Advertisement

ಖಾತ್ರಿ ಕಾಮಗಾರಿ ವೀಕ್ಷಿಸಿದ ಸಚಿವ ಪಾಟೀಲ

03:39 PM May 18, 2020 | Suhan S |

ನರಗುಂದ: 40 ಎಕರೆ ವಿಸ್ತೀರ್ಣದ, ತಾಲೂಕಿನಲ್ಲೇ ಬಹುದೊಡ್ಡ ಕುಡಿಯುವ ನೀರಿನ ಕೆರೆ ಹೆಗ್ಗಳಿಕೆಗೆ ಪಾತ್ರವಾದ ತಾಲೂಕಿನ ಸಂಕಧಾಳ ಗ್ರಾಮದ ಕೆರೆ ಅಂಗಳದಲ್ಲಿ ಹೂಳೆತ್ತುವ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಯನ್ನು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ. ಪಾಟೀಲ ವೀಕ್ಷಿಸಿದರು.

Advertisement

ರವಿವಾರ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಚಿವರು ಕಾಮಗಾರಿ ವೀಕ್ಷಿಸಿದರು. ಕೆರೆ ಅಂಗಳ ಒಳಾಂಗಣ ಸುತ್ತ ನೆಡಲಾದ ಸಸಿಗಳಿಗೆ ನೀರಿನ ವ್ಯವಸ್ಥೆ, ಪ್ರವೇಶ ದ್ವಾರದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಪರ್ಸಿ ಕಲ್ಲುಗಳ ಜೋಡಣೆಗೆ ಗ್ರಾಮಸ್ಥರು ಮನವಿ ಮಾಡಿದರು.

ಪಿಡಿಒಗೆ ಸೂಚನೆ: ಕೆರೆ ಒಂದು ಭಾಗದಲ್ಲಿನ ದೊಡ್ಡ ಗಡ್ಡೆ ಇಳಿಜಾರಿನಂತೆ ತೆರವುಗೊಳಿಸಿ, ಕೆರೆಯ ಇನ್ನೊಂದು ಭಾಗದಿಂದ ಪೈಪ್‌ಲೈನ್‌ನಿಂದ ಸಸಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು. ಗ್ರಾಮಸ್ಥರ ಕೋರಿಕೆಯಂತೆ ಪರ್ಸಿ ಜೋಡಣೆಗೆ ಪಿಡಿಒಗೆ ಸೂಚಿಸಲಾಗುವುದು ಎಂದು ಸಚಿವ ಸಿ.ಸಿ. ಪಾಟೀಲ ಭರವಸೆ ನೀಡಿದರು.

ಈ ವೇಳೆ ಉದ್ಯೋಗ ಖಾತ್ರಿ ಯೋಜನೆ ಅಭಿಯಂತರ ಐ.ಎಸ್‌. ಶಹಾಪುರಮಠ, ಎಸ್‌.ಎನ್‌. ಪಾಟೀಲ, ನಾಗಪ್ಪ ನಾಯ್ಕರ, ಸಿದ್ದಪ್ಪ ಹಣಸಿ, ಚನ್ನಪ್ಪ ಸಾತಣ್ಣವರ, ಸೋಮನಗೌಡಪೊಲೀಸ್‌ಪಾಟೀಲ, ಸಿದ್ದನಗೌಡ ಚನ್ನಪ್ಪಗೌಡ್ರ, ಟಿಎಪಿಸಿಎಂಎಸ್‌ ಅಧ್ಯಕ್ಷ ಅಜ್ಜಪ್ಪ ಹುಡೇದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next