Advertisement

ಅಭಿನಂದನೆ: ಆರು ವರ್ಷ ಪೂರ್ಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA

08:24 AM May 17, 2020 | Nagendra Trasi |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಆರು ವರ್ಷಗಳ ಆಡಳಿತಾವಧಿಯನ್ನು ಶನಿವಾರ ಪೂರ್ಣಗೊಳಿಸಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಎನ್ ಡಿಎ ಜಯಭೇರಿ ಬಾರಿಸಿತ್ತು. ಮೇ 16ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಘೋಷಿಸಲಾಗಿತ್ತು.

Advertisement

2019ರ ಲೋಕಸಭಾ ಚುನಾವಣೆಯಲ್ಲಿಯೂ ನರೇಂದ್ರ ಮೋದಿ ಅವರ ಅಲೆ ಭರ್ಜರಿಯಾಗಿ ಇದ್ದ ಪರಿಣಾಮ ಎರಡನೇ ಬಾರಿಗೂ ಅಧಿಕಾರದ ಗದ್ದುಗೆ ಏರಿತ್ತು. ಎರಡನೇ ಅವಧಿಯಲ್ಲಿ ಆರನೇ ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಸಂಭ್ರಮ ವ್ಯಕ್ತಪಡಿಸುತ್ತಿದೆ.

ಬಿಜೆಪಿ ವಿಡಿಯೋವನ್ನು ಟ್ವೀಟ್ ಮಾಡಿದ್ದು, ನರೇಂದ್ರ ಮೋದಿಯಂತಹ ನಾಯಕತ್ವದಲ್ಲಿ ಭಾರತ ದಿಟ್ಟ ಹೆಜ್ಜೆಯನ್ನು ಇಡುತ್ತಿದ್ದು, ಕಳೆದ ಕೆಲವು ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಜನಪ್ರಿಯ ಯೋಜನೆಗಳ ಹೈಲೈಟ್ಸ್ ಅನ್ನು ಪ್ರದರ್ಶಿಸುವ ಮೂಲಕ ಶುಭ ಕೋರಿವೆ.

ಸ್ವಚ್ಛ ಭಾರತ್ ಅಭಿಯಾನ್, ಬೇಟಿ ಪಡಾವೋ, ಬೇಟಿ ಬಚಾವೋ ಕಾರ್ಯಕ್ರಮ, ಜನ್ ಧನ್ ಯೋಜನೆ ಮೊದಲ ಅವಧಿಯಲ್ಲಿನ ಜನಪ್ರಿಯ ಯೋಜನೆಯಾಗಿದ್ದವು. ಎರಡನೇ ಅವಧಿಯಲ್ಲಿ ಐತಿಹಾಸಿಕ ಅಯೋಧ್ಯೆ ತೀರ್ಪು, 370ನೇ ವಿಧಿ ರದ್ದು ಪ್ರಮುಖ ಮೈಲಿಗಲ್ಲಾಗಿದೆ. ಸುಮಾರು 9ನಿಮಿಷಗಳ ಕಾಲದ ವಿಡಿಯೋದಲ್ಲಿ ಸರ್ಕಾರದ ಸಾಧನೆ, ಅಭಿವೃದ್ದಿ ಯೋಜನೆಗಳ ಬಗ್ಗೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next