Advertisement
ರವಿವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮವಾದ ಮನ್ ಕೀ ಬಾತ್‌ನಲ್ಲಿ ಮಾತನಾಡಿದ ಅವರು, “ನಮ್ಮ ದೇಶದೊಳಗೆ ಪೇಟೆಂಟ್‌ಗಳಿಗಾಗಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳು ವಿದೇಶಿ ಪೇಟೆಂಟ್ ಫೈಲಿಂಗ್‌ಗಳನ್ನು ಮೀರಿಸಿದೆ. ಇದು ಭಾರತದಲ್ಲಿ ಹೆಚ್ಚುತ್ತಿರುವ ವೈಜ್ಞಾನಿಕ ಸಾಮರ್ಥ್ಯ ವನ್ನು ತೋರಿ ಸುತ್ತಿದೆ. ಈ ದಶಕದಲ್ಲಿ ತಂತ್ರಜ್ಞಾನಗಳೇ ಪ್ರಮುಖ ಪಾತ್ರ ವಹಿಸಬೇಕು ಎಂಬ ನಮ್ಮ ಕನಸು ನನಸಾ ಗುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.
Related Articles
Advertisement
ಮಿಲ್ಲೆಟ್ಪ್ರಿನಿಯರ್ಸ್ಮನದ ಮಾತಿನಲ್ಲಿ ಹೆಚ್ಚಿನ ಸಮಯವನ್ನು “ಸಿರಿಧಾನ್ಯ’ಗಳ ಕುರಿತ ಮಾತಿಗೆ ಮೀಸಲಿಟ್ಟ ಪ್ರಧಾನಿ ಮೋದಿ, ಕರ್ನಾಟಕ ಸಹಿತ ದೇಶದ ವಿವಿಧ ರಾಜ್ಯಗಳಲ್ಲಿ ಸಿರಿಧಾನ್ಯಗಳ ಉದ್ದಿಮೆ ನಡೆಸುತ್ತಿರುವವರನ್ನು “ಮಿಲ್ಲೆಟ್‌ಪ್ರಿನಿಯರ್ಸ್’ ಎಂದು ಬಣ್ಣಿಸಿದರು. ಮಹಿಳೆಯರೇ ಸಿರಿಧಾನ್ಯಗಳಿಂದ ಕುಕೀಸ್, ರಸಗುಲ್ಲಾ, ಗುಲಾಬ್ ಜಾಮೂನು, ಕೇಕ್‌ಗಳನ್ನು ತಯಾರಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ನಮ್ಮ ದೇಶದಲ್ಲಿ ಜಿ-20 ಶೃಂಗದ ಸಭೆಗಳು ಎಲ್ಲೆಲ್ಲಿ ನಡೆಯುತ್ತಿವೆಯೋ ಅಲ್ಲೆಲ್ಲ ಸಿರಿಧಾನ್ಯಗಳಿಂದ ತಯಾರಿಸಿದ ಭಕ್ಷ್ಯಗಳನ್ನು ಬಡಿಸಲಾಗುತ್ತಿದೆ ಎಂದರು. ಇ-ತ್ಯಾಜ್ಯ ನಿರ್ವಹಣೆ
ಇ-ತ್ಯಾಜ್ಯಗಳ ಸಮರ್ಪಕ ನಿರ್ವಹಣೆ ಕುರಿತೂ ಮಾತನಾಡಿದ ಮೋದಿ, “ಇ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡದೇ ಇದ್ದರೆ ಅದು ನಮ್ಮ ಪರಿಸರಕ್ಕೆ ಹಾನಿ ಉಂಟುಮಾಡುತ್ತದೆ. ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡಿದರೆ ಅದರ ಮರುಬಳಕೆ ಆರ್ಥಿಕತೆಯಲ್ಲಿ ದೊಡ್ಡ ಪಾತ್ರ ವಹಿಸುತ್ತದೆ’ ಎಂದಿದ್ದಾರೆ.