Advertisement

ಫಿಫಾ ಅಧ್ಯಕ್ಷರಿಂದ ಮೋದಿಗೆ ವಿಶೇಷ ಉಡುಗೊರೆ

06:35 AM Dec 03, 2018 | Team Udayavani |

ಬ್ಯೂನಸ್‌ ಐರಿಸ್‌ (ಆರ್ಜೆಂಟೀನಾ): ಜಿ-20 ಶೃಂಗಸಭೆಗಾಗಿ ಅರ್ಜೆಂಟೀನಾಕ್ಕೆ ಆಗಮಿಸಿದ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವ ಪುಟ್‌ಬಾಲ್‌ ಆಡಳಿತ ಮಂಡಳಿ ಅಧ್ಯಕ್ಷ ಗಿಯಾನಿ ಇನಾ#ಂಟಿನೊ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಇದೇನು ಗೊತ್ತೇ?  ಮೋದಿ ಹೆಸರುಳ್ಳ ಫ‌ುಟ್‌ಬಾಲ್‌ ಜೆರ್ಸಿ!

Advertisement

“ಫ‌ುಟ್‌ಬಾಲ್‌ ಬಗ್ಗೆ ಯೋಚಿಸದೆ ಆರ್ಜೆಂಟೀನಾ ಪ್ರವಾಸ ಅಸಾಧ್ಯ. ಭಾರತದಲ್ಲಿ ಆರ್ಜೆಂಟೀನಾದ ಫ‌ುಟ್ಬಾಲಿಗರು ಭಾರೀ ಜನಪ್ರಿಯತೆ ಪಡೆದಿದ್ದಾರೆ. ಫಿಫಾ ಅಧ್ಯಕ್ಷ ಗಿಯಾನಿ ಇನಾ#ಂಟಿನೊ ಅವರಿಂದ ವಿಶೇಷ ಪುಟ್‌ಬಾಲ್‌ ಜೆರ್ಸಿಯೊಂದನ್ನು ಸ್ವೀಕರಿಸಿದ್ದೇನೆ. ಅವರ ಈ ಸನ್ನಡತೆಗೆ ಧನ್ಯವಾದಗಳು’ ಎಂದು ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಗುರುವಾರ “ಯೋಗ ಫಾರ್‌ ಪೀಸ್‌’ ಕುರಿತಾದ ಸಭೆಯಲ್ಲಿ ನರೇಂದ್ರ ಮೋದಿ ಅವರು ಫ‌ುಟ್‌ಬಾಲ್‌ ಮೂಲಕ ಭಾರತ-ಆರ್ಜೆಂಟೀನಾ ನಿಕಟ ಸಂಪರ್ಕ ಸಾಧಿಸಿದೆ ಎಂದಿದ್ದರು. “ಭಾರತದ ತತ್ವಶಾಸ್ತ್ರ, ಕಲೆ, ಸಂಗೀತ ಹಾಗೂ ನೃತ್ಯಗಳಲ್ಲಿ ಆರ್ಜೆಂಟೀನಾಕ್ಕೆ ಹೇಗೆ ಆಸಕ್ತಿ ಇದೆಯೋ ಹಾಗೆಯೇ ಆರ್ಜೆಂಟೀನಾ ಫ‌ುಟ್‌ಬಾಲ್‌ ತಾರೆಗಳಿಗೆ ಭಾರತದಲ್ಲಿ ಭಾರೀ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಮರಡೋನ ಅವರ ಹೆಸರು ಮನೆಮಾತಾಗಿದೆ’ ಎಂದು ಮೋದಿ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next