ ಗ್ಲೋವರ್, ಬಾಹ್ಯಾಕಾಶದಿಂದ ತೋರುವ ಭೂಮಿಯ ವಿಡಿಯೊ ಚಿತ್ರೀಕರಿಸಿ, ಟ್ವಿಟರಿನಲ್ಲಿ ಹಾಕಿದ್ದಾರೆ.
ದಟ್ಟ ನೀಲಿ, ಅಲ್ಲಲ್ಲಿ ಬಿಳಿ ಬಣ್ಣಗಳಿಂದ ಕಾಣುವ ಭೂಮಿಯ ನೋಟಗಳನ್ನು ಅವರು ಡ್ರ್ಯಾಗನ್ ರೆಸಿಲಿಯನ್ಸ್ ನೌಕೆಯಿಂದ ಸೆರೆಹಿಡಿದಿದ್ದಾರೆ.
“ಇದು ಬಾಹ್ಯಾಕಾಶದಿಂದ ನಾನು ಸೆರೆಹಿಡಿದ ಮೊದಲ ವಿಡಿಯೊ. ಭೂಮಿಯ ಸಹಜ ಸೌಂದರ್ಯಕ್ಕೆ ಈ ವಿಡಿಯೊ ನ್ಯಾಯ ಒದಗಿಸುವುದಿಲ್ಲ ಎಂಬುದನ್ನು ಬಲ್ಲೆ. ಡ್ರ್ಯಾಗನ್ ರೆಸಿಲಿಯನ್ಸ್ ಕಿಟಕಿ ಪಕ್ಕ ಕುಳಿತು ಕಣ್ಣಾರೆ ಭೂಮಿಯ ಅಂದ ಸವಿಯುವುದೇ ಒಂದು ಅದ್ಭುತ ರಸಕ್ಷಣ’ ಎಂದು ಗ್ಲೋವರ್ ಬಣ್ಣಿಸಿದ್ದಾರೆ.
ಇದನ್ನೂ ಓದಿ:ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು