Advertisement

ಕೋಟ: ನೂರಾರು ಮಂದಿಗೆ ಉಚಿತ ಪಲಾವ್‌, ಟೀ ವಿತರಿಸಿದ ಚಾಯ್‌ವಾಲ

01:20 AM Sep 18, 2018 | Karthik A |

ಕೋಟ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟಿದ ಹಬ್ಬದ ಪ್ರಯುಕ್ತ ಕೋಟ ಪೊಲೀಸ್‌ ಠಾಣೆ ಸಮೀಪ ಟೀ ಸ್ಟಾಲ್‌ ನಡೆಸುತ್ತಿರುವ ಲಕ್ಷ್ಮಣ ಕುಂದರ್‌ ಸೋಮವಾರ ನೂರಾರು ಮಂದಿಗೆ ಉಚಿತವಾಗಿ ಪಲಾವ್‌, ಟೀ ಹಾಗೂ ಕೇಕ್‌ ವಿತರಿಸಿದರು. ಮೋದಿಯ ಕಟ್ಟಾ ಅಭಿಮಾನಿಯಾಗಿರುವ ಇವರು ಸತತ 4ನೇ ವರ್ಷ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಈ ಬಾರಿ ಸುಮಾರು 25 ಕೆ.ಜಿ. ಅಕ್ಕಿ ಬಳಸಿ ಪಲಾವ್‌ ತಯಾರಿಸಿ 400ಕ್ಕೂ ಹೆಚ್ಚು ಮಂದಿಗೆ ಟೀ-ಕಾಫಿ  ಹಂಚಿ ಮೋದಿಗೆ ಶುಭ ಹಾರೈಸುವಂತೆ ವಿನಂತಿಸಿದರು.

Advertisement

ಬಿಜೆಪಿ ಕೋಟ  ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಭರತ್‌ ಕುಮಾರ್‌ ಶೆಟ್ಟಿ ಕೇಕ್‌ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯತ್‌ ಸದಸ್ಯ ರಾಘವೇಂದ್ರ ಕಾಂಚನ್‌, ಶಂಕರ್‌ ಕೋಟ ಮುಂತಾದ ಹಲವು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.

ಈ ದಿನ ಮೋದಿಗಾಗಿ ಮೀಸಲು
ನರೇಂದ್ರ ಮೋದಿಯವರು ವರ್ಷವಿಡೀ ನಮಗಾಗಿ ಸ್ವಲ್ಪವೂ ಬಿಡುವಿಲ್ಲದೆ ಸೇವೆ ಸಲ್ಲಿಸುತ್ತಾರೆ. ಹೀಗಾಗಿ ನಾನು ವರ್ಷದಲ್ಲಿ ಒಂದು ದಿನ ಅವರಿಗಾಗಿ ಈ ದಿನ ಮೀಸಲಿಡುತ್ತೇನೆ. ಯಾರ ನೆರವು ಪಡೆಯದೆ ಸ್ಟಾಲ್‌ಗೆ ಆಗಮಿಸುವ ಎಲ್ಲರಿಗೂ ಉಚಿತವಾಗಿ ತಿಂಡಿ, ಟೀ ನೀಡಿ ಪ್ರಧಾನಿಯವರಿಗೆ ಶುಭ ಹಾರೈಸುವಂತೆ ವಿನಂತಿಸುತ್ತೇನೆ. ಇಂದು ನನ್ನ ಪಾಲಿಗೆ ವಿಶೇಷ ದಿನವಾದ್ದರಿಂದ ಬೀಡಿ, ಸಿಗರೇಟ್‌ ಮುಂತಾದ ಯಾವುದೇ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದಿಲ್ಲ ಎಂದು ಲಕ್ಷ್ಮಣ ಕುಂದರ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next