Advertisement
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬಿಜೆಪಿಯ ಶಾಸಕರು, ಸಂಸದರಿಗೆ ಉಸ್ತುವಾರಿ ನೀಡಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರಕ್ಕೆ ಅನ್ವಯವಾಗುವಂತೆ 100 ಸ್ಥಳಗಳನ್ನು ಗುರುತಿಸಿ ಅಲ್ಲಿ ತಲಾ 100 ಮಂದಿಗೆ ಆಹ್ವಾನ ನೀಡಿ, ಕಾರ್ಯಕ್ರಮ ಆಲಿಸಲು ವ್ಯವಸ್ಥೆ ಮಾಡಲಾಗಿದೆ. ಪ್ರತೀ ಬೂತ್ ಮಟ್ಟದಲ್ಲೂ ಇದೇ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭ ಎಲೆಮರೆಯ ಕಾಯಿಯಂತೆ ಕೆಲಸ ಮಾಡಿರುವ ವ್ಯಕ್ತಿಗಳನ್ನು ಗೌರವಿಸಲೂ ನಿರ್ಧರಿಸಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್ ಹೇಳಿದ್ದಾರೆ.
ಜೆ.ಪಿ. ನಡ್ಡಾ ಸ್ವತಃ ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ ಎಂದು ಗೌತಮ್ ಹೇಳಿದ್ದಾರೆ. ಬಿಜೆಪಿಯ ಆಯಾ ರಾಜ್ಯದ ಪದಾಧಿಕಾರಿಗಳಿಗೆ ಒಂದೊಂದು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ ಎಂದಿದ್ದಾರೆ. ವಿಶ್ವಸಂಸ್ಥೆಯಲ್ಲಿ ಪ್ರಸಾರ
ಐತಿಹಾಸಿಕ ಮೈಲಿಗಲ್ಲು ಎಂಬಂತೆ, ಮನ್ ಕೀ ಬಾತ್‌ನ 100ನೇ ಆವೃತ್ತಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ರವಿವಾರ ನೇರಪ್ರಸಾರ ಮಾಡಲಾಗುತ್ತದೆ. “ಮನ್ ಕಿ ಬಾತ್’ ಎನ್ನುವುದು ಮಾಸಿಕ ರಾಷ್ಟ್ರೀಯ ಸಂಪ್ರದಾಯವಾಗಿ ರೂಪುಗೊಂ ಡಿದ್ದು, ಭಾರತದ ಅಭಿವೃದ್ಧಿಯ ಪಯಣ ದಲ್ಲಿ ಭಾಗಿಯಾಗಲು ಲಕ್ಷಾಂತರ ಮಂದಿಗೆ ಉತ್ತೇಜನ ನೀಡಿದೆ ಎಂದು ವಿಶ್ವ ಸಂಸ್ಥೆಯಲ್ಲಿರುವ ಭಾರತದ ಖಾಯಂ ರಾಯಭಾರ ಕಚೇರಿ ತಿಳಿಸಿದೆ. ಜಗತ್ತಿನ ಹೆಚ್ಚಿನ ದೇಶಗಳಲ್ಲಿ ಅದನ್ನು ನೇರ ಪ್ರಸಾರ ಮಾಡುವ ನಿಟ್ಟಿನಲ್ಲಿ ಕೂಡ ಕೇಂದ್ರ ಸರಕಾರ ಕ್ರಮ ಕೈಗೊಂಡಿದೆ. ವಿದೇಶಗಳ ಹಲವಾರು ಸಂಘಟನೆಗಳು ಮನ್ ಕೀ ಬಾತ್‌ನ ಪ್ರಸಾರ ಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿವೆ.
Related Articles
“ಮನ್ ಕೀ ಬಾತ್’ನಲ್ಲಿ ಶಿಕ್ಷಣ, ಜನರಿಗೆ ಅಗತ್ಯವಾಗಿರುವ ಸಂಶೋಧನೆಗಳ ವಿಚಾ ರವೇ ಹೆಚ್ಚಾಗಿ ಪ್ರಸ್ತಾವವಾಗಿತ್ತು ಎಂದು ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಶನ್‌ನ ಸಂಶೋಧನೆಯಲ್ಲಿ ಗೊತ್ತಾಗಿದೆ. 116 ಮಾಧ್ಯಮ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳಲ್ಲಿ ಇರುವವರನ್ನು ಸಂದರ್ಶನ ನಡೆಸಿದ ಸಂದರ್ಭದಲ್ಲಿ ಈ ಮಾಹಿತಿ ವ್ಯಕ್ತವಾಗಿದೆ.
Advertisement