Advertisement

ನರೇಗಾ: ನಿಗದಿತ ಗುರಿ ಸಾಧನೆಗೆ ಸಂಸದ ಸೂಚನೆ

07:41 AM May 31, 2020 | Lakshmi GovindaRaj |

ಹಾಸನ: ಮಹಾತ್ಮ ಗಾಂಧಿ ಉದ್ಯೋಗ ಖಾತರಿ(ನರೇಗಾ) ಯೋಜನೆಯ ಕಾಮಗಾರಿಗಳನ್ನು ವಾರ್ಷಿಕ ಗುರಿಗೆ ಅನುಗುಣವಾಗಿ ಆಯಾ ತಿಂಗಳ ಪ್ರಗತಿ ಸಾಧಿಸಬೇಕು ಎಂದು ಸಂಸದ ಪ್ರಜ್ವಲ್‌ ರೇವಣ್ಣ ಪಿಡಿಒಗಳಿಗೆ ಸೂಚನೆ ನೀಡಿದರು. ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ನರೇಗಾ ಹಾಸನ ತಾಲೂಕಿನ ಪ್ರಗತಿ ಪರಿಶೀಲನೆ ನಡೆಸಿದ ಅವರು, ಮಳೆಗಾಲ ಪ್ರಾರಂಭವಾಗಿರುವುದರಿಂದ ಕೆರೆ ಕಾಮಗಾರಿ ಹೊರತುಪಡಿಸಿ ಉದ್ಯೋಗ ಖಾತರಿ ಯೋಜನೆಯಡಿ ಸಮುದಾಯ ಮತ್ತು ವೈಯಕ್ತಿಕ ಕಾಮಗಾರಿ ತ್ವರಿತಗೊಳಿಸಬೇಕು ಎಂದರು.

Advertisement

ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ವಂಚಿತರಾದ ಗ್ರಾಮಸ್ಥರಿಗೆ ಕೆಲಸ ನೀಡಬೇಕು ಎಂದು ಪ್ರಜ್ವಲ್‌ ರೇವಣ್ಣ ಸೂಚಿಸಿದರು. ಜಿಪಂ ಸಿಇಒ ಬಿ.ಎ. ಪರಮೇಶ್‌  ಮಾತನಾಡಿ ನರೇಗಾ ಯೋಜನೆಯಲ್ಲಿ ಕೊಟ್ಟಿಗೆ ನಿರ್ಮಾಣ, ಬದು ನಿರ್ಮಾಣ, ಕೃಷಿಹೊಂಡ, ನೀರು ಕಾಲುವೆ ನಿರ್ಮಾ ಣದ ಕೆಲಸ ಕೈಗೊಳ್ಳಬೇಕು ಪಿಡಿಒಗಳಿಗೆ ನಿರ್ದೇಶಿಸಿದರು.

ಕೋರಂ ಇಲ್ಲದ ಸಭೆ ಕಾನೂನು ಬಾಹಿರ: ಹಾಸನ ಜಿಪಂ ಸಾಮಾನ್ಯ ಸಭೆ ಅಥವಾ ವಿಶೇಷ ಸಭೆಯಲ್ಲಿ ಕೋರಂ ಇಲ್ಲದೇ ಕ್ರಿಯಾಯೋಜನೆಗೆ ಅನುಮೋದನೆ ಪಡೆಯುವುದು ಕಾನೂನು ಬಾಹಿರ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು. ಅಧಿಕಾರಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದಿಟಛಿ ವಿಚಾರದಲ್ಲಿ ರಾಜಕೀಯ ಸರಿಯಲ್ಲ. ಭಿನ್ನಾಭಿ ಪ್ರಾಯ ನಿವಾರಿಸಿಕೊಂಡು ಹೊಂದಾಣಿಕೆ ಯಿಂದ ಹೋಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next