Advertisement
2018ರ ಮಾ.31ಕ್ಕೆ ಕೊನೆಗೊಂಡ ವಿತ್ತೀಯ ವರ್ಷದ ಮಾಹಿತಿ ಇದಾಗಿದ್ದು, ಪ್ರಧಾನಿ ಕಾರ್ಯಾಲಯವೇ ಈ ಆಸ್ತಿ ವಿವರ ಬಿಡುಗಡೆ ಮಾಡಿದೆ. ಪ್ರಧಾನಿ ಮೋದಿ ಬಳಿ ಒಟ್ಟಾರೆಯಾಗಿ 2.21 ಕೋಟಿ ರೂ. ಮೊತ್ತದ ಸೊತ್ತುಗಳಿವೆ. 1,38, 060 ರೂ. ಮೌಲ್ಯದ ಚಿನ್ನ, 2 ಲಕ್ಷ ರೂ.ಗಳ ಹೂಡಿಕೆ, ಎಸ್‌ಬಿಐ ಗಾಂಧಿನಗರ ಶಾಖೆಯಲ್ಲಿ 11,29,690 ರೂ. ಬ್ಯಾಲೆನ್ಸ್ ಇದೆ. ಅಂಚೆ ಇಲಾಖೆಯ ರಾಷ್ಟ್ರೀಯ ಉಳಿತಾಯ ಯೋಜನೆಯಲ್ಲಿ 5,18,235 ರೂ., ಜೀವ ವಿಮೆಯಲ್ಲಿ 1,59, 281 ರೂ. ಮೊತ್ತ ಹೂಡಿಕೆ ಮಾಡಿದ್ದಾರೆ. 2002ರಲ್ಲಿ ಗಾಂಧಿನಗರದಲ್ಲಿ 1.30 ಲಕ್ಷ ರೂ. ನೀಡಿ ಖರೀದಿಸಿದ ನಿವೇಶನದ ಮೌಲ್ಯ ಈಗ 1 ಕೋಟಿ ರೂ. ಆಗಿದೆ. ವಿಶೇಷವೆಂದರೆ, ಪ್ರಧಾನಿ ಮೋದಿ ಹೆಸರಿನಲ್ಲಿ ದ್ವಿಚಕ್ರ ವಾಹನ, ಕಾರು, ವಿಮಾನ, ಐಷಾರಾಮಿ ಹಡಗು ಇಲ್ಲ. ಇದೇ ವೇಳೆ, ಸಚಿವ ಜೇಟ್ಲಿ ಬಳಿ 10 ಲಕ್ಷ ರೂ. ನಗದು ಹಾಗೂ ದಿಲ್ಲಿಯ ಗ್ರೇಟರ್ ಕೈಲಾಶ್‌ನ ಎಸ್‌ಬಿಐ ಮತ್ತು ಎಚ್‌ಡಿಎಫ್ಸಿ ಶಾಖೆಯಲ್ಲಿ 1.58 ಕೋಟಿ ರೂ. ನಿಗದಿತ ಠೇವಣಿ ಇದೆ. Advertisement
ಪ್ರಧಾನಿ ಬಳಿ ನಗದು ಕಡಿಮೆ, ಸ್ವಂತ ಕಾರು ಇಲ್ಲ
05:20 PM Sep 19, 2018 | |
Advertisement
Udayavani is now on Telegram. Click here to join our channel and stay updated with the latest news.