Advertisement

ಮೋದಿ “ಆ್ಯಕ್ಷನ್‌ ಹೀರೋ’: ಸಿನ್ಹಾ

06:45 AM Oct 16, 2017 | Team Udayavani |

ಪಾಟ್ನಾ: ಬಿಜೆಪಿ ವಿರುದ್ಧ ಅಪಸ್ವರ ಎತ್ತುತ್ತಿರುವ ಪಕ್ಷದ ಲೋಕಸಭಾ ಸದಸ್ಯ, ಸಿನಿಮಾ ನಟ, ಶತ್ರುಘ್ನ ಸಿನ್ಹಾ ಅವರು ಈಗ ಪ್ರಧಾನಿ ಮೋದಿ ಅವರನ್ನು ದೇಶದ ಅತಿದೊಡ್ಡ “ಆಕ್ಷನ್‌ ಹೀರೋ’ ಎಂದು ಕರೆಯುವ ಮೂಲಕ ಟಾಂಗ್‌ ಕೊಟ್ಟಿದ್ದಾರೆ. 

Advertisement

ಕಳೆದ ಕೆಲವು ದಿನಗಳ ಹಿಂದೆ ಕನ್ನಡದ ನಟ ಪ್ರಕಾಶ್‌ ರೈ ಅವರು “ಮೋದಿ ಒಬ್ಬ ದೊಡ್ಡ ನಟ’ ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದರು. ಈಗ ಅದೇ ಧಾಟಿಯಲ್ಲಿ ಸಿನ್ಹಾ ಮಾತನಾಡಿರುವುದು ಬಿಜೆಪಿ ನಾಯಕರ ಕಣ್ಣು ಕೆಂಪಗಾಗಿಸಿದೆ. ಪ್ರಧಾನಿ ಮೋದಿ ಅವರ ಬಿಹಾರದ ಕಾರ್ಯಕ್ರಮಕ್ಕೆ ಶತ್ರುಘ್ನ ಸಿನ್ಹಾ ಗೈರಾಗಿದ್ದರು. 

ಇದೀಗ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುವ ಚಿಂತನೆ ನಡೆಯುತ್ತಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಈ ಕುರಿತು ಅವರಲ್ಲಿ ಪ್ರಶ್ನಿಸಿದಾಗ, “ಅಂಥದ್ದೇನೂ ಇಲ್ಲ. ನಾನು ಯಾವತ್ತೂ ಭಾರತದ ಅತಿದೊಡ್ಡ ಆ್ಯಕ್ಷನ್‌ ಹೀರೋ ಆಗಿರುವ ಪ್ರಧಾನಿ ಮೋದಿ ಅವರ ಜತೆಗಿದ್ದೇನೆ. ಆದರೆ, ಅವರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ತಡವಾಗಿ ನನ್ನ ಕೈಸೇರಿದೆ ಅಷ್ಟೆ’ ಎಂದು ಉತ್ತರಿಸಿದ್ದಾರೆ ಸಿನ್ಹಾ.

Advertisement

Udayavani is now on Telegram. Click here to join our channel and stay updated with the latest news.

Next