Advertisement

ಪೆರುವಾಜೆ : ಇಕ್ಕಟ್ಟಾದ ರಸ್ತೆಯಲ್ಲಿ ನಡೆದಾಡುವುದೇ ಕಷ್ಟ

11:25 PM May 30, 2019 | Team Udayavani |

ಕಾರ್ಕಳ : ತೋಡು ನಿರ್ಮಾಣಕ್ಕಾಗಿ ಪೆರುವಾಜೆ ರಸ್ತೆ ಇಕ್ಕೆಲವನ್ನು ಅಗೆಯಲಾಗಿದ್ದು, ಇದೀಗ ರೋಡಿಗೆ ತೊಂದರೆಯಾಗಿ ಪರಿಣಮಿಸಿದೆ. ಸಮರ್ಪಕವಾಗಿ ಕಾಮಗಾರಿ ಪೂರ್ಣಗೊಳಿಸದ ಕಾರಣದಿಂದಾಗಿ ವಾಹನಗಳ ಓಡಾಟಕ್ಕೆ ಮಾತ್ರವಲ್ಲದೇ ಪಾದಚಾರಿಗಳು ನಡೆದಾಡದ ಪರಿಸ್ಥಿತಿ ತಲೆದೋರಿದೆ. ತಿಂಗಳ ಹಿಂದೆ ಕಾಮಗಾರಿಗೆ ಚಾಲನೆ ದೊರೆತಿದ್ದರೂ ಕಾಮಗಾರಿಯಿನ್ನೂ ಪೂರ್ಣಗೊಂಡಿಲ್ಲ. ಇದೀಗ ಶಾಲೆ ಪ್ರಾರಂಭವಾಗಿದ್ದು, ಮಕ್ಕಳು ತುಸು ತ್ರಾಸಪಟ್ಟೇ ರಸ್ತೆ ಬದಿ ಸಾಗುವಂತಾಗಿದೆ. ಸಂಬಂಧಪಟ್ಟವರು ಶೀಘ್ರದಲ್ಲೇ ಕಾಮಗಾರಿ ಮುಗಿಸಿಕೊಡುವಂತೆ ಸ್ಥಳೀಯರು ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next