ಹಾವೇರಿ: “ಮೋದಿ ಮುಖ ಸರಿಯಿಲ್ಲ ಎಂದು ಅವರ ಹೆಂಡತಿಯೇ ಅವರನ್ನು ಬಿಟ್ಟು ಹೋಗಿರುವಾಗ ಬಿಜೆಪಿ ಅಭ್ಯರ್ಥಿಗಳು ಮೋದಿ ಮುಖ ನೋಡಿ ಮತ ಕೊಡಿ ಎಂದು ಕೇಳುತ್ತಿರುವುದು ಹಾಸ್ಯಾಸ್ಪದ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ವ್ಯಂಗ್ಯವಾಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಬಿಜೆಪಿ ಅಭ್ಯರ್ಥಿಗಳು ಮೋದಿ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದು, ಇವರಿಗೆ ತಮ್ಮ ಮುಖ ತೋರಿಸೋಕೆ ಇಷ್ಟವಿಲ್ಲದಿದ್ದರೆ ಬೂರ್ಖಾ ಧರಿಸಿ ಜನರ ಬಳಿ ಬರಲಿ.
ಅಭ್ಯರ್ಥಿಗಳಾದವರು ತಾವು ಮಾಡಿದ ಸಾಧನೆ ಮುಂದಿಟ್ಟು ಮತ ಕೇಳಬೇಕು. ಆದರೆ, ಬಿಜೆಪಿಯವರು ಐದು ವರ್ಷಗಳ ಕಾಲ ಏನನ್ನೂ ಮಾಡದೇ ಈಗ ಅವರಿವರ ಮುಖ ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ’ ಎಂದು ಟೀಕಿಸಿದರು.
ಸಚಿವ ಜಮೀರ್ ಅಹ್ಮದ್ ಖಾನ್‌ಗೆ ಸಂಸ್ಕೃತಿ, ಸಂಸ್ಕಾರ ಗೊತ್ತಿಲ್ಲ. ಮೋದಿ ಅವರ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದು ಸರಿಯಲ್ಲ. ಮುಖ ಸರಿಯಿಲ್ಲ ಎಂದು ಪ್ರಧಾನಿ ಪತ್ನಿಯನ್ನು ಬಿಟ್ಟಿದ್ದಾರೆ ಎಂಬ ಮಾತು ಅವರ ಸಂಸ್ಕೃತಿ ತೋರಿಸುತ್ತದೆ.
-ಶ್ರೀರಾಮುಲು, ಶಾಸಕ