Advertisement

ನಾರಿಹಳ್ಳ ಮಲೀನ: ಆತಂಕದಲ್ಲಿ ಜನ

03:02 PM Jul 29, 2020 | Suhan S |

ಸಂಡೂರು: ಸಂಡೂರಿನ ಜಲಮೂಲವಾದ ನಾರಿಹಳ್ಳಕ್ಕೆ ನಿತ್ಯ ಮಾಲೀನ್ಯವಾಗುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಯಾವುದೇ ರೀತಿಯ ರಕ್ಷಣೆ ಇಲ್ಲದ ಪರಿಣಾಮ ಕುಡಿಯುವ ನೀರು ಮಲೀನವಾಗುತ್ತಿದೆ.

Advertisement

ಯಶವಂತನಗರದಿಂದ ತಾರಾನಗರದ ತಟದಲ್ಲಿ ನಿತ್ಯ ನೂರಾರು ಅದಿರು ಲಾರಿಗಳು, ಗ್ರಾನೈಟ್‌ ಲಾರಿಗಳು ನಾರಿಹಳ್ಳದಲ್ಲಿಯೇ ಸ್ವಚ್ಛತೆ ಕಾರ್ಯ ಮಾಡುತ್ತಿದ್ದು ಯಾರು ಹೇಳಿದರೂ ಸಹ ಅದನ್ನು ಬಿಡುತ್ತಿಲ್ಲ. ಶಾಸಕ ಈ. ತುಕಾರಾಂ ಅವರು ಸಂಡೂರಿನಿಂದ ಯಶವಂತನಗರಕ್ಕೆಹೋಗುವ ಸಂದರ್ಭದಲ್ಲಿ ನಾರಿಹಳ್ಳದಲ್ಲಿ ಅದಿರು ಲಾರಿಗಳ ಸ್ವಚ್ಛತೆ ಕಾರ್ಯ ಕೈಗೊಂಡಾಗ ಖುದ್ದು ಶಾಸಕರೇ ತಮ್ಮ ವಾಹನವನ್ನು ಬಿಟ್ಟು ಅದಿರು ಲಾರಿ ಚಾಲಕರಿಗೆ ಕೈಮುಗಿದು ಸ್ವಾಮಿ ಇದು ಕುಡಿಯುವ ನೀರು, ನೀವೇ ಕುಡಿಯುತ್ತೀರಿ. ಇತ್ತೀಚೆಗೆ ನಾರಿಹಳ್ಳದಲ್ಲಿ ಬುರುಗು ಹರಿಯುತ್ತಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣ ನಿಮ್ಮ ಲಾರಿಗಳನ್ನು ಹಳ್ಳದಿಂದ ಹೊರತನ್ನಿ ಎಂದು ಮನವಿ ಮಾಡಿದರು.

ಈ ಫೋಟೋವನ್ನು ಲಾರಿ ಚಾಲಕರು-ಕ್ಲಿನರ್‌ಗಳೇ ತೆಗೆದು ವೈರಲ್‌ ಮಾಡಿದ್ದಾರೆ. ಇದರಿಂದ ಬಹಳಷ್ಟು ಲಾರಿ ಚಾಲಕರು ಜಾಗೃತರಾಗುವರೇ ಕಾದು ನೋಡಬೇಕಾಗಿದೆ. ಶಾಸಕರು ತಾಲೂಕು ಪಂಚಾಯಿತಿ ಸಭೆ ನಡೆಸಿ ಯಾವುದೇ ಕಾರಣಕ್ಕೂ ನಾರಿಹಳ್ಳದಲ್ಲಿ ಯಾವುದೇ ವಾಹನಗಳನ್ನು ತೊಳೆಯಬಾರದು ಎಂದು ಬೋರ್ಡ್‌ ಹಾಕಬೇಕು. ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಪುರಸಭೆ, ತಹಶೀಲ್ದಾರ್‌ ಹಾಗೂ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಿದರೂ ನಾರಿಹಳ್ಳ ಮಲೀನವಾಗುತ್ತಿರುವುದು ಮಾತ್ರ ನಿಲ್ಲುತ್ತಿಲ್ಲ. ನಿತ್ಯ ನಲ್ಲಿಯಲ್ಲಿ ಬರುವ ನೀರು ಸಹ ಹೊಲಸಾಗುತ್ತಿರುವುದು ಸಾರ್ವಜನಿಕರಲ್ಲಿ ಅತಂಕವನ್ನು ಉಂಟುಮಾಡಿದೆ. ನಾರಿಹಳ್ಳ ಜಲಾಶಯಕ್ಕ ನೀರಿನ ಮೂಲಗಳಾದ ಬಂಡ್ರಿ, ಯಶವಂತನಗರ, ಕಾಳಿಂಗೇರಿ, ಚೋರುನೂರು, ಅಂಕಮನಾಳ್‌ ಓಬಳಾಪುರ ಕರೆಗಳಿಂದ ನೀರು ಹರಿದು ಬರುತ್ತವೆ. ಆ ಎಲ್ಲ ಭಾಗದ ನೀರಿನಲ್ಲಿಯೂ ಸಹ ಅದಿರು ಲಾರಿಗಳ ಧೂಳಿನ ಜೊತೆಗೆ ಸ್ವಚ್ಛತೆ ನಡೆಯುತ್ತಿವೆ. ಕನಿಷ್ಠವೆಂದರೂ ತಾಲೂಕಿನಾದ್ಯಂತ 5 ಸಾವಿರಕ್ಕೂ ಹೆಚ್ಚು ಲಾರಿಗಳು ಸ್ವಚ್ಛತೆ ಕಾರ್ಯಗಳನ್ನು ಇದರಲ್ಲಿಯೇ ಮಾಡುತ್ತಿದ್ದು ಯಾರೂ ಸಹ ತಡೆಯುವ ಪ್ರಯತ್ನ ಮಾಡುತ್ತಿಲ್ಲ ಎನ್ನುವುದು ಅತಂಕಕ್ಕೆ ಕಾರಣವಾಗಿದೆ.

 

­-ಬಸವರಾಜ ಬಣಕಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next