Advertisement
ನೆಲಮಂಗಲ ವಿಧಾನಸಭಾ ಕ್ಷೇತ್ರದ ಮೋಟಗನ ಹಳ್ಳಿ ಗ್ರಾಪಂನ ತಾಲೂಕಿನ ಗಡಿಗ್ರಾಮವಾದ ಕಲ್ಯಾಣಪುರ, ಬಸವನಹಳ್ಳಿಯಲ್ಲಿ ನರೇಗಾ ಯೋಜನೆಯಲ್ಲಿ ನಿರ್ಮಾಣವಾಗಿರುವ 20 ಲಕ್ಷ ರೂ.ಗೂ ಹೆಚ್ಚು ಅನುದಾನದಲ್ಲಿ ಗೋಕಟ್ಟೆಗಳು ಹಾಗೂ ಕೆರೆಗಳಕಾಮಗಾರಿ ಮಾಡಿದ್ದು, ಅವ್ಯವಹಾರ ಹಾಗೂ ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ರಾಮನಗರ ಸಿಇಒಗೆ ದೂರು ನೀಡಿದ ಬೆನ್ನಲ್ಲೆ ಮಾಗಡಿ ತಾಪಂ ಸಹಾಯಕ ನಿರ್ದೇಶಕರು ಸ್ಥಳ ಪರಿಶೀಲನೆ ಮಾಡಿದ್ದು,ಕಾಮಗಾರಿಗಳನ್ನು ಸಮರ್ಥನೆ ಮಾಡಿಕೊಳ್ಳುವಂತಹಕೆಲಸ ಮಾಡಿದ್ದಾರೆ.ಇದರಿಂದ ದೂರುದಾರರು ಅಸಮಾಧಾನ ವ್ಯಕ್ತಪಡಿ ಸಿದ್ದು,ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Related Articles
ದಾಗ ನಡೆದಿದ್ದರೆ ನಾನು ಯಾವಾಗಲು ಅಲ್ಲಿಯೇ ಇರಲು ಸಾಧ್ಯವೆ ಎಂದು ಪ್ರಶ್ನೆ ಮಾಡಿದ್ದು, ಅಕ್ರಮ ಮಾಡಿದವರನ್ನು ಸಮರ್ಥನೆ ಮಾಡಿಕೊಂಡಿದ್ದು, ದೂರುದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಸಹಿಗಳ ಹೊಂದಾಣಿಕೆಯಿಲ್ಲ: ನರೇಗಾ ಕಾಮಗಾರಿಯಲ್ಲಿ ಕೆಲಸ ಮಾಡುವಾಗ ನೀಡಿದ ಜಾಬ್ ಕಾರ್ಡ್‌ದಾರರ ಸಹಿಗೂ, ಕೆಲಸದ ನಂತರ ಬಿಲ್ ನೀಡುವಾಗ ಪಡೆದಿರುವ ಸಹಿಗೂ ವ್ಯತ್ಯಾಸವಿದ್ದು, ಯಂತ್ರೋಪಕರಣಗಳಲ್ಲಿಕೆಲಸ ಮಾಡಿ ಜನರು ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ ಎಂದು ಸಾಮಾಜಿಕ ಹೋರಾಟ ಗಾರ ಮಹೇಂದ್ರಕುಮಾರ್ ಆರೋಪಿಸಿದ್ದು, ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಬಿಟ್ಟಸಂದ್ರ,ಗುಡೇಮಾರನಹಳ್ಳಿ, ಸೋಲೂರು, ಬಾಣವಾಡಿ ಸೇರಿದಂತೆ ತಾಲೂಕಿನ ಗಡಿಗ್ರಾಮಗಳಲ್ಲಿ ಕಳಪೆ ಕಾಮ ಗಾರಿಯ ಬಗ್ಗೆ ದೂರುಗಳು ನೀಡಲಾಗಿದೆ. ಎರಡು ಗುಂಪುಗಳ ನಡುವೆ ಗದ್ದಲ: ದೂರುದಾರರ ಜತೆ ಅಧಿಕಾರಿಗಳು ನರೇಗಾ ಕಾಮಗಾರಿ ಪರಿಶೀಲನೆಗೆ ಸ್ಥಳೀಯ ಹಾಲಿ ಹಾಗೂ ಮಾಜಿ ಗ್ರಾಪಂ ಕೆಲವು ಸದಸ್ಯರು ತಮ್ಮ ಬೆಂಬಲಿಗರನ್ನು ಕರೆತಂದು ದೂರುದಾರರ ವಿರುದ್ಧ ಮುಗಿಬೀಳುವಂತೆ ಮಾಡಿದ್ದು, ಸಹಾಯಕ ನಿರ್ದೇಶಕ ಜತೆಯಲ್ಲಿದ್ದರೂ, ಗದ್ದಲವನ್ನು ಕಡಿಮೆ ಮಾಡಲು ಮಾತ್ರ ಮುಂದಾಗಲಿಲ್ಲ. ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಇರದಕಾರಣ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಗುಡ್ಡದಲ್ಲಿ ಸಿಕ್ಕಕಲ್ಲಿ ಗೂಬಿಲ್
ಗೋಕಟ್ಟೆ ನಿರ್ಮಾಣಕ್ಕೆ ಪಕ್ಕದ ಬಂಡೆಯ ಸಮೀಪದ ಗುಡ್ಡದಲ್ಲಿ ಬಿದ್ದಿರುವ ಕಲ್ಲುಗಳನ್ನು ಕೂಲಿ ಕಾರ್ಮಿಕರಿಂದ ಸಂಗ್ರಹಿಸಿ ಬಳಕೆ ಮಾಡಿಕೊಂಡಿ
ದ್ದಾರೆ. ಆದರೆ, ಬಿಲ್ ಮಾಡುವ ಸಮಯದಲ್ಲಿ ಕಲ್ಲುಗಳ ಖರೀದಿ ಮಾಡಿರುವುದಾಗಿ ಬಿಲ್ ನೀಡಿರುವುದು ಕಂಡುಬಂದಿದೆ. ಇದರ ಬಗ್ಗೆ ಪರಿಶೀ
ಲನೆ ಮಾಡಬೇಕಾದ ಅಧಿಕಾರಿ ಮಾತ್ರ ಪಕ್ಕದ ಬಂಡೆ ಕಲ್ಲು ಬಳಕೆ ಮಾಡಿಕೊಳ್ಳಬಹುದು. ಬಿಲ್ ನೀಡಿರುವ ಬಗ್ಗೆ ಮತ್ತೆ ಪರಿಶೀಲಿಸುವೆ ಎಂದು ಜಾರಿ ಕೊಂಡಿದ್ದಾರೆ.ಮೊಟಗನಹಳ್ಳಿ ಗ್ರಾಪಂನಲ್ಲಿ ನಡೆಸುವ ನರೇಗಾ ಕಾಮಗಾರಿಗಳ ಸಾಮಗ್ರಿಗಳಿಗೆ ಒಬ್ಬನೇ ವ್ಯಕ್ತಿ ಬಿಲ್ ನೀಡುತ್ತಿದ್ದು, ಪ್ರಕೃತಿಯ ಕಲ್ಲುಗಳಿಗೂ ಬಿಲ್ ನೀಡಿರುವುದು ಅಚ್ಚರಿ ಮೂಡಿಸಿದೆ.