Advertisement

ಮೋದಿ ಅಪ್ಪನ ಬಗ್ಗೆ ಯಾರಿಗೂ ಗೊತ್ತಿಲ್ಲ

09:02 AM Nov 26, 2018 | Team Udayavani |

ಹೊಸದಿಲ್ಲಿ:ಸಿ.ಪಿ.ಜೋಷಿ, ರಾಜ್‌ಬಬ್ಬರ್‌ ಬಳಿಕ ಕಾಂಗ್ರೆಸ್‌ನ ಮತ್ತೂಬ್ಬ ನಾಯಕ ಈಗ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪಕ್ಷಕ್ಕೆ ಮುಜುಗರ ಉಂಟುಮಾಡಿದ್ದಾರೆ. ರಾಜ ಸ್ಥಾನದಲ್ಲಿ ಶನಿವಾರ ಪಕ್ಷದ ಸಭೆಯಲ್ಲಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ವಿಲಾಸ್‌ ಮುತ್ತೆಮಾÌರ್‌, “ಪ್ರಧಾನಿ ಆಗುವ ಮೊದಲು ಮೋದಿ ಬಗ್ಗೆ ಯಾರಿಗೆ ಗೊತ್ತಿತ್ತು? ಈಗಲೂ ಮೋದಿ ಅವರ ತಂದೆಯ ಹೆಸರು ಯಾರಿಗೂ ಗೊತ್ತಿಲ್ಲ. ಆದರೆ, ರಾಹುಲ್‌ ಗಾಂಧಿ ಅವರ ಅಪ್ಪ, ಅಜ್ಜಿ- ತಾತ ಎಲ್ಲರ ಹೆಸರೂ ಇಡೀ ಜಗತ್ತಿಗೇ ಗೊತ್ತು’ ಎಂದಿದ್ದಾರೆ.

Advertisement

ಇವರ ಈ ಹೇಳಿಕೆಯ ವಿಡಿಯೋ ಈಗ ವೈರಲ್‌ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುತ್ತೆ ಮಾÌರ್‌, ವಿಡಿಯೋವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ.

ಮೋದಿ ಆಕ್ರೋಶ: ಕಾಂಗ್ರೆಸ್‌ ನಾಯಕನ ವಿವಾದಿತ ಹೇಳಿಕೆಯನ್ನು ಪ್ರಧಾನಿ ಮೋದಿ ಅವರು ರಾಜಸ್ಥಾನ ಹಾಗೂ ಮಧ್ಯಪ್ರದೇಶದ ರ್ಯಾಲಿಯಲ್ಲಿ ಪ್ರಸ್ತಾವಿಸಿದ್ದಲ್ಲದೆ, ಆಕ್ರೋಶ ವನ್ನೂ ವ್ಯಕ್ತಪಡಿಸಿದ್ದಾರೆ. ನನ್ನ ಜಾತಿ ಬಗ್ಗೆ ಮತದಾರರು ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ, ಕಾಂಗ್ರೆಸ್‌ ತಲೆಕೆಡಿಸಿಕೊಳ್ಳುತ್ತಿದೆ. ಅಧ್ಯಕ್ಷ ರಾಹುಲ್‌ಗಾಂಧಿ ಅವರ ಆಣತಿಯಂತೆ ನನ್ನ ಹೆತ್ತವರ ಬಗ್ಗೆ ಅವಹೇಳನ ಮಾಡಲಾಗುತ್ತಿದೆ. ನಿನ್ನೆ ನನ್ನ ಅಮ್ಮನ ಹೆಸರು, ಇಂದು ನನ್ನ ಅಪ್ಪನ ಹೆಸರನ್ನೆತ್ತಿ ಅವಹೇಳನ ಮಾಡಲಾಗಿದೆ. ನನ್ನ ಹೆತ್ತವರು ಯಾವುದೇ ಸಾರ್ವಜನಿಕ ಹುದ್ದೆ ಹೊಂದಿದವರಲ್ಲ, ಆದರೂ, ಅವರ ಹೆಸರನ್ನು ರಾಜಕೀಯಕ್ಕೆ ಎಳೆದುತರಲಾಗುತ್ತಿದೆ. ನಾನು ಯಾರ ಕುಟುಂಬದ ಬಗ್ಗೆಯೂ ಮಾತನಾಡಿಲ್ಲ ಎಂದಿದ್ದಾರೆ ಮೋದಿ.ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿರುವ ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ, “ಮೋದಿ ಅವರೂ ಎಷ್ಟೋ ಬಾರಿ ಸೋನಿಯಾ ಗಾಂಧಿ ಅವರ ಹೆತ್ತವರ ಕುರಿತು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿ, ಟೀಕಿಸಿರಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ನಕ್ಸಲರು ಜೈಲಿಗೆ: ತೆಲಂಗಾಣದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, “ತೆಲಂಗಾಣದಲ್ಲಿ ನೂರಾರು ಮಂದಿ ನಕ್ಸಲ್‌ ದಾಳಿಗೆ ಬಲಿಯಾಗಿದ್ದರೂ, ರಾಹುಲ್‌ ಬಾಬಾ ನಗರ ನಕ್ಸಲರಿಗೆ ಬೆಂಬಲ ನೀಡುತ್ತಿದ್ದಾರೆ. ಇಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಎಲ್ಲ ಮಾವೋವಾದಿಗಳನ್ನೂ ಜೈಲಿಗಟ್ಟುತ್ತೇವೆ’ ಎಂದಿದ್ದಾರೆ. 

ನಗದಿಗೆ ಮಿತಿ: ಚುನಾವಣಾ ಅಕ್ರಮಗಳನ್ನು ತಡೆಯುವ ಸಲುವಾಗಿ ಚುನಾವಣಾ ಆಯೋಗವು, ಅಭ್ಯರ್ಥಿಗಳು ಪ್ರಚಾರಕ್ಕೆ ಬಳಸುವ ನಗದು ಮಿತಿಯನ್ನು 20 ಸಾವಿರ ರೂ.ಗಳಿಂದ 10 ಸಾವಿರ ರೂ.ಗಳಿಗೆ ಮಿತಿಗೊಳಿಸಿ ರವಿವಾರ ಆದೇಶ ಹೊರಡಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next