Advertisement
ಪ್ರಧಾನಿ ಮೋದಿ ಅವರ ಭಾಷಣದ ಮುಖ್ಯಾಂಶಗಳು ಇಲ್ಲಿದೆ:– ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿ ಸಹಿತ ಈ ನಾಡಿನ ಎಲ್ಲಾ ದೇವರಿಗೂ ನನ್ನ ನಮನಗಳು.
– ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಮೈಸೂರಿನಲ್ಲಿ ಪಾಸ್ ಪೋರ್ಟ್ ಕೇಂದ್ರವನ್ನು ತೆರೆಯಲಾಗಿದೆ ಇದರಿಂದ ಈ ಭಾಗದ ಬಹಳಷ್ಟು ಜನರಿಗೆ ಉಪಯೋಗವಾಗಿದೆ ಎಂದು ನನಗೆ ತಿಳಿಯಿತು.
– ಈ ಮೊದಲು ನಾನು ಮೈಸೂರಿಗೆ ಬಂದಿದ್ದಾಗ ಹಲವಾರು ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ಮಾಡಿದ್ದೆ.
– ಮುಂಬರುವ ದಿನಗಳಲ್ಲಿ ಉಡಾನ್ ಯೋಜನೆಯ ಲಾಭ ನಿಮಗೆ ಆಗಲಿದೆ.
– ನಮ್ಮ ಸಂಕಲ್ಪ ಪತ್ರದಲ್ಲಿ ದೇಶವನ್ನು ಬಲಿಷ್ಟಗೊಳಿಸುವ ನಿರ್ಧಾರ ಕೈಗೊಂಡಿದ್ದೇವೆ.
– ದೇಶದಲ್ಲಿ ಡಾಕ್ಟರ್ ಗಳ ಸಂಖ್ಯೆಯನ್ನು ಹೆಚ್ಚಿಸಲಿದ್ದೇವೆ. ಉದ್ದಿಮೆದಾರರಿಗೆ ಸುಲಭ ವಿಧಾನದಲ್ಲಿ ಸಾಲ ನೀಡಲಿದ್ದೇವೆ.
– ನಮ್ಮ ಮತ್ತು ಕಾಂಗ್ರೆಸ್ ಪ್ರಣಾಳಿಕೆಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಅವರ ಯೋಚನೆ ಕೇವಲ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಿವುದಷ್ಟೇ ಆಗಿದೆ. ‘ಮೋದಿ ಹಠಾವೋ’ ಅವರ ಮೂಲಮಂತ್ರವಾಗಿದೆ.
– ಆದರೆ ನಿಮ್ಮ ಇರಾದೆ ಏನು..? ನಿಮ್ಮ ಪ್ರೀತಿ ಅವರ ನಿದ್ದೆಗೆಡಿಸಿದೆ.
– ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ‘ಗರೀಬಿ ಹಠಾವೋ’ ಮಂತ್ರ ಜಪಿಸುತ್ತಿದೆ. ಇದೀಗ ಗರೀಭಿಯೂ ಸಹ ಹೇಳುತ್ತಿದೆ ಕಾಂಗ್ರೆಸ್ ಹಠಾವೋ.. ಆಗ ಈ ದೇಶದಿಂದ ಗರೀಭಿ ತನ್ನಿಂತಾನೆ ದೂರವಾಗುತ್ತದೆ.
– ನಾನು ಅಧಿಕಾರದಲ್ಲಿರುವತನಕ ಈ ದೇಶದ ಪ್ರತಿಯೊಬ್ಬ ತೆರಿಗೆದಾರನಿಗೂ ಮಾನ್ಯತೆ ದೊರೆಯುತ್ತದೆ.
– ನಾನು ಅಧಿಕಾರದಲ್ಲಿರುವತನಕ ಈ ದೇಶದ ಪ್ರತಿಯೊಬ್ಬ ತೆರಿಗೆದಾರನಿಗೂ ಮಾನ್ಯತೆ ದೊರೆಯುತ್ತದೆ.
– ನಮ್ಮ ಸರಕಾರ 5 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ವಿಧಿಸುತ್ತಿಲ್ಲ. ಅವರು ಅಧಿಕಾರದಲ್ಲಿದ್ದಾಗ ಈ ಸೌಲಭ್ಯವನ್ನು ನಿಮಗೆ ನೀಡಿದ್ದರೇ?
– ನಮ್ಮ ಅಧಿಕಾರವಧಿಯಲ್ಲಿ ನಿಮ್ಮ ಜೇಬಿಗೆ ಎಂದೂ ಕತ್ತರಿ ಹಾಕಿಲ್ಲ. ವಸ್ತುಗಳ ಬೆಲೆಯನ್ನು ನಿಯಂತ್ರಿಸಿದ್ದೇವೆ.
– ಕಾಂಗ್ರೆಸ್ ಈ ದೇಶಕ್ಕೆ 2ಜಿ ಹಗರಣ ನೀಡಿತು ಆದರೆ ನಮ್ಮ ಸರಕಾರ ಈ ದೇಶದ ಜನರಿಗೆ ಉತ್ತಮ ಸ್ಮಾರ್ಟ್ ಫೋನ್ ಮತ್ತು ವೇಗದ ಮೊಬೈಲ್ ಡೇಟಾ ನೀಡಿದೆ.
– ಕಾಂಗ್ರೆಸ್ ನದ್ದು ತುಷ್ಟೀಕರಣದ ರಾಜಕಾರಣ, ಅವರದ್ದು ವಂಶಪಾರಂಪರ್ಯದ ರಾಜಕಾರಣ ಹಾಗಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಕುರಿತಾಗಿ ದೇಶದ ಜನರಲ್ಲಿ ಸಿಟ್ಟಿದೆ.
– ಶಬರಿಮಲೆಯ ನಂಬಿಕೆ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ.
– ಕಾಂಗ್ರೆಸ್ ನ ನಾಮ್ ಧಾರಿಗೆ ಕೊಡಗು ಜಿಲ್ಲೆಯ ಸಮೀಪದ ಕ್ಷೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ. ಅಲ್ಲಿ ಯಾರ ಧ್ವಜ ಹಾರಾಡುತ್ತಿದೆ ಎಂದು ನಿಮಗೆ ಗೊತ್ತಿರಬೇಕು.
– ದಕ್ಷಿಣದಲ್ಲಿ ಸ್ಪರ್ಧಿಸಬೇಕೆಂಬುದೇ ರಾಹುಲ್ ಅವರ ಇರಾದೆಯಾಗಿದ್ದಿದ್ದರೆ ಅವರ ಪಕ್ಷದ ಸರಕಾರ ಇರುವ ಕರ್ನಾಟಕದ ಯಾವುದೇ ಭಾಗದಿಂದ ಸ್ಪರ್ಧಿಸಬಹುದಿತ್ತು. ಆದರೆ ಅವರಿಗೆ ಗೊತ್ತಿದೆ ಇಲ್ಲಿ ಅವರಿಗೆ ಸುರಕ್ಷಿತವಾದ ಕ್ಷೇತ್ರ ಯಾವುದೂ ಇಲ್ಲ ಎಂದು.
– ಅಂಬರೀಷ್ ಅವರು ಇವತ್ತು ಎಲ್ಲರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಸುಮಲತಾ ಅವರೊಂದಿಗೆ ಸೇರಿಕೊಂಡು ಕನ್ನಡ ಭಾಷೆ ಹಾಗೂ ಸಂಸ್ಕೃತಿಯ ಸೇವೆ ಮಾಡಿದ್ದಾರೆ ಅದೆಂದಿಗೂ ಚಿರಸ್ಮರಣೀಯವಾಗಿರುತ್ತದೆ. ಅದೆಲ್ಲವನ್ನು ನಾವಿಂದು ಇನ್ನಷ್ಟು ಬೆಳೆಸಬೇಕಾಗಿದೆ.
-ಈ ಚೌಕಿದಾರನ ನಿರ್ಧಾರಗಳನ್ನು ನೀವು ಬೆಂಬಲಿಸುವಿರಾ. ದೇಶದ ಸುರಕ್ಷತೆಯ ವಿಷಯದಲ್ಲಿ ನಾವೆಲ್ಲರೂ ದೃಢ ನಿರ್ಧಾರ ತೆಗೆದುಕೊಳ್ಳಬೇಕೇ ಬೇಡವೇ..
– ‘ಹಳ್ಳಿ ಹಳ್ಳಿಯೂ ನಗರ ನಗರವೆಲ್ಲೂ ಮಕ್ಕಳು ಮಕ್ಕಳೆಲ್ಲರೂ ಮನೆಮನೆಯಲ್ಲಿ ಉಳುವ ಭೂಮಿಯಲ್ಲೋ ದೇಶದ ಎಲ್ಲಾ ಕಡೆ ದೇಶದ ಗಡಿಯಲ್ಲೂ ಡಾಕ್ಟರ್ ಪ್ರೊಫೆಸರ್ ಕೂಡ, ರೈತ ಕಾರ್ಮಿಕ ಕೂಡ, ವಕೀಲ ಕೂಡ, ವಿದ್ಯಾರ್ಥಿ ಕೂಡ ಎಲ್ಲರೂ ಚೌಕಿದಾರರಾಗೋಣ’ – ಎಂದು ಕನ್ನಡದಲ್ಲೇ ಹೇಳಿ ಮೋದಿ ಗಮನ ಸೆಳೆದರು.