Advertisement

ಮೋದಿ ಪ್ರಧಾನಿಯಾಗಿಸಲು ಶ್ರಮಿಸಿ

07:14 AM Mar 03, 2019 | Team Udayavani |

ಬೀದರ: ದೇಶಕ್ಕೆ ಇನ್ನೊಮ್ಮೆ ಮೋದಿ ಅವರನ್ನು ಪ್ರಧಾನ ಮಂತ್ರಿ ಮಾಡುವ ನಿಟ್ಟಿನಲ್ಲಿ ಮುಂದಿನ 60 ದಿನಗಳ ಕಾಲ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಎಂದು ಸಂಸದ ಭಗವಂತ ಖೂಬಾ ಹೇಳಿದರು. ಭಾರತದಾದ್ಯಂತ ಏಕಕಾಲಕ್ಕೆ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಕಮಲ ಸಂದೇಶ ಬೈಕ್‌ ರ್ಯಾಲಿ ಏರ್ಪಡಿಸಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೈಕ್‌ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ದೇಶಕ್ಕೆ ಮೋದಿ ಬೇಕು. ಮೋದಿ ಅವರಿಗೆ ದೇಶಬೇಕು. ಕಾರಣ ಪಕ್ಷದ ಕಾರ್ಯಕರ್ತರು ಪಕ್ಷದ ಪರ ಕೆಲಸ ಮಾಡಿ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿಗಳಾಗಿ ಮಾಡಬೇಕು ಎಂದು ಹೇಳಿದರು. ನಂತರ ಬೈಕ್‌ ಹತ್ತಿದ ಸಂಸದ ಭಗವಂತ ಖೂಬಾ ನಗರದ ವಿವಿಧೆಡೆ ಸಂಚರಿಸಿ ಪಕ್ಷದ ಪ್ರಚಾರ ನಡೆಸಿದರು. ಪಕ್ಷದ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಅರುಣಕುಮಾರ ಪಾಟೀಲ, ವಿಜಯಕುಮಾರ ಪಾಟೀಲ, ಈಶ್ವರಸಿಂಗ್‌ ಠಾಕೂರ್‌, ಗುರುನಾಥ ರಾಜಗೀರಾ, ಶಶಿಧರ್‌ ಹೊಸಳ್ಳಿ, ರಾಜಾರಾಮ, ಅಂಬರೀಷ್‌, ಕೈಲಾಸನಾಥ, ಮಹೇಶ್ವರ ಸ್ವಾಮಿ, ಬಾಬುರಾವ್‌ ಮದಕಟ್ಟಿ ಹಾಗೂ ಅನೇಕರು ಭಾಗವಹಿಸಿದ್ದರು.

ಬೀದರ ದಕ್ಷಿಣ ಕ್ಷೇತ್ರದಲ್ಲಿ: ಬೀದರ್‌ ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಬೈಕ್‌ ರ್ಯಾಲಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೇಲ್ದಾಳೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನ ಮಂತ್ರಿಯಾಗಿ ಮಾಡುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಗೆ ಮುಂದಾಗಬೇಕು. ಕೇಂದ್ರ ಸರ್ಕಾರದ ವಿವಿಧ ಜನಪರ ಯೋಜನೆಗಳ ಕುರಿತು ಜನರಿಗೆ ಮನವರಿಕೆ ಮಾಡುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು. 

ಯುವ ಮೋಚಾ ಅಧ್ಯಕ್ಷ ಜನಾರ್ಧನರೆಡ್ಡಿ, ಮಂಡಲ ಅಧ್ಯಕ್ಷ ಜಗನ್ನಾಥ ಪಾಟೀಲ, ಘಾಳೆಪ್ಪ ರೆಡ್ಡಿ, ಚಂದು ಪಾಟೀಲ, ಸುರೇಶ ಮಾಶೆಟ್ಟಿ, ಶಂಕರೆಡ್ಡಿ, ರಾಜು ಮಾಳಗೆ, ಪ್ರಭು ಮೆಂಗ, ಶ್ರೀನಿವಾಸ ಪತ್ತಾರ, ಸಂತೋಷ ಸೊರಳಿ, ಶ್ರೀನಿವಾಸರೆಡ್ಡಿ, ಬಸವರಾಜ ಸಿಂದಬಂದಗಿ, ಧನರಾಜ ಪೂಶೆಟ್ಟಿ, ಸಾಯಿನಾಥ ಪಾಟೀಲ, ಆಕಾಶರೆಡ್ಡಿ, ಅಮರ ಕಪಲಾಪುರ, ಆಬೇದ ಅಲಿ ಹಾಗೂ ಇತರರು ಇದ್ದರು.

Advertisement

ಶನಿವಾರ ನಗರದಲ್ಲಿ ಬಿಜೆಪಿ ವತಿಯಿಂದ ನಡೆದ ವಿಜಯ ಸಂಕಲ್ಪ ಬೈಕ್‌ ರ್ಯಾಲಿಯಲ್ಲಿ ಸಂಸದ ಭಗವಂತ ಖೂಬಾ ಸೇರಿದಂತೆ ಪಕ್ಷದ ಕಾರ್ಯಕರ್ತರು ಹೆಲ್ಮೆಟ್‌ ಧರಿಸದೇ ಬೈಕ್‌ ಚಾಲನೆ ಮಾಡಿರುವ ಕುರಿತು ಸಾಮಾಜಿಕ ಜಾಲ ತಾಣಗಳಲ್ಲಿ ವಿರೋಧ ವ್ಯಕ್ತವಾಗಿದೆ. ಒಬ್ಬ ವ್ಯಕ್ತಿ ಹೆಲ್ಮೆಟ್‌ ಧರಿಸದೇ ಸಂಚಾರ ಮಾಡಿದರೆ ಪೊಲೀಸರು ತಡೆದು ದಂಢ ವಿಧಿಸುತ್ತಿದ್ದಾರೆ.

ನಗರದಲ್ಲಿ ರಾಜಾರೋಷವಾಗಿ ಹೆಲ್ಮೆಟ್‌ ಇಲ್ಲದೆ ಬೈಕ್‌ ರ್ಯಾಲಿ ನಡೆಸಿರುವುದು ಎಷ್ಟು ಸರಿ? ಬೇಸಿಗೆ ಎಂದು ಪೊಲೀಸ್‌ ಅಧಿಕಾರಿಗಳು ವಿನಾಯಿತಿ ನೀಡಿದ್ದಾರೆಯೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಬೈಕ್‌ ರ್ಯಾಲಿ ಸಂದರ್ಭದಲ್ಲಿ ಕೂಡ ಪೊಲೀಸರು ನಿಸ್ಸಹಾಯಕರಂತೆ ನೋಡುತ್ತಿರುವುದು ಕಂಡು ಬಂತು.

Advertisement

Udayavani is now on Telegram. Click here to join our channel and stay updated with the latest news.

Next