Advertisement

ನರೇಗಾ ಕಾಮಗಾರಿಯ ವೇಳೆ ಕುಸಿದು ಬಿದ್ದು ಕಾರ್ಮಿಕ ಸಾವು

08:22 PM Apr 27, 2021 | Team Udayavani |

ಗದಗ: ನರೇಗಾ ಕಾಮಗಾರಿಯ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕನೊಬ್ಬ ಎದೆ ನೋವಿನಿಂದ ಮೃತಪಟ್ಟಿರುವ ಘಟನೆ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

Advertisement

ಗ್ರಾಮದ ಸಂಗಯ್ಯ ಬಸಯ್ಯ ಬಳಿಗೇರಿಮಠ(52) ಎಂಬ ಕಾರ್ಮಿಕ ಮೃತಪಟ್ಟಿದ್ದಾನೆ. ತನ್ನ ಪತ್ನಿ ನೀಲವ್ವ ಸಂಗಯ್ಯ ಬಳಿಗೇರಿಮಠ ಅವರೊಂದಿಗೆ ಗ್ರಾಮದ ಜಮೀನೊಂದರಲ್ಲಿ ಗ್ರಾ.ಪಂ. ನಿಂದ ನರೇಗಾ ಯೋಜನೆಯಡಿ ಕೈಗೊಂಡಿರುವ ಬದು ನಿರ್ಮಾಣ ಕಾಮಗಾರಿ ಕೆಲಸದಲ್ಲಿ ತೊಡಗಿದ್ದರು. ಮಂಗಳವಾರ ಮಧ್ಯಾಹ್ನ ಎದೆ ನೋವು ಕಾಣಿಸಿಕೊಂಡು, ಕುಸಿದು ಬಿದ್ದಿದ್ದರು. ತಕ್ಷಣ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಕೊನೆ ಯುಸಿರೆಳೆದರು ಎಂದು ತಿಳಿದು ಬಂದಿದೆ.

ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ತ.ಪಂ. ಅಧ್ಯಕ್ಷ ವಿದ್ಯಾಧರ ದೊಡ್ಡಮನಿ ಮೃತರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು. ಈ ವೇಳೆ ತಾ.ಪಂ. ಇಓ ಡಾ|ಎಚ್.ಎಸ್.ಜನಗಿ, ಪಿಡಿಒ ರಾಜಕುಮಾರ್ ಭಜಂತ್ರಿ ಹಾಗೂ ಸಿಬ್ಬಂದಿ ಜೊತೆಗಿದ್ದರು.

ಇದನ್ನೂ ಓದಿ :50 ಶವಗಳ ಸಾಮೂಹಿಕ ಅಂತ್ಯ ಸಂಸ್ಕಾರ: ದುರಂತ ಘಟನೆಗೆ ಸಾಕ್ಷಿಯಾದ ದೆಹಲಿ

ಕಾಮಗಾರಿ ಸ್ಥಳದಲ್ಲಿ ಶ್ರದ್ಧಾಂಜಲಿ:
ಸಹ ಕಾರ್ಮಿಕ ಸಂಗಯ್ಯ ಬಸಯ್ಯ ಬಳಿಗೇರಿಮಠ ಅವರ ನಿಧನದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕಂಬನಿ ಮಿಡಿದರು. ಅಲ್ಲದೇ, ಕಾಮಗಾರಿ ಸ್ಥಳದಲ್ಲೇ ಎರಡು ನಿಮಿಷ ಮೌನಾಚರಣೆ ಮಾಡಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next