Advertisement

ಪ್ರಧಾನಿ ಮೋದಿ ಶ್ರೀಲಂಕಾ ಪ್ರವಾಸ ಆರಂಭ

01:00 AM May 12, 2017 | Team Udayavani |

ಕೊಲಂಬೋ: ದ್ವೀಪರಾಷ್ಟ್ರ ಶ್ರೀಲಂಕಾದೊಂದಿಗೆ ಚೀನ ತನ್ನ ಬಾಹುಳ್ಯ ವೃದ್ಧಿಗೊಳಿಸುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಎರಡು‌ ದಿನಗಳ ಶ್ರೀಲಂಕಾ ಪ್ರವಾಸ ಗುರುವಾರದಿಂದ ಆರಂಭಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಎರಡನೇ ಶ್ರೀಲಂಕಾ ಭೇಟಿ ಇದಾಗಿದೆ. ಅಂತಾರಾಷ್ಟ್ರೀಯ ವೆಸಕ್‌ ಡೇ (ಬೌದ್ಧ ಉತ್ಸವ)ದಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ. ಜೊತೆಗೆ ಭಾರತದ 150 ಕೋಟಿ ರೂ. ನೆರವಿನೊಂದಿಗೆ ನಿರ್ಮಿಸಲಾಗಿರುವ ಸುಸಜ್ಜಿತ ಆಸ್ಪತ್ರೆಯೊಂದನ್ನು ಉದ್ಘಾಟಿಸಲಿದ್ದಾರೆ. ಭಾರತೀಯ ಮೂಲದ ತಮಿಳರನ್ನುದ್ದೇಶಿಸಿ ಕಾರ್ಯಕ್ರಮವೊಂದರಲ್ಲಿ ಮಾತನಾಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next