Advertisement

3 ಹುದ್ದೆಗಳಿಗೆ ಹಾಕಿ ಫೆಡರೇಶನ್ ಅಧ್ಯಕ್ಷ ನರೀಂದರ್‌ ಬಾತ್ರಾ ರಾಜೀನಾಮೆ

10:59 PM Jul 18, 2022 | Team Udayavani |

ಹೊಸದಿಲ್ಲಿ: ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನರೀಂದರ್‌ ಬಾತ್ರಾ ಕೆಲವೇ ನಿಮಿಷಗಳ ಅಂತರದಲ್ಲಿ 3 ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿ ಸುದ್ದಿಯಾಗಿದ್ದಾರೆ.

Advertisement

65 ವರ್ಷದ ಹಿರಿಯ ಕ್ರೀಡಾ ಆಡಳಿತಗಾರ ರಾಗಿರುವ ನರೀಂದರ್‌ ಬಾತ್ರಾ ಮೊದಲು ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಶನ್‌ (ಐಒಎ) ಅಧ್ಯಕ್ಷತೆಗೆ ರಾಜೀನಾಮೆ ನೀಡಿದರು. ಬಳಿಕ ಅಂತಾರಾಷ್ಟ್ರೀಯ ಒಲಿಂಪಿಕ್‌ ಕೌನ್ಸಿಲ್‌ (ಐಒಸಿ) ಸದಸ್ಯ ಸ್ಥಾನದಿಂದ ಕೆಳಗಿಳಿದರು. ಸ್ವಲ್ಪ ಹೊತ್ತಿನಲ್ಲೇ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ (ಎಫ್ಐಎಚ್‌) ಅಧ್ಯಕ್ಷ ಸ್ಥಾನವನ್ನೂ ಬಿಟ್ಟುಕೊಟ್ಟರು.

ಕಾರಣ ರಹಸ್ಯವೇನಲ್ಲ
ಆದರೆ ನರೀಂದರ್‌ ಬಾತ್ರಾ ವಿರುದ್ಧ ಬಂದ ನಾನಾ ಆಪಾದನೆಗಳು, ಅಕ್ರಮ ಹಾಗೂ ಸುಳ್ಳು ಆಶ್ವಾಸನೆಗಳು ಈ ಬೆಳವಣಿಗೆಗೆ ಕಾರಣ ಎಂಬುದು ರಹಸ್ಯವೇನಲ್ಲ. ಹಾಕಿ ಇಂಡಿಯಾ ಫ‌ಂಡ್‌ನಿಂದ 35 ಲಕ್ಷ ರೂ.ಗಳನ್ನು ಸ್ವಂತಕ್ಕಾಗಿ ಬಳಸಿಕೊಂಡಿದ್ದಾರೆ ಎಂಬುದು ಇವರ ಮೇಲಿರುವ ಪ್ರಮುಖ ಆಪಾದನೆ. ಇವರ ಪದಚ್ಯುತಿಗೆ ಭಾರೀ ಒತ್ತಡವಿತ್ತು.

ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಶನ್‌ ಹಾಗೂ ಹಾಕಿ ಫೆಡರೇಶನ್‌ನ ಕೆಲವರು ನ್ಯಾಯಾ ಲಯದ ಮೆಟ್ಟಿಲೇರಿದ್ದರು. ಐಒಎ ಅಧ್ಯಕ್ಷತೆಯಲ್ಲಿ ಮುಂದುವರಿಯದಂತೆ ಕಳೆದ ತಿಂಗಳು ದಿಲ್ಲಿ ಹೈಕೋರ್ಟ್‌ ಬಾತ್ರಾಗೆ ಆದೇಶಿಸಿತ್ತು. ಆದರೂ ಅವರು ಹುದ್ದೆ ಯಲ್ಲಿ ಮುಂದುವರಿದಿದ್ದರು. ಬಾತ್ರಾ ಆಜೀವ ಸದಸ್ಯತ್ವದ ಮೂಲಕ ಈ ಹುದ್ದೆಗಳಲ್ಲಿ ಮುಂದು ವರಿ ಯುವ ಯೋಜನೆ ಹಾಕಿಕೊಂಡಾಗ ಅವರ ಈ ಸದಸ್ವತ್ವವನ್ನೂ ಹೈಕೋರ್ಟ್‌ ರದ್ದುಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next