Advertisement

ನರೇಗಾದಡಿ ಯಾರೇ ಕೆಲಸ ಕೇಳಿದರೂ ಕೊಡ್ತಿವಿ

01:52 PM Nov 07, 2020 | Suhan S |

ಯಳಂದೂರು: ಯರಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಉತ್ತಮಕೆಲಸಗಳು ನಡೆದಿವೆ. ಕೆಲಸವನ್ನು ಯಾರೇಕೇಳಿದರೂ ಕೊಡಲು ಪಂಚಾಯಿತಿಸಿದ್ಧವಿದೆ ಎಂದು ಪಿಡಿಒ ಮಮತಾ ತಿಳಿಸಿದರು.

Advertisement

ತಾಲೂಕಿನ ಯರಿಯೂರು ಗ್ರಾಮದ ವೀರಭದ್ರದೇಶ್ವರ ದೇಗುಲದ ಬಳಿ ಗುರುವಾರ ನಡೆದ ನರೇಗಾ ಸಾಮಾಜಿಕ ಲೆಕ್ಕ ತಪಾಸಣೆ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಮನೆ ನಿರ್ಮಿಸಿಕೊಂಡ ಫ‌ಲಾನುಭವಿಗಳಿಗೆ ಸರ್ಕಾರದಿಂದ ಅನುದಾನ ಬಂದ ತಕ್ಷಣ ನೀಡಲಾಗುವುದು. ಮುಂದಿನ ದಿನಗಳಲ್ಲಿ ಹೊಸ ಮನೆಗಳ ಆಯ್ಕೆಗೆ ವಾರ್ಡ್‌ ಹಾಗೂ ಗ್ರಾಮ ಸಭೆ ನಡೆಸಿ ಫ‌ಲಾನುಭವಿಗಳ ಆಯ್ಕೆ ಮಾಡಲಾಗುವುದು ಎಂದರು.

ನರೇಗಾ ತಾಲೂಕು ಸಂಯೋಜಕ ರಾಜ್‌ ಕುಮಾರ್‌ ಮಾತನಾಡಿ, ಯರಿಯೂರು ಗ್ರಾಪಂನಲ್ಲಿಕಳೆದ6 ತಿಂಗಳಲ್ಲಿ ನರೇಗಾ ಯೋಜನೆಯಡಿ 22,940 ಮಾನವ ದಿನಗಳ ಸೃಜನೆ ಮಾಡಲಾಗಿದ್ದು,ಕೂಲಿ ಪಾವತಿಸಲಾಗಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು131ಕಾಮಗಾರಿನಡೆಸಲಾಗಿದೆ. ಇದರಲ್ಲಿ ಗ್ರಾಪಂನ75, ತೋಟಗಾರಿಕಾ ಇಲಾಖೆಯಿಂದ 23 ಹಾಗೂ ಕೃಷಿ ಇಲಾಖೆಯಿಂದ36 ಕಾಮಗಾರಿ ನಡೆದಿವೆ. ಇದರಲ್ಲಿ57.71 ಲಕ್ಷ ರೂ.ಕೂಲಿ ಮೊತ್ತ ಹಾಗೂ 1.30 ಲಕ್ಷ ರೂ. ಸಾಮಗ್ರಿ ಮೊತ್ತ ಪಾವತಿಸ ಲಾಗಿದೆ ಎಂದರು. ಆಡಳಿತಾಧಿಕಾರಿ ತೋಟಗಾರಿಕಾ ಇಲಾಖೆಯ ರಾಜು, ನೋಡಲ್‌ ಅಧಿಕಾರಿ ನೀರಾವರಿ ಇಲಾಖೆಯ ನಿಂಗರಾಜು,ಕಾರ್ಯದರ್ಶಿ ಬಸವಣ್ಣ ಇದ್ದರು.

ಶಾಲೆ ಆರಂಭಿಸದಂತೆ ಆಗ್ರಹಿಸಿ ಪ್ರತಿಭಟನೆ :

ಚಾಮರಾಜನಗರ: ರಾಜ್ಯದಲ್ಲಿ ಕೋವಿಡ್ ಸೋಂಕು ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುವ ತನಕ ಶಾಲಾ-ಕಾಲೇಜು ಪ್ರಾರಂಭಿಸಬಾರದೆಂದು ಒತ್ತಾಯಿಸಿ ಕರ್ನಾಟಕ ಸೇನಾಪಡೆ ಕಾರ್ಯಕರ್ತರು ಪ್ರತಿಭಟಿಸಿದರು.

Advertisement

ಜಿಲ್ಲಾಡಳಿತ ಭವನದ ಆವರಣದಲ್ಲಿ ಜಮಾಯಿಸಿಕಾರ್ಯಕರ್ತರು, ಸರ್ಕಾರ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸುತ್ತೇವೆ ಎಂದು ಸಭೆಗಳನ್ನು ಮಾಡಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲಾ – ಕಾಲೇಜುಗಳನ್ನು ಈಗ ಆರಂಭಿಸಬಾರದು ಎಂದು ಒತ್ತಾಯಿಸಿದರು.

ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್‌ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಸೇನಾಪಡೆ ಅಧ್ಯಕ್ಷ ಚಾ.ರಂ. ಶ್ರೀನಿವಾಸಗೌಡ, ಕೆ.ಪುಟ್ಟಸ್ವಾಮಿಗೌಡ, ನಿಜಧ್ವನಿ ಗೋವೀಂದ ರಾಜು, ಗು.ಪುರುಷೋತ್ತಮ್‌, ಚಾ.ರಾ,ಕುಮಾರ್‌, ವೀರಭದ್ರ, ಸಿದ್ದರಾಜು, ತಾಂಡವಮೂರ್ತಿ, ದೊರೆ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next