Advertisement
ಕಲ್ಲು-ಮುಳ್ಳುಗಳನ್ನು ಹಸನುಮಾಡಿ ರಸ್ತೆಯಾಗಿಸುತ್ತಾರೆ. ಕೃಷಿಗೆ ಬೇಸಿಗೆ ರಜೆ ಘೋಷಿಸಿ, ಉದ್ಯೋಗ ಖಾತ್ರಿ ಕೆಲಸಕ್ಕೆ ಅಣಿಯಾಗುತ್ತಾರೆ. ಪ್ರತೀತಿಯಂತೆ ಪ್ರಸಕ್ತ ಸಾಲಿನ ಉದ್ಯೋಗ ಖಾತ್ರಿ ಯೋಜನೆಗೂ ಕಾರ್ಮಿಕರು ಶಕ್ತಿ ತುಂಬಿದ್ದು, ಹೂಳೆತ್ತುವ ಮೂಲಕ ಬೆಳಗೇರಾ ಕೆರೆ ಚೇತರಿಕೆ ಕಾಣುವಂತೆ ಮಾಡಿದ್ದಾರೆ.
Related Articles
Advertisement
ಹೊಲಗಳಲ್ಲಿ ಬದು ನಿರ್ಮಾಣ, ಕೃಷಿ ಹೊಂಡ, ಸಸಿ ನೆಡುವ ಕಾರ್ಯ ಭರದಿಂದ ಸಾಗಿದೆ. ಉದ್ಯೋಗ ಖಾತ್ರಿಗಾಗಿ ಕೋಟ್ಯಂತರ ರೂ. ಅನುದಾನ ಗ್ರಾಪಂಗೆ ಹರಿದು ಬಂದಿದ್ದು, ಸಾವಿರಾರು ಮಂದಿಕಾರ್ಮಿಕರು ಪ್ರತಿದಿನ ತವರೂರಲ್ಲೇ ಕೂಲಿ ಕೆಲಸ ಪಡೆದು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
ಉದ್ಯೋಗ ಖಾತ್ರಿ ಮುಖ್ಯ ಉದ್ದೇಶವೇಮಣ್ಣು ಮತ್ತು ಜಲಸಂರಕ್ಷಣೆ. ಹೀಗಾಗಿ ಬದು ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲು ಯೋಚಿಸಿದ್ದೇವೆ. ದಂಡೋತಿಯಲ್ಲಿ ಹೊಸ ಕೆರೆ ನಿರ್ಮಾಣಕ್ಕೆ ಮತ್ತುಮೊಗಲಾ ಗ್ರಾಮದಲ್ಲಿ ನೀರಿನ ತೊಟ್ಟಿ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದೇನೆ. ಕೆಲಸದ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದಎಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಮಾಸ್ಕ್, ಸ್ಯಾನಿಟೈಸರ್ ವಿತರಿಸಿದ್ದೇವೆ. ಕಠಿಣ ನಿರ್ಬಂಧ ವಿಧಿಸಿದ ದಿನಗಳಲ್ಲಿ ಗ್ರಾಮೀಣ ಜನರ ಬದುಕಿಗೆಖಾತ್ರಿ ಉದ್ಯೋಗ ಆಸರೆಯಾಗಿದೆ. ಸರ್ಕಾರದ ಆದೇಶದಿಂದ ಒಂದು ವಾರ ಸ್ಥಗಿತವಾಗಿದ್ದ ಕೆಲಸ ಸೋಮವಾರದಿಂದ ಮತ್ತೆ ಶುರುವಾಗಲಿದೆ.- ನೀಲಗಂಗಾ ಬಬಲಾದ, ತಾಪಂ ಇಒ, ಚಿತ್ತಾಪುರ,
ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರದಿಂದಾಗಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಜಾರಿಗೆ ತರಲು ಸಾಧ್ಯವಾಗಿದೆ. ಯಾರಿಗೂ ಕೆಲಸ ಇಲ್ಲ ಎನ್ನುತ್ತಿಲ್ಲ. ಕೇಳಿದಷ್ಟು ಮಂದಿಗೆ ಕೆಲಸ ಕೊಡುತ್ತಿದ್ದೇವೆ. ಇದರಿಂದ ಕೆರೆ ಹೂಳೆತ್ತುವ ಕಾರ್ಯ ಯಶಸ್ವಿಯಾಗಿ ಸಾಗಿದೆ. ನೀರಿಲ್ಲದ
ಕೆರೆಯಲ್ಲೀಗ ನೀರು ಕಾಣುತ್ತಿದೆ. ಕೆರೆ ಸುತ್ತಲ ಪರಿಸರ ಹಸಿರಿನಿಂದ ಕಂಗೊಳಿಸುತ್ತಿದೆ. ಬಹುತೇಕ ಬಡ ಕುಟುಂಬಗಳೇ ವಾಸವಿರುವ ತಾಂಡಾಗಳಲ್ಲಿ ಉದ್ಯೋಗ ಖಾತ್ರಿ ಕೆಲಸ ಕೈಗೆತ್ತಿಕೊಂಡಿದ್ದರಿಂದ ಆರ್ಥಿಕ ಚೇತರಿಕೆ ಕಂಡಿದೆ. –ಮಲ್ಲಿಕಾರ್ಜುನ ಭೀಮನಳ್ಳಿ, ಪ್ರಭಾರಿ ಪಿಡಿಒ, ಯಾಗಾಪುರ
ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ಯೋಜನೆ ಉಸಿರು ನೀಡಿದೆ. ಕೋವಿಡ್ ಸಂಕಷ್ಟದ ದಿನಗಳಲ್ಲಿ ಕೂಲಿ ಒದಗಿಸಲು ಯೋಜನೆ ಸಹಕಾರಿಯಾಗಿದೆ. ಪಂಚಾಯಿತಿ ವ್ಯಾಪ್ತಿಯ ಮೂರು ಕಂದಾಯ ಗ್ರಾಮ, ಹನ್ನೊಂದು ತಾಂಡಾಗಳಿವೆ. 2103 ಜನರಿಗೆ ಜಾಬ್ ಕಾರ್ಡ್ ಕೊಟ್ಟಿದ್ದೇವೆ. ಇದರಲ್ಲಿ ಪ್ರತಿದಿನ 1500ರಿಂದ1600 ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ.ಗಂಡು-ಹೆಣ್ಣು ಬೇಧವಿಲ್ಲದೆ ಪ್ರತಿಯೊಬ್ಬರಿಗೂ 289ರೂ. ಕೂಲಿ ನೀಡಲಾಗುತ್ತಿದೆ. ಮಹಾ ರಾಷ್ಟ್ರದಿಂದ ಮರಳಿ ಊರಿಗೆ ಬಂದಿರುವ ವಲಸೆ ಕಾರ್ಮಿಕರಿಗೂ ಕೆಲಸ ಕೊಡುತ್ತಿದ್ದೇವೆ. –ಮದನ್ ಹೇಮ್ಲಾ ರಾಠೊಡ,ಅಧ್ಯಕ್ಷ, ಯಾಗಾಪುರ ಗ್ರಾಪಂ
–ಮಡಿವಾಳಪ್ಪ ಹೇರೂರ