ನಾಗ್ಪುರ: “ಯಾರೂ ತಮ್ಮನ್ನು ಪ್ರಶ್ನಿಸಬಾರದು ಎಂಬ ಮನೋಭಾವವನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಒಂದೊಮ್ಮೆ ಯಾರಾದರೂ ಪ್ರಶ್ನಿಸಿದರೆ ಅವರಿಗೆ ಕೆಂಡದಂಥ ಕೋಪ ಬರುತ್ತದೆ…,’
ಇದು ವಿಪಕ್ಷದ ಮುಖಂಡರ ಟೀಕೆಯಲ್ಲ. ಬದಲಿಗೆ ಬಿಜೆಪಿ ಸಂಸದರೊಬ್ಬರು ಮಾಡಿರುವ ಗಂಭೀರ ಆರೋಪ!
“ಇತ್ತೀಚೆಗೆ ಪ್ರಧಾನಿ ಮೋದಿ ಅವರು ಬಿಜೆಪಿ ಸಂಸದರ ಸಭೆ ಕರೆದಿದ್ದರು. ಅಲ್ಲಿ ನಾನು ಒಬಿಸಿ ಸಚಿವಾಲಯ ಹಾಗೂ ರೈತರ ಆತ್ಮಹತ್ಯೆಗೆ ಸಂಬಂಧಿಸಿ ಅವರನ್ನು ಪ್ರಶ್ನಿಸಿದಾಗ ಒಮ್ಮೆಲೆ ನನ್ನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದರು’ ಎಂದು ಮಹಾರಾಷ್ಟ್ರದ ಬಾಂದ್ರಾ-ಗೊಂಡ್ಯಾ ಕ್ಷೇತ್ರದ ಸಂಸದ ನಾನಾ ಪಟೋಲೆ ಹೇಳಿದ್ದಾರೆ.
“ಹಸಿರು ಕರ ವಿಧಿಸುವುದು, ಒಬಿಸಿ ಸಚಿವಾಲಯ ಮತ್ತು ಕೃಷಿ ಕ್ಷೇತ್ರಕ್ಕೆ ಕೇಂದ್ರದಿಂದ ಹೆಚ್ಚು ಹೂಡಿಕೆ ಮಾಡುವ ಕುರಿತು ನಾನುಸಭೆಯಲ್ಲಿ ಪ್ರಶ್ನೆ ಕೇಳಿದಾಗ ಪ್ರಧಾನಿ ಮೋದಿ ನನ್ನ ಮೇಲೆ ಕೋಪಗೊಂಡರು. “ಬಾಯು¾ಚ್ಚು ಸಾಕು’ (ಶಟ್ ಅಪ್) ಎಂದು ಗದರಿದರು. ಪ್ರಧಾನಿಯವರು ಆಗಾಗ ಸಂಸದರ ಸಭೆ ಕರೆಯುತ್ತಿರುತ್ತಾರೆ. ಆದರೆ ಅಲ್ಲಿ ಯಾರೂ ಅವರನ್ನು ಪ್ರಶ್ನಿಸುವುದನ್ನು ಅವರು ಸಹಿಸುವುದಿಲ್ಲ’ ಎಂದು ಪಟೋಲೆ ಆರೋಪಿಸಿದ್ದಾರೆ.