ನವದೆಹಲಿ : ‘ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಜಾತಿಯನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದಾರೆ. ಅವರು ನಕಲಿ, ತಮ್ಮ ಜಾತಿಯ ಬಗ್ಗೆ ದ್ವಂದ್ವ ಮಾಡುತ್ತಿದ್ದಾರೆ’ ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಲನ್ ಸಿಂಗ್ ಆರೋಪಿಸಿದ್ದಾರೆ.
ಇದನ್ನೂ ಓದಿ : ಅತ್ತ ಮೆದುಳಿನ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದರೆ, ಇತ್ತ ರೋಗಿಯಿಂದ ಸ್ಯಾಕ್ಸೋಫೋನ್ ವಾದನ
ಶುಕ್ರವಾರ ಇಲ್ಲಿ ಜೆಡಿಯು ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, “2014 ರಲ್ಲಿ ನರೇಂದ್ರ ಮೋದಿ ಅವರು ಅತ್ಯಂತ ಹಿಂದುಳಿದ ವರ್ಗ (ಇಬಿಸಿ) ಎಂದು ದೇಶಾದ್ಯಂತ ತಿರುಗಾಡಿದರು. ಗುಜರಾತ್‌ನಲ್ಲಿ ಇಬಿಸಿ ಇಲ್ಲ, ಒಬಿಸಿ ಮಾತ್ರ ಇರುವುದು. ಮೋದಿ ಗುಜರಾತ್ ಮುಖ್ಯಮಂತ್ರಿಯಾದಾಗ ತಮ್ಮ ಜಾತಿಯನ್ನು ಒಬಿಸಿಗೆ ಸೇರಿಸಿದ್ದಾರೆ, ಅವರು ನಕಲಿ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಲಲನ್ ಸಿಂಗ್ ಅವರ ಕ್ಷಮೆಗೆ ನಾಯಕರು ಆಗ್ರಹಿಸಿದ್ದಾರೆ.
”ಯಾವುದಕ್ಕಾಗಿ ಕ್ಷಮೆ? ನಾನು ಯಾವ ಕೆಟ್ಟ ಪದವನ್ನು ಬಳಸಿದ್ದೇನೆ? ‘ಬಹುರೂಪಿ’, ‘ಢೋಂಗಿ’ ಅಸಂಸದೀಯ ಭಾಷೆ ಎಂದು ಯಾವ ನಿಘಂಟಿನಲ್ಲಿದೆ? ಬೇರೆ ಬೇರೆ ರೂಪಗಳನ್ನು ತೆಗೆದುಕೊಳ್ಳುವ ಮತ್ತು ತಪ್ಪು ಸತ್ಯಗಳನ್ನು ಒದಗಿಸುವ ಮೂಲಕ ಜನರನ್ನು ದಾರಿತಪ್ಪಿಸಲು ಪ್ರಯತ್ನಿಸುವ ವ್ಯಕ್ತಿಯನ್ನು ನೀವು ಏನೆಂದು ಕರೆಯುತ್ತೀರಿ. ನಾನು ಅಸಂಸದೀಯ ಭಾಷೆ ಬಳಸಿಲ್ಲ” ಎಂದು ಲಲನ್ ಸಿಂಗ್ ತಿರುಗೇಟು ನೀಡಿದ್ದಾರೆ.