Advertisement
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ‘ನಾರೀ ಶಕ್ತಿ ಪುರಸ್ಕಾರ’ಕ್ಕೆ ಪಾತ್ರರಾದ 15 ಮಹಿಳೆಯರ ಪೈಕಿ 14 ಸಾಧಕಿಯರ ಜತೆ ರವಿವಾರ ತಮ್ಮ ಅಧಿಕೃತ ನಿವಾಸದಲ್ಲಿ ಪ್ರಧಾನಿ ಮೋದಿ ಸಂವಾದ ನಡೆಸಿದರು. ಈ ‘ಶಕ್ತಿಶಾಲಿ’ ನಾರಿಯರ ಸಾಧನೆಗಳು ವಿಶ್ವವಿದ್ಯಾನಿಲಯಗಳಿಗೆ ಅಧ್ಯಯನ ವಸ್ತುವಾಗಬಲ್ಲವು ಎಂದು ಶ್ಲಾಘಿಸಿದರು.
ಪುರಸ್ಕೃತ ಸಾಧಕಿಯರು: ಸಾಕ್ಷರತಾ ಕ್ಷೇತ್ರದಲ್ಲಿ ಸಾಧನೆ ಮೆರೆದ 105 ವರ್ಷದ ಭಾಗೀರತಿ ಅಮ್ಮ ಮತ್ತು 98ರ ಹರೆಯದ ಕಾತ್ಯಾಯಿನಿ ಅಮ್ಮ, 103ರ ಹರೆಯದ ಅಥ್ಲೀಟ್ ಮಾನ್ ಕೌರ್, ಭಾರತೀಯ ವಾಯುಪಡೆಯ ಮೊದಲ ಮಹಿಳಾ ಫೈಟರ್ ಪೈಲಟ್‌ಗಳಾದ ಮೋಹನಾ ಸಿಂಗ್, ಭಾವನಾ ಕಾಂತ್ ಮತ್ತು ವನಿ ಚತುರ್ವೇದಿ, ಕೃಷಿಕರಾದ ಪದಲಾ ಭೂದೇವಿ ಹಾಗೂ ಬೀನಾ ದೇವಿ, ಕಾಶ್ಮೀರದ ಕುಶಲಕರ್ಮಿ ಆರಿಫಾ, ಪರಿಸರವಾದಿ ಛಾಮಿ ಮುರ್ಮು, ಉದ್ಯಮಿ ನಿಲ್ಝಾ ವಾಂಗ್ಮೋ, ಆಟೋಮೋಟಿವ್ ಕ್ಷೇತ್ರದ ಸಂಶೋಧಕಿ ರಷ್ಮಿ ಉರ್ಧ್ವರ್ದೇಶೆ, ಬಡ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಡುವ ಕಲಾವತಿ ದೇವಿ, ಪರ್ವತಾರೋಹಿ ಅವಳಿ ಸಹೋದರಿಯರಾದ ತಾಶಿ ಮತ್ತು ನುಂಗ್‌ಶಿ ಮಲಿಕ್, ಶಾಸ್ತ್ರೀಯ ಗಾಯಕಿ ಕೌಶಿಕಿ ಚಕ್ರವರ್ತಿ ಅವರಿಗೆ ನಾರೀ ಶಕ್ತಿ ಪುರಸ್ಕಾರವನ್ನು ರಾಷ್ಟ್ರಪತಿಗಳು ಪ್ರದಾನ ಮಾಡಿದರು.