Advertisement

ಮೋದಿ ಬಂದ್ರೂ ಹೋದ್ರೂ ದೇಶ ಶಾಶ್ವತ

09:06 AM Nov 26, 2018 | Harsha Rao |

ಹೊಸದಿಲ್ಲಿ: “”ಮನ್‌ ಕೀ ಬಾತ್‌’ ಎಂಬುದು ರಾಜಕೀಯೇತರವಾದುದು. ಅದು ನನ್ನ ಅಥವಾ ಸರಕಾರದ ಸಾಧನೆಗಳನ್ನು ಹೇಳಿಕೊಳ್ಳುವ ಕಾರ್ಯಕ್ರಮ ಅಲ್ಲ. ಅದು ಇಡೀ ದೇಶದ ಕಾರ್ಯಕ್ರಮ. ಜನದನಿಯನ್ನೇ ಜನತೆ ಮುಂದಿಟ್ಟು ದೇಶವನ್ನು ಒಗ್ಗೂಡಿಸಲು ಮಾಡಿಕೊಂಡಿರುವ ಪ್ರತಿ ತಿಂಗಳ ರೇಡಿಯೋ ಕಾರ್ಯಕ್ರಮ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಪ್ರಧಾನಿ ಮನ್‌ ಕಿ ಬಾತ್‌ ಭಾನುವಾರ 50ನೇ ಕಂತು ಪೂರೈಸಿದ ಹಿನ್ನೆಲೆಯಲ್ಲಿ, ತಾವು ಮನದ ಮಾತನ್ನು ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಲು ಏಕೆ ಬಳಸಿಕೊಂಡಿಲ್ಲ ಎಂಬುದನ್ನು ಮೋದಿ ಈ ರೀತಿಯಾಗಿ ವಿವರಿಸಿದ್ದಾರೆ. ಅಲ್ಲದೆ, ತಮ್ಮ ಕಾರ್ಯಕ್ರಮದ ಉದ್ದೇಶದ ಬಗ್ಗೆಯೂ ಪುನರುಚ್ಚರಿಸಿದ್ದಾರೆ. “”ಸರಕಾರದ ಸಾಧನೆಗಳನ್ನು ಹೇಳಿಕೊಳ್ಳಲೆಂದು ಮನ್‌ ಕೀ ಬಾತ್‌ ಕಾರ್ಯಕ್ರಮ ಮಾಡುತ್ತಿಲ್ಲ. ವೈಯಕ್ತಿಕ ಅಥವಾ ರಾಜಕೀಯ ದಾಳವಾಗಿಯೂ ಈ ವೇದಿಕೆಯನ್ನು ಬಳಸಿಕೊಳ್ಳುತ್ತಿಲ್ಲ. ಆ ಉದ್ದೇಶವೂ ಇಲ್ಲ. ಮೋದಿ ಇಂದು ಬರುತ್ತಾರೆ, ನಾಳೆ ಹೋಗುತ್ತಾರೆ. ಆದರೆ ಈ ದೇಶ, ಅದರ ಸಂಸ್ಕೃತಿ, ಏಕತೆ ಶಾಶ್ವತವಾಗಿ ಇರುತ್ತದೆ” ಎಂದು ಹೇಳಿರುವ ಅವರು, ಜನರ ಕಳಕಳಿಗೆ ಸ್ಪಂದಿಸುವ ವೇದಿಕೆ ಇದಾಗಿದೆ ಎಂದಿದ್ದಾರೆ.

ಇದೇ ವೇಳೆ, ಮನೆಗಳಲ್ಲಿ ಹಿರಿಯರು ಮತ್ತು ಯುವಕರ ನಡುವೆ ಮುಕ್ತ ಮಾತುಕತೆ ನಡೆಯಬೇಕು. ನಿರೀಕ್ಷೆಯ ಬದಲು ಸ್ವೀಕಾರ, ನಿರ್ಲಕ್ಷ್ಯದ ಬದಲು ಸಂವಾದ ನಡೆಯಬೇಕು. ಆಗ ಕುಟುಂಬವೂ ಚೆನ್ನಾಗಿರುತ್ತದೆ. ನಾವು ಇನ್ನೊಬ್ಬರ ಹಕ್ಕುಗಳನ್ನು ಗೌರವಿಸಬೇಕು. ಆಗ ಸಹಜವಾಗಿ ನಮ್ಮ ಹಕ್ಕುಗಳ ಗೌರವೂ ಉಳಿದುಕೊಳ್ಳುತ್ತದೆ ಎಂದೂ ಹೇಳುವ ಮೂಲಕ ಯುವಜನತೆಗೆ ಮೋದಿ ಕಿವಿಮಾತು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next