Advertisement
ನಗರದ ಕದ್ರಿಹಿಲ್ಸ್‌ನ ಸಕೀìಟ್ ಹೌಸ್‌ನಲ್ಲಿ ವಾಸ್ತವ್ಯವಿದ್ದ ಪ್ರಧಾನಿ ಮೋದಿ ಮಂಗಳವಾರ ಮುಂಜಾನೆ ಉಪಾಹಾರ ಸೇವಿಸಿದರು. ಬಳಿಕ ತಿನಿಸು ಗಳ ಬಗ್ಗೆ ತನ್ನ ಸತ್ಕಾರಕ್ಕಾಗಿ ನೇಮಕಗೊಂಡಿದ್ದ ಸಿಬಂದಿ ಬಳಿ ಪ್ರಶಂಸೆ ವ್ಯಕ್ತ ಪಡಿಸಿದರು. ಪ್ರಧಾನಿಗಾಗಿ ಬೆಳಗ್ಗಿನ ಉಪಾಹಾರ ತಯಾರಿಸಿ, ಬಡಿಸಿದ ನಗರದ ಖಾಸಗಿ ಹೊಟೇಲ್‌ನ ಸಿಬಂದಿ ಹೇಳುವಂತೆ, ಮೋದಿಯವರ ಉಪಾಹಾರಕ್ಕೆ ಮೂಡೆ, ನೀರುದೋಸೆ, ಇಡ್ಲಿ, ಕೇಸರಿಬಾತ್, ಚಪಾತಿ, ವಡೆ, ಸಂಜೀರ, ಬಿಸ್ಕಾಟ್ ರೊಟ್ಟಿ; ವ್ಯಂಜನ ಗಳಾಗಿ ಸಾಂಬಾರ್, ದಾಳಿತೋವೆ, ಚಟ್ನಿ; ತಾಜಾ ಹಣ್ಣಿನ ರಸ, ಚಹಾ ಸಿದ್ಧಪಡಿಸಲಾಗಿತ್ತು. ಬೆಳಗ್ಗೆ 7 ಗಂಟೆಗೆ ಮೋದಿ ಅವರು ಉಪಾಹಾರ ಸೇವಿಸಲು ಕುಳಿತಾಗ ಸ್ಥಳೀಯ ಖಾದ್ಯ ಬಡಿಸು ವಂತೆ ಕೋರಿದರು.
ಹಾಗೂ ಸಂಜೀರಗಳನ್ನು ಕೂಡ ತಿಂದರು. ಬಳಿಕ ಕಲ್ಲಂಗಡಿ ಹಣ್ಣಿನ ಜ್ಯೂಸ್ ಸೇವಿಸಿದರು. ಇದಕ್ಕೆ ಮುನ್ನಬೆಳಗ್ಗೆ ಎದ್ದ ಕೂಡಲೇ ಯೋಗಾಭ್ಯಾಸ ನಡೆಸಿದ ಅವರು, ಅನಂತರ ಶುಂಠಿ ಚಹಾ ಹಾಗೂ ಬಿಸ್ಕತ್ ಸೇವಿಸಿದ್ದರು ಎಂದು ಬೆಳಗ್ಗಿನ ಉಪಾಹಾರದ ವ್ಯವಸ್ಥೆ ಗೊಳಿಸಿದ್ದ ಸಿಬಂದಿ “ಉದಯ ವಾಣಿ’ಗೆ ತಿಳಿಸಿದ್ದಾರೆ.
Related Articles
ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯವಾಗಿ ಬೆಳಗ್ಗಿನ ಉಪಾಹಾರವನ್ನು ಸ್ವಲ್ಪ ಹೆಚ್ಚೇ ಸೇವಿಸುತ್ತಾರಂತೆ. ನಗರದಲ್ಲಿ ತನಗೆ ಉಪಾಹಾರವಾಗಿ ತಯಾರಿಸಲಾಗಿದ್ದ ತಿನಿಸುಗಳಲ್ಲಿ ಸ್ಥಳೀಯ ರುಚಿಗಳನ್ನು ಸ್ವಲ್ಪ ಜಾಸ್ತಿಯಾಗಿಯೇ ಸೇವಿಸಿದ ಬಳಿಕ ಜತೆಗಿದ್ದವರ ಜತೆ ಖುಷಿ ಹಂಚಿಕೊಂಡ ಮೋದಿ, “ಇಂದು ಹೆಚ್ಚು ತಿಂಡಿ ತಿಂದಿದ್ದೇನೆ. ತೂಕ ಎರಡು ಕಿಲೋ ಜಾಸ್ತಿಯಾಗಬಹುದೇನೋ’ ಎಂದು ನಗೆ ಚಟಾಕಿ ಹಾರಿಸಿದರು.
Advertisement
ಉಪಾಹಾರವನ್ನು ಮಂಗಳೂರಿನ ಓಶಿಯನ್ ಪರ್ಲ್ ಹೊಟೇಲ್‌ನವರು ಸಿದ್ಧಪಡಿಸಿದ್ದರು. ಸಕೀìಟ್ ಹೌಸ್‌ನ ಹಳೆ ಕಟ್ಟಡದಲ್ಲಿರುವ ಭೋಜನಶಾಲೆಯಲ್ಲಿ ಉಪಾಹಾರ ತಯಾರಿಸಲಾಗಿತ್ತು. ಬಾಣಸಿಗರು ಸೋಮವಾರ ರಾತ್ರಿಯೇ ಸಕೀìಟ್ ಹೌಸ್‌ನಲ್ಲಿ ತಂಗಿದ್ದು, ಉಪಾಹಾರ ತಯಾರಿಗೆ ಅವಶ್ಯವಿರುವ ಸಿದ್ಧತೆಗಳನ್ನು ಮಾಡಿದ್ದರು. ಚಟ್ನಿ ಹಾಗೂ ಸಾಂಬಾರು ಹೊರತುಪಡಿಸಿ ಉಳಿದೆಲ್ಲ ತಿನಿಸುಗಳನ್ನು ಸ್ಥಳದಲ್ಲೇ ಮುಂಜಾನೆ ತಯಾರಿಸಲಾಗಿತ್ತು. ಆಹಾರ ತಯಾರಿ ಸ್ಥಳದಲ್ಲಿ ರಾಜ್ಯ ಆಹಾರ ಸುರಕ್ಷತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಅಧಿಕಾರಿಗಳು ಅಡುಗೆ ತಯಾರಕ ಸಿಬಂದಿ ಜತೆಗೆ ರಾತ್ರಿಯಿಂದಲೇ ಇದ್ದರು.
ಓಶಿಯನ್ ಪರ್ಲ್ ಹೊಟೇಲ್‌ನ ಎಕ್ಸಿಕ್ಯೂಟಿವ್ ಚೆಫ್ ದೇವಬ್ರತ ಮಂಡಲ್ ಅವರ ನೇತೃತ್ವದ ತಂಡ ಬೆಳಗ್ಗಿನ ಉಪಾಹಾರವನ್ನು ಸಿದ್ಧಪಡಿಸಿತ್ತು. ಬಿ. ಎನ್. ಗಿರೀಶ್, ಕೆ. ಪಿ. ಸಿಂಗ್, ಪ್ರೇಮ್ ಕುಮಾರ್ ಸೇರಿದಂತೆ ಎಂಟು ಮಂದಿಯ ತಂಡ ಪ್ರಧಾನಿಯವರ ಉಪಚಾರ ನೋಡಿಕೊಂಡಿತ್ತು.
ಮೂಲತಃ ಪ. ಬಂಗಾಲದವರಾದ ದೇವಬ್ರತ ಈ ಹಿಂದೆ ರಾಷ್ಟ್ರಪತಿಯಾಗಿದ್ದ ಪ್ರಣವ್ ಮುಖರ್ಜಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂತಾದ ಅತೀ ಗಣ್ಯರಿಗೆ ಭೋಜನ ಹಾಗೂ ಉಪಾಹಾರ ಸಿದ್ಧಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸೂಟ್ ನಂ.1ರಲ್ಲಿ ಪ್ರಧಾನಿಹೊಸ ಸಕೀìಟ್ ಹೌಸ್‌ನ 1ನೇ ನಂಬರ್ ಸೂಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಂಗಿದ್ದರು. ಪಕ್ಕದ 2ನೇ ನಂಬರ್ ಸೂಟ್‌ನಲ್ಲಿ ಅವರ ಆಪ್ತ ಸಹಾಯಕರಾದ ದೀಪಕ್ ಜೋಶಿ ಹಾಗೂ ಬದ್ರಿ ಮೀನಾ ವಾಸ್ತವ್ಯವಿದ್ದರು. ಇದರ ಪಕ್ಕದ ಕೊಠಡಿಯಲ್ಲಿ ಆಪ್ತ ಕಾರ್ಯದರ್ಶಿ ಸಂಜೀವ್ ಸಿಂಗ್ ಉಳಿದು ಕೊಂಡಿದ್ದರು. ಇನ್ನುಳಿದ ಕೊಠಡಿಗಳಲ್ಲಿ ಪ್ರಧಾನಿ ಕಾರ್ಯಾಲಯದ ಹೆಚ್ಚುವರಿ ಕಾರ್ಯದರ್ಶಿ ತರುಣ್ ಬಗ್ಗಲ್, ಪ್ರಧಾನಿಯವರ ಪಿಪಿ ನಮಿತ್ ವಿಗ್, ಎಂಟಿಎಸ್‌ಗಳಾದ ಯು. ಜಿ. ಜೋಶಿ, ಅನೀಸ್ ಕುಮಾರ್, ಎಸ್‌ಪಿಜಿ ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ ಮೊದಲಾದವರು ವಾಸ್ತವ್ಯ ಹೂಡಿದ್ದರು. ಈ ಕಟ್ಟಡದಲ್ಲಿ ಒಟ್ಟು 3 ಸೂಟ್‌ಗಳು (ಐಷಾರಾಮಿ ಕೊಠಡಿ) ಹಾಗೂ ಇತರ 8 ಕೊಠಡಿಗಳಿವೆ. ಉಪಾಹಾರ ತಯಾರಿಸಿದವರ ಜತೆ ಫೋಟೋ
ಉಪಾಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, ಬಳಿಕ ಅದನ್ನು ಸಿದ್ಧಪಡಿಸಿದ ಮತ್ತು ಬಡಿಸಿದ ಎಲ್ಲ ಸಿಬಂದಿ ಜತೆ ಫೋಟೋ ತೆಗೆಸಿಕೊಂಡು ಸರಳತೆಯನ್ನು ಮೆರೆದರು. ಪ್ರಧಾನಿಯವರ ಜತೆಗೆ ಫೋಟೋ ತೆಗೆಸಿಕೊಳ್ಳಲು ಒದಗಿದ ಅವಕಾಶ ಸಿಬಂದಿಯನ್ನು ಪುಳಕಿತಗೊಳಿಸಿತು. ಇದು ಬದುಕಿನ ಅತ್ಯಂತ ಮಹಣ್ತೀದ ದಿನ ಎಂದು ಅವರು ಸಂಭ್ರಮ ವ್ಯಕ್ತಪಡಿಸಿದರು.