Advertisement

ಹಜ್‌ ಸಬ್ಸಿಡಿ ರದ್ದು: ಮೋದಿ ಕ್ರಮ ಮುಸ್ಲಿಮರಿಗೆ ಸಂಕಷ್ಟ: ಲಾಲು

03:44 PM Jan 17, 2018 | udayavani editorial |

ಹೊಸದಿಲ್ಲಿ : ಬಹು ಕೋಟಿ ಮೇವು ಹಗರಣದಲ್ಲಿ ಮೂರೂವರೆ ವರ್ಷಗಳ ಅವಧಿಗೆ ಜೈಲು ಪಾಲಾಗಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರು ಪ್ರಧಾನಿ ನರೇಂದ್ರ ಮೋದಿ ಸರಕಾರ ಮುಸ್ಲಿಮರ ಹಜ್‌ ಯಾತ್ರೆಗೆ ಸಬ್ಸಿಡಿ ನೀಡುವುದನ್ನು ನಿಲ್ಲಿಸುವ ಮೂಲಕ ಮುಸ್ಲಿಮರಿಗೆ ತೊಂದರೆ ಉಂಟುಮಾಡಿದ್ದಾರೆ ಎಂದು ಟೀಕಿಸಿದ್ದಾರೆ. 

Advertisement

ಮೇವು ಹಗರಣದ ಇನ್ನೊಂದು ಕೇಸಿಗೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾದ ಲಾಲು, ಕೋರ್ಟ್‌ ಆವರಣದಲ್ಲಿ  ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಪ್ರಧಾನಿ ಮೋದಿ ಸರಕಾರದ ಕ್ರಮಗಳು ಮುಸ್ಲಿಮರನ್ನು ಸಂಕಷ್ಟಕ್ಕೆ ಗುರಿ ಮಾಡುವಂತಿವೆ ಎಂದು ಟೀಕಿಸಿದರು. 

ವಿಶ್ವ ಹಿಂದು ಪರಿಷತ್‌ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ತೊಗಾಡಿಯಾ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಲಾಲು, “ಝಡ್‌ ಪ್ಲಸ್‌ ಭದ್ರತೆಯನ್ನು ಬಿಟ್ಟು ತೊಗಾಡಿಯಾ ಹೋದದ್ದಾದರೂ ಎಲ್ಲಿಗೆ ಎಂಬುದನ್ನು ಅವರು ಜನರಿಗೆ ತಿಳಿಸಬೇಕಾಗಿದೆ ಎಂದು ಹೇಳಿದರು. 

ತಮ್ಮನ್ನು ಎನ್‌ಕೌಂಟರ್‌ ಮಾಡಿ ಮುಗಿಸುವ ರಾಜಸ್ಥಾನ ಪೊಲೀಸರ ಯೋಜನೆಯಿಂದ ತಪ್ಪಿಸಿಕೊಳ್ಳಲು ತಾನು ನಾಪತ್ತೆಯಾಗಬೇಕಾಯಿತು ಎಂದಿರುವ ತೊಗಾಡಿಯಾ ಪ್ರಕರಣ ನಿಗೂಢವಾಗಿರುವುದರಿಂದ ಆ ಬಗ್ಗೆ ತನಿಖೆಯಾಗಬೇಕು ಎಂದು ಲಾಲು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next