Advertisement

ಮೋದಿ ಜತೆಗಿನ ಚಿತ್ರ ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲೊಂದು: ಗ್ರಿಲ್ಸ್‌

01:58 AM Feb 07, 2021 | Team Udayavani |

ಹೊಸದಿಲ್ಲಿ: ಡಿಸ್ಕವರಿ ವಾಹಿನಿಯಲ್ಲಿ “ಮ್ಯಾನ್‌ ವರ್ಸಸ್‌ ವೈಲ್ಡ್‌’ ಎಂಬ ಸಾಹಸ ಕಾರ್ಯ ಕ್ರಮ ನಡೆಸಿಕೊಡುವ ಬಿಯರ್‌ ಗ್ರಿಲ್ಸ್‌; ಪ್ರಧಾನಿ ನರೇಂದ್ರ ಮೋದಿ ಜತೆಗಿರುವ ಒಂದು ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ. ಅದು ತನ್ನ ಜೀವನದ ಅತ್ಯುತ್ತಮ ಚಿತ್ರಗಳಲ್ಲೊಂದು ಎಂದು ಹೇಳಿಕೊಂಡಿದ್ದಾರೆ.

Advertisement

ಟ್ವೀಟ್‌ ಮಾಡಲ್ಪಟ್ಟ 12 ಗಂಟೆಗಳಲ್ಲೇ ಈ ಚಿತ್ರವನ್ನು 12,000ಕ್ಕೂ ಅಧಿಕ ಬಾರಿ ಹಂಚಿಕೊಳ್ಳಲಾಗಿದೆ.

2019ರಲ್ಲಿ ಉತ್ತರಾಖಂಡದ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನದಲ್ಲಿ; ಬಿಯರ್‌ ಗ್ರಿಲ್ಸ್‌, ಪ್ರಧಾನಿ ಮೋದಿ ಜತೆ ಟೀ ಕುಡಿಯುತ್ತಿರುವ ಚಿತ್ರವಿದು. ಮ್ಯಾನ್‌ ವರ್ಸಸ್‌ ವೈಲ್ಡ್‌ ಕಾರ್ಯಕ್ರಮ ಮುಗಿಸಿದ ಅನಂತರ ಈ ಚಿತ್ರವನ್ನು ಸೆರೆಹಿಡಿಯಲಾಗಿತ್ತು. ಈ ವೇಳೆ ಮೋದಿ ಮಳೆ ಮತ್ತು ಚಳಿಯಲ್ಲಿ ಕಾಡಿನಲ್ಲಿ ಓಡಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next