Advertisement

ದೇಶದ ಸಾರ್ವಜನಿಕ ಆಸ್ತಿ‌ ಮಾರಾಟ ಮಾಡಿದ್ದೇ ಮೋದಿ ಸಾಧನೆ: ತಿಮ್ಮಾಪೂರ

02:24 PM Jul 07, 2021 | Team Udayavani |

ವಿಜಯಪುರ: ಕಳೆದ ಏಳು ವರ್ಷಗಳಲ್ಲಿ ದೇಶದ ಸಾರ್ವಜನಿಕ ಉದ್ದಿಮೆ, ಆಸ್ತಿಯನ್ನು ಖಾಸಗೀಯರಿಗೆ ಮಾರಿದ್ದೇ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಮೋದಿ ಸಾಧನೆ ಎಂದು ಮೇಲ್ಮನೆ ಶಾಸಕ ಆರ್.ಬಿ.ತಿಮ್ಮಾಪೂರ ಟೀಕಿಸಿದರು.

Advertisement

ನಗರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕೃಷಿ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು, ಅಂಬಾನಿ, ಅದಾನಿ ಅವರಂಥ ಬಂಡವಾಳಿಗರ ಪರವಾಗಿ ಕಾನೂನು ರೂಪಿಸಿದ್ದೇ ಇವರ ಸಾಧನೆ. ಇದನ್ನೇ ದೇಶದ ಪ್ರಗತಿ ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಕುಟುಕಿದರು.

ಕೋವಿಡ್ ಲಾಕಡೌನ್ ಸಂದರ್ಭದಲ್ಲಿ ಬಡವರ ಗೋಳು ಕೇಳುವಲ್ಲಿ ವಿಫಲವಾದ ಬಿಜೆಪಿ ಸರ್ಕಾರ, ಕೋವಿಡ್ ಸೋಂಕಿಗೆ ಬಲಿಯಾದ ಕುಟುಂಬದವರ ನೆರವಿಗೂ ಧಾವಿಸಲಿಲ್ಲ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next