Advertisement

ಬ್ಯಾಂಕ್‌ ಖಾತೆ ಇಲ್ಲದ 2 ಬಿಲಿಯ ಜನರಿಗಾಗಿ ಎಪಿಕ್ಸ್‌: ಮೋದಿ ಅನಾವರಣ

03:54 PM Nov 13, 2018 | udayavani editorial |

ಸಿಂಗಾಪುರ : ಬ್ಯಾಂಕ್‌ ಖಾತೆ ಇಲ್ಲದ ಜಗತ್ತಿನ ಸುಮಾರು ಎರಡು ಶತಕೋಟಿ ಜನರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈ ವಾರ ಎಪಿಕ್ಸ್‌ (APIX) ಎಂಬ ಹೆಸರಿನ ತಂತ್ರಾಂಶವನ್ನು  ಇಲ್ಲಿ ಬಿಡುಗಡೆ ಮಾಡಲಿದ್ದಾರೆ. 

Advertisement

ಸಿಂಗಾಪುರದಲ್ಲಿ ಈ ವಾರಾಂತ್ಯ ನಡೆಯುವ ಹಣಕಾಸು ತಂತ್ರಜ್ಞಾನ ಕಂಪೆನಿಗಳ ವಿಶ್ವದ ಅತೀ ದೊಡ್ಡದೆನಿಸುವ, ಸುಮಾರು 30,000 ಜನರು ಸೇರುವ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದು ಆ ಸಂದರ್ಭದಲ್ಲೇ ಎಪಿಕ್ಸ್‌  ಅನಾವರಣಗೊಳ್ಳಲಿದೆ.

ಪೂರ್ವ ಏಶ್ಯ ಮತ್ತು ಆಸಿಯಾನ್‌ ಸೇರಿದಂತೆ ನ.14ರಿಂದ 15ರ ವರೆಗೆ ನಡೆಯಲಿರುವ ಸರಣಿ ಶೃಂಗದಲ್ಲಿ ಭಾಗವಹಿಸುವುದಕ್ಕಾಗಿ ಪ್ರಧಾನಿ ಮೋದಿ ಅವರು ಸಿಂಗಾಪುರದಲ್ಲಿರುತ್ತಾರೆ. ಈ ಸಂದರ್ಭದಲ್ಲೇ ಅವರು ಜಾಗತಿಕ ಫಿನ್‌ಟೆಕ್‌ ಕಂಪೆನಿಗಳ ಪ್ರತಿನಿಧಿಗಳು ಬೃಹತ್‌ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಫಿನ್‌ಟೆಕ್‌ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಾರೆ. ಈ ಸಮಾವೇಶದಲ್ಲಿ 400 ಪ್ರದರ್ಶಕರನ್ನು ಒಳಗೊಂಡ ಭಾರತದ ಅತೀ ದೊಡ್ಡ ತಂಡ ಪಾಲ್ಗೊಳ್ಳಲಿದೆ. 

ಬ್ಯಾಂಕ್‌ ಖಾತೆಯೇ ಇಲ್ಲದೆ ವಿಶ್ವದ ಸುಮಾರು ಎರಡು ಶತಕೋಟಿ ಜನರಿಗೆ ಬ್ಯಾಂಕಿಂಗ್‌ ಸೌಕರ್ಯ ಕಲ್ಪಿಸುವ ಎಪಿಕ್ಸ್‌ ತಂತ್ರಾಂಶವನ್ನು ಹೈದರಾಬಾದ್‌, ಕೊಲಂಬೋ ಮತ್ತು ಲಂಡನ್‌ನಲ್ಲಿರುವ ಟೆಕ್‌ ಪರಿಣತರು ವಿನ್ಯಾಸಗೊಳಿಸಿದ್ದಾರೆ.

ಬಾಸ್ಟನ್‌ನಲ್ಲಿ ಪ್ರಧಾನ ಕಾರ್ಯಾಲಯ ಹೊಂದಿರುವ ವಿರ್ಟುಸಾ ಅಭಿವೃದ್ಧಿ ಪಡಿಸಿರುವ ಅತ್ಯಾಧುನಿಕ ತಂತ್ರಜ್ಞಾನದ ಎಪಿಕ್ಸ್‌, ಅತ್ಯಂತ ದೂರ ಪ್ರದೇಶಗಳಲ್ಲಿರುವ ಜನರನ್ನು ಸಣ್ಣ ಬ್ಯಾಂಕುಗಳು ಮತ್ತು 3 ಹಾಗೂ 4ನೇ ಹಂತದ ಬ್ಯಾಂಕಿಂಗ್‌  ಸಂಸ್ಥೆಗಳು ತಲುಪುವುದಕ್ಕೆ ಅವಕಾಶ ಕಲ್ಪಿಸುತ್ತದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next