ಬನ್ನೂರು: ಕ್ಷೇತ್ರದ ಅಭಿವೃದ್ಧಿಯ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲೇ ಉತ್ತಮ ಅಭಿಪ್ರಾಯಗಳು ವ್ಯಕ್ತವಾಗಿದ್ದು, 1952ರ ನಂತರ ಯಾವುದೇ ಶಾಸಕರು ಮಾಡದಷ್ಟು ಉತ್ತಮ ಕೆಲಸವನ್ನು ತಾವು ಮಾಡಿದ್ದು, ನರಸೀಪುರ ಹಾಗೂ ನಂಜನಗೂಡಿನ ಕ್ಷೇತ್ರಗಳು ತಮಗೆ ಎರಡು ಕಣ್ಣುಗಳಿದಂತೆ ಕ್ಷೇತ್ರದ ಜನರನ್ನು ಎಂದಿಗೂ ಮರೆಯುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿದರು.
ಪಟ್ಟಣದ ಸಮೀಪದ ಯಾಚೇನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ, ಹಾಲು ಉತ್ಪಾದಕ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ, ಹಾಗೂ ಯಾಚೇನಹಳ್ಳಿ ಗ್ರಾಪಂ ಕಟ್ಟಡ ಶಂಕುಸ್ಥಾಪನೆ ಮತ್ತು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ, ಪುತ್ಥಳಿ ಅನಾವರಣ ಸಮಾರಂಭದಲ್ಲಿ ಮಾತನಾಡಿದರು.
ಹಿಂದೆ ಯಾಚೇನಹಳ್ಳಿ ಗ್ರಾಮ ಇಂದಿನ ಸ್ಥಿತಿಯಲ್ಲಿರಲಿಲ್ಲ. ಗ್ರಾಮದ ಅಭಿವೃದ್ಧಿಗೆ ಪ್ರತಿಯೊಬ್ಬರು ಇಂದು ಕಂಕಣ ಬದ್ಧಪಣ ತೊಟ್ಟು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು. ಅವರ ಹಿಂದೆ ಶಂಕರೇಗೌಡರು ನಾಯಕತ್ವ ವಹಿಸಿಕೊಂಡು ಮುನ್ನಡೆಸುತ್ತಿರುವುದು ಗ್ರಾಮದ ಅಭಿವೃದ್ಧಿಯ ಧೊÂàತಕವಾಗಿದೆ ಎಂದು ತಿಳಿಸಿದರು.
ನಗರದ ಸೌಲಭ್ಯವನ್ನು ಹಳ್ಳಿಗಳಿಗೆ ಸಿಗಬೇಕೆನ್ನುವುದು ಅಬ್ದುಲ್ ಕಲಾಂರ ಆಸೆಯಾಗಿತ್ತು. ಆ ನಿಟ್ಟಿನಲ್ಲಿ ಯಾಚೇನಹಳ್ಳಿ ಅಭಿವೃದ್ಧಿಯ ಪಥದಲ್ಲಿದೆ. ಇಲ್ಲಿ ಎಲ್ಲ ರೀತಿಯ ಸುಸಜ್ಜಿತ ಸೌಲಭ್ಯಗಳು ದೊರೆಯುತ್ತಿದೆ. ಅಂಗನವಾಡಿ ಕೇಂದ್ರಗಳಿರಬಹುದು, ಕೃಷಿ ಪತ್ತಿನ ಸಹಕಾರ ಕೇಂದ್ರವಿರಬಹುದು, ಶುದ್ಧಿ ನೀರಿನ ಘಟಕವಿರಬಹುದು, ಸೌರ ವಿದ್ಯುತ್ ಉತ್ಪಾದನೆ ಎಲ್ಲದರಲ್ಲೂ ಮುಂದಿದೆ ಎಂದರು.
ವಿಧಾನಪರಿಷತ್ ಸದಸ್ಯ ಧರ್ಮಸೇನ ಮಾತನಾಡಿ, ಯಾಚೇನಹಳ್ಳಿಯಲ್ಲಾಗಿರುವ ಅಭಿವೃದ್ಧಿ ಗಮನಿಸಿದರೆ ಇದು ಹಳ್ಳಿಯೇ ಎನ್ನುವ ಹಾಗೇ ಭಾಸ ವಾಗುತ್ತದೆ. ಮುಂದಿನ ದಿನಗಳಲ್ಲಿ ಇದನ್ನು ಹೋಬಳಿಯನ್ನಾಗಿಯೋ, ತಾಲೂಕಾಗಿಯೋ ಮಾಡುವಂತೆ ಜನರು ಕೇಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಶಂಕರೇಗೌಡರ ನೇತೃತ್ವದಲ್ಲಿ ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ಬಹಳಷ್ಟು ಸಂತಸವನ್ನುಂಟು ಮಾಡಿದೆ ಎಂದು ತಿಳಿಸಿದರು.
ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡಿ, ಇಂದು ಗ್ರಾಮದಲ್ಲಿ ಆಲಸ್ಯ ಸೋಮಾರಿತನ ಹೆಚ್ಚು ಆವರಿಸುತ್ತಿದ್ದು, ಗ್ರಾಮದ ಜನರು ಇದರಿಂದ ದೂರವಾಗಬೇಕು. ಪ್ರತಿಯೊಂದು ಗ್ರಾಮದಲ್ಲೂ ಒಂದೊಂದು ಗ್ರಂಥಾಲಯ ತೆರೆಯುವ ಮೂಲಕ ಸಾಹಿತ್ಯಾಸಕ್ತಿ ಬೆಳೆಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ, ರಾಮಕೃಷ್ಣ ಸೇವಾ ಕೇಂದ್ರದ ನಾದನಂದನಾಥಸ್ವಾಮೀಜಿ, ಗುಂಡ್ಲುಪೇಟೆ ಶಾಸಕಿ ಡಾ. ಗೀತಾ ಮಹದೇವಪ್ರಸಾದ್, ನಂಜುಂಡಪ್ರಸಾದ್, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್. ಚಂದ್ರಶೇಖರ್, ಕೆ.ಜಿ. ಮಹೇಶ್, ಸಿದ್ದರಾಜು, ಸುಧೀರ್, ತಾಪಂ ಅಧ್ಯಕ್ಷ ಚಾಮೇಗೌಡ, ಪುರಸಭಾ ಅಧ್ಯಕ್ಷೆ ಮಂಜುಳಾ ಶ್ರೀನಿವಾಸ್, ವಿಷಕಂಠೇಗೌಡ, ತಿಮ್ಮೇಗೌಡ, ಮಹೇಂದ್ರಸಿಂಗ್ ಕಾಳಪ್ಪ, ಚೆನ್ನಾಜಮ್ಮ, ಕ್ಯಾತೇಗೌಡ, ವಿವೇಕಾನಂದ ಶಿಕ್ಷಣ ಸಂಸ್ಥೆಯ ಪ್ರಕಾಶ್ ತರರು ಇದ್ದರು.