Advertisement

ನರೇಗಾದಡಿ ನಿತ್ಯ 299 ರೂ. ಕೂಲಿ

01:47 PM Dec 23, 2021 | Team Udayavani |

ಕಾರವಾರ: ತಾಲೂಕಿನ ಕಡವಾಡ ಗ್ರಾಪಂನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕುರಿತು ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಸ್ವಸಹಾಯ ಸಂಘದ ಪದಾಧಿಕಾರಿಗಳಿಗಾಗಿ ಬುಧವಾರ ನರೇಗಾ ಮಾಹಿತಿ ಕಾರ್ಯಾಗಾರ ನಡೆಸಲಾಯಿತು.

Advertisement

ತಾಲೂಕು ಐಇಸಿ ಸಂಯೋಜಕ ಫಕೀರಪ್ಪ ತುಮ್ಮಣ್ಣನವರ ಮಾತನಾಡಿ, ನರೇಗಾದಡಿ ಜಿಲ್ಲೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ದಿನಕ್ಕೆ 10 ರೂ. ಸಲಕರಣೆ ವೆಚ್ಚ ಸೇರಿದಂತೆ 299 ರೂ. ಕೂಲಿ ಜೊತೆಗೆ 150 ದಿನ ಕೆಲಸ ನೀಡಲಾಗುತ್ತಿದೆ. ರಾಜ್ಯದಲ್ಲಿ 100 ದಿನ ಕೂಲಿ ಕೆಲಸ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ನೆರೆ ಹಾವಳಿ ಹಾಗೂ ಪ್ರವಾಹ ಪೀಡಿತ ತಾಲೂಕುಗಳಲ್ಲಿ ಕಳೆದ ಕೆಲ ದಿನಗಳಿಂದ 150 ದಿನ ಕೂಲಿ ಕೆಲಸಕ್ಕೆ ಸರಕಾರ ಅವಕಾಶ ಕಲ್ಪಿಸಿದೆ. ಹೀಗಾಗಿ ಜಿಲ್ಲೆಯೂ ನೆರೆ ಹಾವಳಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿದ್ದು, ಈ 150 ದಿನ ಕೂಲಿ ಕೆಲಸದ ಸದುಪಯೋಗವನ್ನು ಜಿಲ್ಲೆಯ ಗ್ರಾಮೀಣ ಜನರೂ ಪಡೆಯಬಹುದಾಗಿದೆ ಎಂದರು.

ಯೋಜನೆಯಲ್ಲಿ ವೈಯಕ್ತಿಕ ಹಾಗೂ ಸಮುದಾಯ ಸೇರಿದಂತೆ ಒಟ್ಟಾರೆಯಾಗಿ 260ಕ್ಕೂ ಅಧಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಹೀಗಾಗಿ ಗ್ರಾಮೀಣ ಭಾಗದ ಜನರು ಗ್ರಾಪಂಗೆ ತೆರಳಿ ಕೆಲಸ ಹಾಗೂ ಕಾಮಗಾರಿಯ ಬೇಡಿಕೆ ಅರ್ಜಿಯನ್ನು ಸಲ್ಲಿಸಬೇಕು. ನಂತರ ಬೇಡಿಕೆ ಅರ್ಜಿಯ ಆಧಾರದಲ್ಲಿ ನರೇಗಾದಡಿ ಅರ್ಜಿದಾರರಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಯವರು ಕೂಲಿ ಕೆಲಸ ನೀಡಲು ಕ್ರಮ ಕೈಗೊಳ್ಳುತ್ತಾರೆ. ಚುನಾಯಿತ ಪ್ರತಿನಿಧಿಗಳಾದ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು ನರೇಗಾ ಯೋಜನೆ ಬಗ್ಗೆ ವಿವರವಾಗಿ ತಿಳಿದುಕೊಂಡು ತಮ್ಮ ಗ್ರಾಮದ ಜನರಿಗೆ ಅರಿವು ಮೂಡಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನರೇಗಾ ಮಾಹಿತಿ ಕಾರ್ಯಗಾರ ಆಯೋಜಿಸಿದ್ದು, ಎಲ್ಲರೂ ಯೋಜನೆಯಲ್ಲಿರುವ ಕಾಮಗಾರಿಗಳ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಬೇಕು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಪ್ರಿಯಾ ಆನಂದು ಗೌಡ, ಸದಸ್ಯರಾದ ಸುಧೀರ್‌ ಸಾಳಸ್ಕರ್‌, ಕಿಶೋರ್‌ ಕಡವಾಡಕರ್‌, ಸನಾ ಮಾಂಜ್ರೆàಕರ್‌, ಸಾಧನಾ ಆಮ್ಲೇಕರ್‌, ಪ್ರಿಯಾಂಕಾ ತಾಳೇಕರ್‌, ಸ್ಟಿಫನ್‌ ರುಜಾರಿಯೋ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರಭಾವತಿ ಬಂಟ್‌, ಬಿಲ್‌ ಕಲೆಕ್ಟರ್‌ ಶ್ರೀನಿವಾಸ್‌ ನಾಯ್ಕ, ಡಿಇಒ ಭಾರತಿ ಬಾಂದೇಕರ್‌,ಸಮೃದ್ಧಿ ಸಂಜೀವಿನಿ ಒಕ್ಕೂಟದ ಶ್ವೇತಾ ದುದಾಳಕರ, ಶಿಲ್ಪಾ ಕಡವಾಡಕರ, ಅನುಪಾ ಪಾಟೀ, ರಾಜೇಶ್ರೀ ವೈಂಗಣಕರ, ಮೇಘನಾ ಮಹೇಕರ ಉಪಸ್ಥಿತರಿದ್ದರು.

ನಂತರದಲ್ಲಿ ಐಇಸಿ ಸಂಯೋಜಕರು ಹಾಗೂ ಗ್ರಾಪಂ ಸಿಬ್ಬಂದಿ ಗ್ರಾಮದಲ್ಲಿ ಸಂಚರಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಆಯುಕ್ತಾಲಯದಿಂದ ಸಾರ್ವಜನಿಕರಮಾಹಿತಿಗಾಗಿ ಕಳುಹಿಸಿದ್ದ ನರೇಗಾಕ್ಕೆಸಂಬಂಧಿಸಿದ ಪೋಸ್ಟರ್‌ಗಳನ್ನು ಗ್ರಾಮದಸಾರ್ವಜನಿಕ ಪ್ರದೇಶಗಳಾದ ಅಂಚೆ ಕಛೇರಿ, ಅಂಗಡಿ, ಬ್ಯಾಂಕ್‌, ಪ್ರಾಥಮಿಕ ಆರೋಗ್ಯ ಕೇಂದದಲ್ಲಿ ಅಂಟಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next