Advertisement

ಮೋದಿ ಗುಂಪಿಗೆ ಬರಲಿರುವ “ಆಪ್ತರಕ್ಷಕ’

09:50 AM Feb 27, 2018 | Team Udayavani |

ಹೊಸದಿಲ್ಲಿ: 2014ರ ಲೋಕಸಭೆ ಚುನಾವಣೆ, ಅದಕ್ಕೂ ಹಿಂದಿನ ಗುಜರಾತ್‌ ವಿಧಾನಸಭೆ ಚುನಾವಣೆಗಳಲ್ಲಿ ನರೇಂದ್ರ ಮೋದಿಯವರ ಗೆಲುವಿಗೆ ಬೇಕಾದ ರೀತಿಯಲ್ಲಿ ಪ್ರಚಾರ ಕಾರ್ಯ ತಂತ್ರ ರೂಪಿಸಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್‌ ಕಿಶೋರ್‌, 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಹೊತ್ತಿಗೆ ಪುನಃ ಮೋದಿ ಗುಂಪನ್ನು ಸೇರಿಕೊಳ್ಳಲಿದ್ದಾರೆಂದು ಮೂಲಗಳು ತಿಳಿಸಿವೆ.

Advertisement

ಇತ್ತೀಚೆಗೆ, ಪ್ರಧಾನಿ ಮೋದಿಯವರು ಕಿಶೋರ್‌ ಅವರನ್ನು ಕರೆ ಯಿಸಿ ಕೊಂಡು ಮಾತುಕತೆ ನಡೆ ಸಿದ್ದು, ಸದ್ಯದಲ್ಲೇ ಅವರು 2019ರ ಚುನಾವಣೆಗೆ ಕಾರ್ಯ ತಂತ್ರ ರೂಪಿಸಲಿ ದ್ದಾರೆಂದು ಹೇಳಲಾಗಿದೆ. ಮೋದಿ ಪ್ರಧಾನಿಯಾದ ಅನಂತರ, ಬಿಜೆಪಿಯ ಕೆಲ ಹಿರಿಯ ನಾಯಕರೊಂದಿಗೆ ಕೊಂಚ ಭಿನ್ನಮತ ಏರ್ಪಟ್ಟಿದ್ದರಿಂದ ಕಿಶೋರ್‌ ಅವರು ಮೋದಿ ಆಪ್ತ ವಲಯದಿಂದ ದೂರಾಗಿದ್ದರು. ಬಿಹಾರದ ಮಹಾಘಟ ಬಂಧನ್‌ (ಆರ್‌ಜೆಡಿ-ಜೆಡಿಯು) ಹಾಗೂ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತಿದ್ದರು. ಆದರೂ ಮೋದಿಯವರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದರು. ಹಾಗಾಗಿ, ಮೋದಿಯವರು ಇವರನ್ನು ಪುನಃ ತಮ್ಮ ಗುಂಪಿಗೆ ಸೇರಿಸಿಕೊಳ್ಳಲು ಇಚ್ಛಿಸಿದ್ದು, ಸದ್ಯದಲ್ಲೇ ಕಿಶೋರ್‌ ಇತ್ತ ಬರಲಿದ್ದಾ ರೆಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next