ಗುತ್ತಲ: ಭಾರತದಲ್ಲಿ ಕಾಂಗ್ರೆಸ್ ಸರಕಾರದ ದುರಾಡಳಿತಕ್ಕೆ ಬೇಸತ್ತ ಜನತೆ ಕರ್ನಾಟಕದಲ್ಲಿ ಮೈತ್ರಿ ಪಕ್ಷಗಳ ಭರವಸೆಗಳಿಗೆ ಮರುಳಾಗದೆ ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಮೋದಿ ಅವರಿಗೆ ಅಶೀರ್ವದಿಸಿದ್ದಾರೆ ಎಂದು ಎಂದು ಜಿಪಂ ಮಾಜಿ ಸದಸ್ಯ ವಸಂತ ಕಳಸಣ್ಣನವರ ಹೇಳಿದರು.
ಪಟ್ಟಣದ ರುದ್ರಮುನಿ ಶಿವಯೋಗೀಶ್ವರ ವೃತ್ತದಲ್ಲಿ ಬಿಜೆಪಿ ಯುವಮೋರ್ಚಾ ಮತ್ತು ಮುಖಂಡರು ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿಯವರ ಗೆಲುವಿನ ಸಂಭ್ರಮಾಚರಣೆ ಬಳಿಕ ಮಾತನಾಡಿದ ಅವರು, ಭಾರತ ಮುನ್ನಡೆಸಲು ಮೋದಿ ಅವರು ಸಮರ್ಥ ನಾಯಕ. ಆದರೆ, ಕಾಂಗ್ರೆಸ್ ಹಾಗೂ ಮೈತ್ರಿ ಪಕ್ಷಗಳಲ್ಲಿ ಸರಿಯಾದ ನಾಯಕತ್ವ ಇಲ್ಲ. ಮುಂದಿನ 5 ವರ್ಷಗಳಲ್ಲಿ ಭಾರತವನ್ನು ವಿಶ್ವಗುರುವನ್ನಾಗಿ ನಿರ್ಮಾಣ ಮಾಡಲು ನರೇಂದ್ರ ಮೋದಿಯವರಿಗೆ ಮತ್ತೂಮ್ಮೆ ಅವಕಾಶ ನೀಡಿರುವುದು ಹೆಮ್ಮೆಯ ವಿಷಯ ಎಂದರು.
ಪಪಂ ಸದಸ್ಯ ರಮೇಶ ಮಠದ ಮಾತನಾಡಿ, 10 ವರ್ಷಗಳಲ್ಲಿ ಶಿವಕುಮಾರ ಉದಾಸಿ ಅವರ ಅಭಿವೃದ್ಧಿ ಪರ ಕಾರ್ಯಗಳು ವಿರೋಧ ಪಕ್ಷಗಳ ಅಭ್ಯರ್ಥಿಗೆ ಸೋಲಿನ ಕಹಿ ಅನುಭವ ನೀಡಿದೆ ಎಂದರು.
ನೂರಾರು ಕಾರ್ಯಕರ್ತರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್ ಯಡಿಯೂರಪ್ಪ ಪರ ಜೈಕಾರ ಹಾಕಿದರು. ನೆಚ್ಚಿನ ನಾಯಕರ ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿದರು. ಬಿಜೆಪಿ ಪಕ್ಷವು ಅತೀದೊಡ್ಡ ಪಕ್ಷವಾಗಿ ಹೊರ ಹೊಮ್ಮುತ್ತಿದಂತೆ ಪಕ್ಷದ ಬಾವುಟ ಎಲ್ಲೆಡೆ ರಾರಾಜಿಸಿದವು. ಬಿರು ಬಿಸಿಲಿನಲ್ಲಿ ಯುವಕರು ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿ ಅಭಿನಾ ವ್ಯಕ್ತಪಡಿಸಿದರು. ನಂತರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ರಾಜು ಹೂಗಾರ, ರಮೇಶ ಮಠದ, ಮೆಹಬೂಬಸಾಬ್ ನದಾಫ್, ಅಜ್ಜಪ್ಪ ತರ್ಲಿ, ಮಾಲತೇಶ ಶಿತಾಳ, ಅಜ್ಜಪ್ಪ ಬನ್ನಿಮಟ್ಟಿ, ಮಾಲತೇಶ ಕೋಣನವರ, ಮಂಜುನಾಥ ಮರಿಯಾನಿ, ಬಸವರಾಜ ನೀರಲಗಿ, ಗಫರಸಾಬ್ ಹಾಲಗಿ, ಮೋಹಿದ್ದಿನ್ ಖಾಜಿ, ಶಿವಪ್ಪ ಯರವಿನತಲಿ, ಗುಡ್ಡಪ್ಪ ಆನ್ವೇರಿ, ವಿರುಪಾಕ್ಷಪ್ಪ ಯಲಿಗಾರ, ಮಂಜುನಾಥ ಸಾಲಗೇರಿ, ಪ್ರಕಾಶ ಕೆಂಚಮಲ್ಲ, ಕಿರಣ ಕಿತ್ತೂರ, ಕುಮಾರ ಮರಿಯಾನಿ, ರಾಜು ಬಡಿಗೇರ, ಮಂಜುನಾಥ ಹಾವೇರಿ, ರಾಜು ಕೂಡಲಮಠ, ಪ್ರಕಾಶ ಹೊನ್ನಮ್ಮನವರ, ಗುರುಪ್ರಸಾದ ಮಠದ, ನವೀನ ಪಾಲ್ಗೊಂಡಿದ್ದರು.