ಪೋರ್ಟ್ ಬ್ಲೇರ್: ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ನೇತಾಜಿ ಸುಭಾಶ್‌ಚಂದ್ರ ಬೋಸರ ಕೊಡುಗೆಗಳನ್ನು ಹತ್ತಿಕ್ಕಲು ಪ್ರಯತ್ನಿಸಲಾಯಿತು. ಆದರೆ ಇಂದು ಇಡೀ ದೇಶವೇ ನೇತಾಜಿ ಅವರ ಜನ್ಮದಿನ ವನ್ನು ಆಚರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನೇತಾಜಿ ಸುಭಾಶ್‌ಚಂದ್ರ ಬೋಸರ ಜನ್ಮ ಜಯಂತಿಯ ಅಂಗವಾಗಿ ಅಂಡ ಮಾನ್ ದ್ವೀಪದಲ್ಲಿ ಅವರ ಗೌರವಾರ್ಥ ನಿರ್ಮಿಸಲು ಉದ್ದೇಶಿಸಿರುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ವರ್ಚುವಲ್ ಮೂಲಕ ಅನಾವರಣಗೊಳಿಸಿ ಅವರು ಮಾತನಾಡಿದರು. ಇದೇ ವೇಳೆ ಅಂಡಮಾನ್ ಮತ್ತು ನಿಕೋಬಾರ್‌ನ 21 ಅನಾಮಧೇಯ ದ್ವೀಪಗಳಿಗೆ ಪರಮವೀರ ಚಕ್ರ ಪಶಸ್ತಿ ಪಡೆದ ವೀರ ಯೋಧರ ಹೆಸರುಗಳನ್ನು ನಾಮಕರಣಗೊಳಿಸಿದರು.
“ಬ್ರಿಟನ್ ಸಾಮ್ರಾಜ್ಯಶಾಹಿ ಸರಕಾರಕ್ಕೆ ನೇತಾಜಿ ಸಿಂಹಸ್ವಪ್ನದಂತೆ ಕಾಡಿದರು. ಭಾರತದ ಸ್ವಾತಂತ್ರ್ಯಕ್ಕೆ ಅವರ ಕೊಡುಗೆ ಅಪಾರ. ಅವರನ್ನು ಸದಾ ಭಾರತೀಯರು ನೆನಪಿಸಿಕೊಳ್ಳುತ್ತಾರೆ. ಅವರ ವಿಚಾರಗಳಿಂದ ನಾನು ಆಳವಾಗಿ ಪ್ರಭಾವಿತನಾಗಿದ್ದೇನೆ,’ ಎಂದು ಪ್ರಧಾನಿ ಮೋದಿ ಹೇಳಿದರು.
“ಅಂಡಮಾನ್ ದ್ವೀಪದಲ್ಲಿ 1943ರ ಡಿ.30ರಂದು ಮೊದಲ ಬಾರಿಗೆ ಭಾರತದ ರಾಷ್ಟ್ರ ಧ್ವಜವನ್ನು ಬೋಸರು ಹಾರಿಸಿದರು. ನೇತಾಜಿ ಅವರ ಕುರಿತ ರಹಸ್ಯ ಕಡತಗಳನ್ನು ಸಾರ್ವಜನಿಕಗೊಳಿಸುವಂತೆ ಬಹು ಕಾಲದ ಬೇಡಿಕೆಯನ್ನು ಕೇಂದ್ರ ಈಡೇರಿಸಿದೆ. ಭಾರತಕ್ಕೆ ನೇತಾಜಿ ಅವರು ಮಾಡಿರುವ ತ್ಯಾಗದ ಗೌರವಾರ್ಥವಾಗಿ ರಾಷ್ಟ್ರೀಯ ಸ್ಮಾ ರಕವನ್ನು ನಿರ್ಮಿಸಲಾ ಗುತ್ತಿದೆ,’ ಎಂದರು.
ರಾಷ್ಟ್ರೀಯ ಸ್ಮಾರಕವು ಮ್ಯೂಸಿಯಂ, ಕೇಬಲ್ ಕಾರ್ ರೋಪ್ ವೇ, ಲೇಸರ್ ಮತ್ತು ಸೌಂಡ್ ಶೋ, ಐತಿಹಾಸಿಕ ಕಟ್ಟಡ ಗಳು ಮತ್ತು ಥೀಮ್ ಆಧಾರಿತ ಮಕ್ಕಳ ಅಮ್ಯೂಸ್‌ಮೆಂಟ್ ಪಾರ್ಕ್ ಒಳ ಗೊಂಡಿದೆ. 21 ದ್ವೀಪಗ ಳಿಗೆ ಪರಮವೀರ ಚಕ್ರ ಪಶಸ್ತಿ ಪಡೆದ ವೀರ ಯೋಧರ ಹೆಸರಗಳನ್ನು ನಾಮಕರಣ ಮಾಡಿ ರುವು ದಕ್ಕೆ ಬಾಲಿವುಡ್ ನಟರಾದ ಅಜಯ್ ದೇವ ಗನ್, ಸುನಿಲ್ ಶೆಟ್ಟಿ, ಅಕ್ಷಯ ಕುಮಾರ್, ಸಿದಾರ್ಥ್ ಮಲ್ಹೋತ್ರಾ ಸೇರಿದಂತೆ ಅನೇಕ ಗಣ್ಯರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಭಾರತದ ಸ್ವಾತಂತ್ರ್ಯಕ್ಕೆ ಸುಭಾಶ್‌ಚಂದ್ರ
ಬೋಸರ ಕೊಡುಗೆಗಳನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಹೆಸರನ್ನು ಮೂಲೆಗುಂಪು ಮಾಡಲು ಯತ್ನ ಗಳು ನಡೆಯಿತು. ಆದರೆ ಪ್ರಧಾನಿ ಮೋದಿ ನೇತೃತ್ವದ ಸರಕಾರ ನೇತಾಜಿ ಅವರ ಸ್ಮರಣೆಗೆ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ.
– ಅಮಿತ್ ಶಾ, ಕೇಂದ್ರ ಗೃಹ ಸಚಿವ