Advertisement

ಮತಗಟ್ಟೆಯಲ್ಲಿ ಪ್ರಧಾನಿ ನೋಡಲು ಜನಸಾಗರ; ಕಾಂಗ್ರೆಸ್‌ ದೂರು! 

01:34 PM Dec 14, 2017 | |

ಅಹ್ಮದಾಬಾದ್‌: ಗುಜರಾತ್‌ ವಿಧಾನಸಭೆಗೆ ಇಂದು ಗುರುವಾರ ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದು ವಿಶೇಷವಾಗಿ  ಮಾಧ್ಯಮಗಳ ಗಮನ ಸೆಳೆಯಿತು. 

Advertisement

ಸಬರಮತಿಯ ರಣಿಪ್‌ನ ನಿಶಾನ್‌ ಹೈಸ್ಕೂಲ್‌ನ ಮತಗಟ್ಟೆಗೆ ಭಾರೀ ಭದ್ರತೆಯೊಂದಿಗೆ ಆಗಮಿಸಿದ ಮೋದಿ  ಸ್ಥಳೀಯ ಬಿಜೆಪಿ  ಮುಖಂಡರೊಂದಿಗೆ ಮಾತುಕತೆ ನಡೆಸಿ ಕೆಲ ಕಾಲ ಕಳೆದರು. ಬಳಿಕ ಸರತಿಯ ಸಾಲಿನಲ್ಲಿ ಸಾಮಾನ್ಯನಂತೆ ನಿಂತು ಮತ ಚಲಾಯಿಸಿದರು. 

ಮತಗಟ್ಟೆಯ ಹೊರಗೆ ಬಂದ ಪ್ರಧಾನಿ ಮೋದಿ  ತಮ್ಮನ್ನು ನೋಡಲು ನೆರೆದಿದ್ದ ಸಾವಿರಾರು ಜನರತ್ತ ತಮ್ಮ ಶಾಯಿ ಹಚ್ಚಿದ ಬೆರಳನ್ನು ತೋರಿಸಿದರು. 

ಒಂದು ರೀತಿಯಲ್ಲಿ ರೋಡ್‌ ಶೋ ವಾತವರಣ ಕಂಡು ಬಂದಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನು ನಿಯಂತ್ರಿಸಲು ಭಾರಿ ಪೊಲೀಸರನ್ನು ನಿಯೋಜಿಸಲಾಗಿತ್ತು. 

ಕಾಂಗ್ರೆಸ್‌ ದೂರು 
‘ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಸಂಹಿತೆ ಉಲ್ಲಂಘನೆ ಮಾಡಿ  ರೋಡ್‌ ಶೋ ನಡೆಸಿ ಮತದಾರರನ್ನು ಸೆಳೆಯುವ ಕೆಲಸ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. 

Advertisement

ಈ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು ‘ನಾವು ಯಾರನ್ನೂ ಕರೆದಿಲ್ಲ ಜನರು ಸ್ವಯಂ ಪ್ರೇರಿತರಾಗಿ ಮತ ಗಟ್ಟೆಯ ಸುತ್ತ ನೆರೆದಿದ್ದರು’ ಎಂದಿದೆ. 

2014 ರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಮೋದಿ  ವಿರುದ್ಧ ಚುನಾವಣಾ ಆಯೋಗ ಎಫ್ಐಆರ್‌ ದಾಖಲಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next