ಕಣ್ಣೂರು: ಕೇರಳ ರಾಜ್ಯದಲ್ಲಿ ಬೀದಿ ನಾಯಿಗಳ ಕಾಟದ ಬಗ್ಗೆ ಸುದ್ದಿಗಳು ಹೆಚ್ಚಾಗಿದೆ. ಇತ್ತೀಚಿನ ವರದಿಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಆರು ಬೀದಿ ನಾಯಿಗಳು ಅಟ್ಟಿಸಿಕೊಂಡು ಬಂದ ಘಟನೆ ಕಣ್ಣೂರಿನಲ್ಲಿ ನಡೆದಿದೆ.
ಕಣ್ಣೂರಿನ ಇಬ್ಬರು ವಿದ್ಯಾರ್ಥಿಗಳನ್ನು ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅದೃಷ್ಟವಶಾತ್ ಅವರು ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ:ಬಾಂಬೆ ಷೇರುಪೇಟೆ ; 60,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್, ನಿಫ್ಟಿ ಏರಿಕೆ
ವಿದ್ಯಾರ್ಥಿಗಳಿಬ್ಬರನ್ನು ಆರು ನಾಯಿಗಳ ಹಿಂಡು ಹಿಂಬಾಲಿಸಿವೆ. ಅದೃಷ್ಟವಶಾತ್, ಅವರಿಬ್ಬರೂ ಮನೆಯ ಆವರಣದೊಳಗೆ ಪ್ರವೇಶಿಸಿ ಒಳಗಿನಿಂದ ಬಾಗಿಲು ಹಾಕಿದ್ದಾರೆ. ಆದರೆ ನಾಯಿಗಳು ಮನೆಯ ಗೇಟ್ ಹೊರಗೆ ಬೊಗಳುವುದನ್ನು ಮುಂದುವರೆಸಿದ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮತ್ತೊಂದು ಘಟನೆಯಲ್ಲಿ ಅರಕ್ಕಿನಾರ್ ನ ಗೋವಿಂದ ವಿಲಾಸಂ ಶಾಲೆಯ ಸಮೀಪವಿರುವ ಕಿರಿದಾದ ಓಣಿಯಲ್ಲಿ ಸೈಕಲ್ ನಲ್ಲಿ ಹೋಗುತ್ತಿದ್ದ 12 ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದೆ.