Advertisement
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಹಿರಿಯ ಶಾಸಕ ಎಚ್.ಕೆ. ಪಾಟೀಲ್ “ಉದಯವಾಣಿ’ಗೆ ನೀಡಿದ ಸಂದರ್ಶನದಲ್ಲಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದೇಶದ ಜಾತ್ಯತೀತ ಶಕ್ತಿಗಳೆಲ್ಲವೂ ಒಂದಾಗಿ ಹೋರಾಟ ಮಾಡಿ ಬಿಜೆಪಿಯನ್ನು ಎದುರಿಸಲಿವೆ ಎಂದು ತಿಳಿಸಿದರು. ಸಂದರ್ಶನದ ಸಾರಾಂಶ ಹೀಗಿದೆ:
ನಮ್ಮ ಪಕ್ಷದಲ್ಲಿ ಮಹತ್ವದ ಚುನಾವಣೆ ಸಂದರ್ಭದಲ್ಲಿ ಮೊದಲಿನಿಂದಲೂ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡುತ್ತ ಬಂದಿದ್ದಾರೆ. ಹಿಂದೆ ಎಸ್.ಎಂ. ಕೃಷ್ಣ, ಜನಾರ್ದನ ಪೂಜಾರಿ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಎಲ್ಲರೂ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಸದ್ಯದ ರಾಜಕೀಯ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನನ್ನನ್ನು ಪ್ರಚಾರ ಸಮಿತಿಗೆ ಸೂಕ್ತ ವ್ಯಕ್ತಿ ಎಂದು ನೇಮಿಸಿದ್ದಾರೆ. ರಾಜ್ಯ ನಾಯಕರಲ್ಲಿ ಹೊಂದಾಣಿಕೆ ಇಲ್ಲದ ಸಂದರ್ಭದಲ್ಲಿ ಎಲ್ಲರನ್ನೂ ಹೇಗೆ ಒಗ್ಗೂಡಿಸಿಕೊಂಡು ಹೋಗುತ್ತೀರಿ?
ನಮ್ಮ ಪಕ್ಷದಲ್ಲಿ ರಾಜ್ಯಾಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿ ನಡುವೆ, ಶಾಸಕಾಂಗ ಪಕ್ಷದ ನಾಯಕ ಹಾಗೂ ಉಪ ಮುಖ್ಯಮಂತ್ರಿ ನಡುವೆ ಭಿನ್ನಾಭಿಪ್ರಾಯವಿದೆ ಎನ್ನುವ ಮಾತನ್ನು ಒಪ್ಪುವುದಿಲ್ಲ. ಕೆಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಗಳಿರಬಹುದು. ಆದರೆ, ಚುನಾವಣೆ ಎದುರಿಸಲು ಅದೆಲ್ಲವೂ ಗಣನೆಗೆ ಬರುವುದಿಲ್ಲ.
Related Articles
ಹೌದು, ಆ ರೀತಿಯ ಅಭಿಪ್ರಾಯ ನಮ್ಮ ಪಕ್ಷದ ಕೆಲವರಲ್ಲಿದೆ. ಸೀಟು ಹಂಚಿಕೆಯಲ್ಲಿ ನಾವು ಕೆಲವು ಸೀಟುಗಳನ್ನು ಬಿಟ್ಟುಕೊಡುವ ಪ್ರಸಂಗ ಬರಬಹುದು. ಆದರೆ, ಜಾತ್ಯತೀತ ಶಕ್ತಿಗಳು ಒಂದಾಗಿ
ಚುನಾವಣೆ ಎದುರಿಸುವುದರಿಂದ ಹೆಚ್ಚಿನ ಸ್ಥಾನ ಗೆಲ್ಲಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವಿದೆ. ಹೀಗಾಗಿ ಜೆಡಿಎಸ್ ಜತೆಗಿನ ಸೀಟು ಹಂಚಿಕೆಯನ್ನು ಬಹುತೇಕ ನಾಯಕರು ಒಪ್ಪಿಕೊಂಡಿದ್ದಾರೆ.
Advertisement
ರಾಷ್ಟ್ರೀಯ ಪಕ್ಷವಾಗಿ ಕಾಂಗ್ರೆಸ್ ದೇವೇಗೌಡ ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆಯಲ್ಲ?ನಮ್ಮಲ್ಲಿ ಸಮನ್ವಯ ಸಮಿತಿಯಿದೆ. ಆ ಸಮಿತಿ ಎಲ್ಲವನ್ನೂ ನೋಡುತ್ತಿದೆ. ಅಗತ್ಯ ಬಿದ್ದರೆ ರಾಷ್ಟ್ರೀಯ ಅಧ್ಯಕ್ಷರೇ ಮಧ್ಯ ಪ್ರವೇಶಿಸಿ ಎಲ್ಲವನ್ನೂ ಸರಿಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿಗಮ ಮಂಡಳಿ ನೇಮಕದಲ್ಲಿ ಮುಖ್ಯಮಂತ್ರಿ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿರಲಿಲ್ಲ. ಅದೆಲ್ಲವೂ ಈಗ ಮುಗಿದ ಅಧ್ಯಾಯ. ಆಪರೇಷನ್ ಕಮಲದ ಹಿಂದೆ ಕೈ ನಾಯಕರ ಕೈವಾಡವಿದೆಯಾ?
ಈ ಮಾತನ್ನು ನಾನು ಒಪ್ಪುವುದಿಲ್ಲ. ನಮ್ಮ ನಾಯಕರು ಯಾರಾದರೂ ಬಿಜೆಪಿಯವರಿಗೆ ರೆಸಾರ್ಟ್‌ಗೆ ಹೋಗಿ ಕುಳಿತುಕೊಳ್ಳಿ ಎಂದು ಹೇಳಿದ್ದಾರಾ? ಸಂಸ್ಕೃತಿಯ ಬಗ್ಗೆ ಮಾತನಾಡುವ ಬಿಜೆಪಿಯವರು ಸಂಕ್ರಾಂತಿ ಹಬ್ಬದ ದಿನ ರೆಸಾಟ್ìನಲ್ಲಿ ಹೋಗಿ ಉಳಿದುಕೊಳ್ಳುತ್ತಾರೆ. ಹಬ್ಬದ ದಿನ ನಾವು ಎಲ್ಲಿದ್ದರೂ ಮನೆಗೆ ಬರುತ್ತೇವೆ. ಬಿಜೆಪಿ ಯಾವ ಸಂಸ್ಕೃತಿಯನ್ನು ಪ್ರತಿಪಾದಿಸುತ್ತದೆ. ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರನ್ನು ಎರಡನೇ ದರ್ಜೆ ಪ್ರಜೆಗಳಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ನಿಮ್ಮ ಶಾಸಕರೇ ಮಾಡುತ್ತಿದ್ದಾರಲ್ಲ?
ರಾಜ್ಯದಲ್ಲಿ ಕೆಟ್ಟ ಶಕ್ತಿಗಳು ಸರ್ಕಾರವನ್ನು ಕೆಡಗುವ ಪ್ರಯತ್ನ ಮಾಡುತ್ತಿದ್ದವು. ಅವರಿಗೆ ಕಾಂಗ್ರೆಸ್ ಶಾಸಕರು ಬುದಿಟಛಿ ಕಲಿಸಿದ್ದಾರೆ. ಅವರ್ಯಾರೂ ರೆಸಾರ್ಟ್‌ಗೆ ಹೋಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಯವರು ಕುದುರೆ ವ್ಯಾಪಾರ ನಿಲ್ಲಿಸದಿದ್ದರೆ, ದೊಡ್ಡ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನು ಎದುರಿಸುವ ಶಕ್ತಿ ನಿಮ್ಮ ಪಕ್ಷಕ್ಕಿದೆಯಾ?
ಆ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ರಾಜ್ಯದಲ್ಲಿ ಎಲ್ಲಿ ಜೆಡಿಎಸ್ ಶಕ್ತಿ ಇಲ್ಲವೋ ಅಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸುತ್ತದೆ. ನಿಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಮಿಷ ಒಡ್ಡಿ, ಈ ಹುದ್ದೆ ನೀಡಿದ್ದಾರೆಂಬ ಮಾತು ಕೇಳಿ ಬರುತ್ತಿದೆಯಲ್ಲಾ ?
ನಾನು ಮಂತ್ರಿ ಸ್ಥಾನ ಸಿಗದಿದ್ದಾಗ ಮಂತ್ರಿಗಿರಿ ಯಾಕೆ ಕೊಡಲಿಲ್ಲ ಎಂದು ಕೇಳಿರಲಿಲ್ಲ. ಹಲವಾರು ಕಾರಣದಿಂದ ಆಗಿರುವ ಅಸಮಾಧಾನ ಪ್ರಕಟವಾಗಿರಬಹುದು. ನನ್ನ ಹಿರಿತನ. ಪಕ್ಷದಲ್ಲಿನ ಬದಟಛಿತೆ, ಮುಂದೆ ಯಾವುದೋ ಹುದ್ದೆ ಕೊಡುತ್ತಾರೆಂದು ಹುದ್ದೆ ಸ್ವೀಕರಿಸುವುದು ನನ್ನ ಮನಸ್ಥಿತಿಯಲ್ಲ. ನಾವೆಲ್ಲ ಕಾಂಗ್ರೆಸ್ ಬಿಲ್ಡರ್.ಅಧಿ ಕಾರಕ್ಕಾಗಿ ಪಕ್ಷದಲ್ಲಿ ಇದ್ದವರಲ್ಲ. ಅಧಿಕಾರದಲ್ಲಿ ಇಲ್ಲದಿದ್ದರೂ ಜನ ನಮ್ಮ ಜತೆಗಿದ್ದಾರೆ. ಶಂಕರ ಪಾಗೋಜಿ